ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿಯಲ್ಲಿ 60 ವರ್ಷದ ಒಳಗಿನವರಿಗೆ ಅಸ್ಟ್ರಾಜೆನೆಕಾ ಲಸಿಕೆ ನಿಷೇಧ

|
Google Oneindia Kannada News

ರೋಮ್, ಜೂನ್ 12: ಇಟಲಿಯಲ್ಲಿ 60 ವರ್ಷದೊಳಗಿನವರಿಗೆ ಅಸ್ಟ್ರಾಜೆನೆಕಾ ಲಸಿಕೆ ನೀಡದಂತೆ ನಿಷೇಧ ಹೇರಲಾಗಿದೆ. ಯುವತಿಯೊಬ್ಬಳು ಲಸಿಕೆ ಸ್ವೀಕರಿಸಿದ ಬಳಿಕ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಲಸಿಕೆ ನೀಡದಂತೆ ಸೂಚಿಸಲಾಗಿದೆ.

ಮೇ 25 ರಂದು ಅಸ್ಟ್ರಾಜೆನೆಕಾದ ಲಸಿಕೆ ಪಡೆದಿದ್ದ ಕ್ಯಾಮಿಲಾ ಕ್ಯಾನೆಫೆ ಎಂಬ 18 ವರ್ಷದ ಯುವತಿ ಮೃತಪಟ್ಟಿದ್ದರು. ಈ ವಿಚಾರ ಅಲ್ಲಿನ ಮಾಧ್ಯಮಗಳು ಹಾಗೂ ರಾಜಕೀಯ ವಲಯಗಳಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿತ್ತು.

ಲಸಿಕೆಗಳ ನಡುವಿನ ಅಂತರ ಕಡಿಮೆಗೊಳಿಸುವ ಬಗ್ಗೆ ಕೇಂದ್ರ ಹೇಳಿದ್ದಿಷ್ಟು!ಲಸಿಕೆಗಳ ನಡುವಿನ ಅಂತರ ಕಡಿಮೆಗೊಳಿಸುವ ಬಗ್ಗೆ ಕೇಂದ್ರ ಹೇಳಿದ್ದಿಷ್ಟು!

ಆಂಗ್ಲೋ-ಸ್ವೀಡಿಶ್ ಕಂಪನಿಯ ಲಸಿಕೆಯನ್ನು ಆತಂಕಗಳ ಹೊರತಾಗಿಯೂ ಎಲ್ಲಾ ವಯಸ್ಸಿನವರಿಗೆ ಬಳಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಲಸಿಕೆ ಪಡೆದ ಯುವತಿಯು ರಕ್ತ ಹೆಪ್ಪುಗಟ್ಟಿ ಮೃತಪಟ್ಟ ಹಿನ್ನೆಲೆಯಲ್ಲಿ ಇಟಲಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.

Italy Halts AstraZeneca Vaccine For Under 60s

ಅಸ್ಟ್ರಾಜೆನೆಕಾದ ಮೊದಲ ಡೋಸ್ ಪಡೆದ 60 ವರ್ಷದೊಳಗಿನ ಜನರಿಗೆ ಎರಡನೇ ಡೋಸ್ವೆಳೆ ಬೇರೆ ಲಸಿಕೆ ನೀಡುವುದಾಗಿ ಸರ್ಕಾರದ ಮುಖ್ಯ ವೈದ್ಯಕೀಯ ಸಲಹೆಗಾರ ಫ್ರಾಂಕೊ ಲೊಕೊಟೆಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಟೀಕೆಗಳ ಹಿನ್ನೆಲೆಯಲ್ಲಿತನ್ನ ನಿರ್ಧಾರ ಪ್ರಕಟಿಸಿರುವ ಇಟಲಿ ಸರ್ಕಾರ, ಇನ್ನುಮುಂದೆ 60 ವರ್ಷ ಮೇಲ್ಪಟ್ಟಿವರಿಗೆ ಮಾತ್ರವೇ ಅಸ್ಟ್ರಾಜೆನೆಕಾ ಲಸಿಕೆ ನೀಡುವುದಾಗಿ ತಿಳಿಸಿದೆ. ಆದರೆ ಇಷ್ಟೆಲ್ಲಾ ಆರೋಪ ಬಂದಿದ್ದರೂ ಅಸ್ಟ್ರಾಜೆನೆಕಾ ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Recommended Video

Virat ಪಡೆಗೆ ಅಭ್ಯಾಸದ ಪಂದ್ಯದಿಂದ ನಿರಾಸೆ! | Oneindia Kannada

English summary
The Italian government said on Friday it was restricting the use of the AstraZeneca Covid-19 vaccine to people over the age of 60, after a teenager who had received the shot died from a rare form of blood clotting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X