ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿಯಲ್ಲಿ ಒಂದೇ ದಿನ ಕೊರನಾದಿಂದ 368 ಮಂದಿ ಸಾವು

|
Google Oneindia Kannada News

ರೋಮ್, ಮಾರ್ಚ್ 16: ಇಟಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 368 ಮಂದಿ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ.

ಇಟಲಿಯಲ್ಲಿ 80 ವರ್ಷ ದಾಟಿದವರಿಗೆ ಚಿಕಿತ್ಸೆ ನೀಡಲು ನಿರಾಕರಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಮಾರಕ ಕೊರೊನಾದಿಂದ ಸಾವು ಸಂಭವಿಸುವುದಿಲ್ಲ ಎಂದು ಹೇಳುವವರಿಗೂ ಇದು ಶಾಂಕಿಂಗ್ ನ್ಯೂಸ್ ಆಗಿದೆ.

ಕಲಬುರಗಿ ; ಮೃತಪಟ್ಟ ವೃದ್ಧನ ಕುಟುಂಬ ಸದಸ್ಯರಿಗೆ ಸೋಂಕಿಲ್ಲಕಲಬುರಗಿ ; ಮೃತಪಟ್ಟ ವೃದ್ಧನ ಕುಟುಂಬ ಸದಸ್ಯರಿಗೆ ಸೋಂಕಿಲ್ಲ

ಚೀನಾ ನಂತರ ಕೊರೊನಾ ವೈರಸ್ ಅತಿ ಹೆಚ್ಚು ತಾಂಡವವಾಡುತ್ತಿರುವ ಇಟಲಿಯಲ್ಲಿ ಭಾನುವಾರ ಒಂದೇ ದಿನ 368 ಮಂದಿ ಸಾವನ್ನಪ್ಪಿದ್ದಾರೆ. ಇದು ಕೊರೊನಾ ಕಾಣಿಸಿದ ನಂತರ ಯಾವುದೇ ದೇಶದಲ್ಲಿ ದಾಖಲಾಗಿರುವ ಒಂದು ದಿನದ ಅತಿ ಹೆಚ್ಚಿನ ಸಾವಿನ ಸಂಖ್ಯೆಯಾಗಿದೆ.

ಇಟಲಿಯಲ್ಲಿ ಭಾನುವಾರ 3590 ಪ್ರಕರಣಗಳು ಪತ್ತೆ

ಇಟಲಿಯಲ್ಲಿ ಭಾನುವಾರ 3590 ಪ್ರಕರಣಗಳು ಪತ್ತೆ

ಇಟಲಿಯಲ್ಲಿ ಭಾನುವಾರ 3590 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ದೇಶದ ಕೊರೊನಾ ಪೀಡಿತರ ಸಂಖ್ಯೆ 24,747ಕ್ಕೇರಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬರಲಿದೆ ಕೊರೊನಾ ಹಂತ 3,4

ಬರಲಿದೆ ಕೊರೊನಾ ಹಂತ 3,4

ವೈದ್ಯಕೀಯ ತಜ್ಞರ ಪ್ರಕಾರ ಕೊರೊನಾ ವೈರಸ್ ವ್ಯಾಧಿಯು 4 ಹಂತಗಳಲ್ಲಿ ಹರಡುತ್ತದೆ. ಒಂದು ಹಾಗೂ ಎರಡನೇ ಹಂತದಲ್ಲಿರುವ ಭಾರತವು ಮೂರು ಮತ್ತು ನಾಲ್ಕನೇ ಹಂತವನ್ನು ಆಹ್ವಾನಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುವುದು ತುರ್ತು ಅಗತ್ಯವಿದೆ. ಇದಕ್ಕಾಗಿ ಮುಂಜಾಗ್ರತಾ ಕ್ರಮ ಅನುಸರಿಸಲೇಬೇಕು.

ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ?ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ?

30 ದಿನಗಳಲ್ಲಿ ನಾಲ್ಕನೇ ಹಂತದಿಂದ ತಪ್ಪಿಸಿಕೊಳ್ಳಬೇಕು

30 ದಿನಗಳಲ್ಲಿ ನಾಲ್ಕನೇ ಹಂತದಿಂದ ತಪ್ಪಿಸಿಕೊಳ್ಳಬೇಕು

ಇನ್ನು 30 ದಿನಗಳಲ್ಲಿ 3ನೇ ಹಂತಕ್ಕೆ ಹೋಗುವುದನ್ನು ಭಾರತ ತಪ್ಪಿಕೊಳ್ಳಬೇಕು. ಕೊರೊನಾ ಪೀಡಿತ ಪ್ರದೇಶಗಳಿಂದ ಭಾರತಕ್ಕೆ ಆಗಮಿಸಿದವರಲ್ಲಿ ಸೋಂಕು ಪತ್ತೆಯಾದರೆ ಅದು ಒಂದನೇ ಹಂತ, ಆ ರೀತಿ ಬಂದವರಿಗೆ ಸ್ಥಳೀಯರಿಗೆ ಸೋಂಕು ತಗುಲಿದರೆ ಎರಡನೇ ಹಂತ. ಈಗಾಗಲೇ ಇದು ಕಂಡು ಬಂದಿದೆ. ಮೂರನೇ ಹಂತದಲ್ಲಿ ಸೋಂಕಿತ ವ್ಯಕ್ತಗಳಿಂದ ಇಡೀ ಸಮುದಾಯಕ್ಕೆ ಸೋಂಕು ತಗುಲಲಿದೆ. ಹೆಚ್ಚು ಪ್ರದೇಶಗಳಿಗೆ ಕೊರೊನಾ ಹಬ್ಬುತ್ತದೆ. ಈಗಾಗಲೇ ಚೀನಾ, ಇಟಲಿ ನಾಲ್ಕನೇ ಹಂತದಲ್ಲಿದೆ.

80 ವರ್ಷ ದಾಟಿದವರಿಗೆ ಇಟಲಿಯಲ್ಲಿ ಚಿಕಿತ್ಸೆ ಇಲ್ಲ

80 ವರ್ಷ ದಾಟಿದವರಿಗೆ ಇಟಲಿಯಲ್ಲಿ ಚಿಕಿತ್ಸೆ ಇಲ್ಲ

ಕೊರೊನಾ ವೈರಸ್‌ನಿಂದ ತತ್ತರಿಸಿರುವ ಇಟಲಿ, ಸೋಮಕಿತರಿಗೆ ಚಿಕಿತ್ಸೆ ನೀಡಲೂ ಒದ್ದಾಡುತ್ತಿದೆ. ಸೋಂಕಿತ ಸಂಖ್ಯೆ ಹೆಚ್ಚಾಗಿರುವ ಹನ್ನೆಲೆಯಲ್ಲಿ 80 ವರ್ಷ ದಾಟಿರುವ ಕೊರೊನಾ ಪೀಡಿತರಿಗೆ ತುರ್ತು ನಿಗಾ ಘಟಕದಲ್ಲಿ ಅವಕಾಶ ನಿರಾಕರಿಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Italy on Sunday reported 368 new deaths from the coronavirus outbreak as the country's death toll hit 1,809 while the number of positive cases rose to 24,747 from 21,157 on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X