ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಘನಘೋರ ಸ್ಥಿತಿಯಲ್ಲಿದ್ದ ಇಟಲಿಯಲ್ಲಿ ಸಾವಿನ ಸಂಖ್ಯೆ ಇಳಿಮುಖ

|
Google Oneindia Kannada News

ದೆಹಲಿ, ಏಪ್ರಿಲ್ 6: ಚೀನಾ ನಂತರ ಕೊರೊನಾ ವೈರಸ್‌ ದಾಳಿ ತ್ತರಿಸಿದ್ದ ದೇಶ ಇಟಲಿ. ನೋಡು ನೋಡುತ್ತಿದ್ದಂತೆ ಇಟಲಿಯಲ್ಲಿ ನರಬಲಿ ಆಗಿ ಹೋಯಿತು. ಸುಮಾರು ಹದಿನೈದು ಸಾವಿರ ಮಂದಿ ಕೊವಿಡ್ ರೋಗಕ್ಕೆ ಸಾವನ್ನಪ್ಪಿದರು. ಇದು ಸಹಜವಾಗಿ ಜಗತ್ತಿನ ಇತರೆ ದೇಶಗಳಿಗೆ ಆತಂಕ ಸೃಷ್ಟಿಸಿತ್ತು. ಇದೀಗ, ಕಳೆದ ಎರಡು ದಿನ ಅಂಕಿ ಅಂಶ ನೋಡಿದ್ರೆ ಇಟಲಿಯಲ್ಲಿ ಸಾವಿನ ಸಂಖ್ಯೆ ಇಳಿಮುಖವಾಗಿದೆ.

Recommended Video

ನಮಗೂ ಕೂಡ ಭಯವಾಗಿದೆ ಎಂದ ಸಲ್ಮಾನ್ ಖಾನ್ | Salman Khan | Oneindia Kannada

ಏಪ್ರಿಲ್ 5ನೇ ತಾರೀಖು ಇಟಲಿಯಲ್ಲಿ ಕೊರೊನಾ ಸೋಂಕಿನಿಂದ 525 ಜನರು ಮೃತಪಟ್ಟಿದ್ದಾರೆ. ಏಪ್ರಿಲ್ 4 ರಂದು 681 ಜನರು ಸಾವನ್ನಪ್ಪಿದ್ದಾರೆ. ಅದಕ್ಕೂ ಮುಂಚಿನ ದಿನಗಳಲ್ಲಿ ಸಾವಿನ ಸಂಖ್ಯೆ 700, 800, 900 ವರೆಗೂ ತಲುಪಿರುವ ದಾಖಲೆಗಳಿದೆ.

ಪಾಕಿಸ್ತಾನಕ್ಕೆ ಎಚ್ಚರಿಕೆ: ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರ ಸಾಧ್ಯತೆಪಾಕಿಸ್ತಾನಕ್ಕೆ ಎಚ್ಚರಿಕೆ: ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರ ಸಾಧ್ಯತೆ

ಕಳೆದ ಎರಡು ದಿನದಿಂದ ಇಟಲಿಯಲ್ಲಿ ಸಾವಿನ ಸಂಖ್ಯೆ ಇಳಿಮುಖವಾಗಿ ಸಾಗುತ್ತಿದೆ. ಇದು ಸ್ವಲ್ಪ ನಿಟ್ಟುಸಿರುವ ಬಿಡುವಂತೆ ಮಾಡಿದೆ. ಆದರೆ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಅಷ್ಟಾಗಿ ಬದಲಾವಣೆ ಆಗುತ್ತಿಲ್ಲ.

Italy Records Lowest Coronavirus Death In Last Two Days

ಏಪ್ರಿಲ್ 5 ರಂದು 4316 ಜನರಲ್ಲಿ ಸೋಂಕು ದೃಢಪಟ್ಟಿದೆ. ಏಪ್ರಿಲ್ 4 ರಂದು 4805 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದಕ್ಕೂ ಹಿಂದಿನ ದಿನಗಳಲ್ಲಿಯೂ ದಿನದ ಲೆಕ್ಕಾಚಾರ ನೋಡಿದ್ರೆ ಇದೇ ಅಂಕಿ ಅಂಶಗಳು ಕಂಡು ಬಂದಿದ್ದವು.

ಇಟಲಿಯಿಂದ ಏರ್‌ಲಿಫ್ಟ್‌ ಮಾಡಿದ್ದ ಭಾರತೀಯರಿಗೆ ಕೊರೊನಾ ಸೋಂಕಿಲ್ಲಇಟಲಿಯಿಂದ ಏರ್‌ಲಿಫ್ಟ್‌ ಮಾಡಿದ್ದ ಭಾರತೀಯರಿಗೆ ಕೊರೊನಾ ಸೋಂಕಿಲ್ಲ

ಇಟಲಿಯಲ್ಲಿ ಒಟ್ಟು 128,948 ಜನರಿಗೆ ಕೊರೊನಾ ಸೋಂಕು ಹರಡಿದೆ. ಅದರಲ್ಲಿ 15,887 ಜನರು ಮೃತಪಟ್ಟಿದ್ದಾರೆ. 21,815 ಜನರು ಕೊವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ಜಗತ್ತಿನಲ್ಲಿ ಅತಿ ಹೆಚ್ಚು ಸಾವು ಕಂಡ ದೇಶ ಇಟಲಿಯಾಗಿದೆ.

English summary
Italy records the lowest Coronavirus death toll in over two weeks: AFP news agency quoting officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X