ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿ: ಮೇಲ್ಸೇತುವೆ ಕುಸಿದು 39 ಮಂದಿ ಸಾವು

|
Google Oneindia Kannada News

ರೋಮ್, ಆಗಸ್ಟ್ 16: ಇಟಲಿಯ ಜೆನೊವಾದಲ್ಲಿ ಮೋಟಾರ್‌ವೇ ಸೇತುವೆಯೊಂದು ಕುಸಿದು ಬಿದ್ದು ಕನಿಷ್ಠ 39 ಮಂದಿ ಸಾವಿಗೀಡಾಗಿದ್ದಾರೆ.

ದುರಂತ ಸಂಭವಿಸುತ್ತಿದ್ದಂತೆಯೇ ಇಟಲಿಯ ಪ್ರಧಾನಿ ಜುಸೆಪ್ಪೆ ಕಾಂಟಿ 12 ತಿಂಗಳ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ಹೆಲಿಕಾಪ್ಟರ್ ಬ್ಲೇಡ್ ಗೆ ಸಿಲುಕಿ ನೇಪಾಳದಲ್ಲಿ ಭಾರತೀಯ ಯಾತ್ರಿಕ ಸಾವುಹೆಲಿಕಾಪ್ಟರ್ ಬ್ಲೇಡ್ ಗೆ ಸಿಲುಕಿ ನೇಪಾಳದಲ್ಲಿ ಭಾರತೀಯ ಯಾತ್ರಿಕ ಸಾವು

ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ಪತ್ತೆ ಹಾಗೂ ರಕ್ಷಣಾ ಕಾರ್ಯಾಚರಣೆ ಸುಗಮವಾಗಿ ನಡೆಯಲು ಐದು ಮಿಲಿಯನ್ ಯೂರೋ ಬಿಡುಗಡೆ ಮಾಡಿರುವುದಾಗಿ ಕಾಂಟಿ ಪ್ರಕಟಿಸಿದ್ದಾರೆ.

ಕುಸಿದ ಮೊರಾಂಡಿ ಬ್ರಿಡ್ಜ್‌ನ ನಿರ್ವಹಣೆಗೆ ಆಟೊಸ್ಟ್ರೇಡ್ ಎಂಬ ನಿರ್ಮಾಣ ಕಂಪೆನಿ ಹೊಣೆಗಾರನಾಗಿದ್ದು, ಅದಕ್ಕೆ ನೀಡಲಾಗಿದ್ದ ಎಲ್ಲ ಸೌಲಭ್ಯಗಳನ್ನು ಹಿಂದಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

italy genoa bridge collapsed 39 dead

ಆಧುನಿಕ ಸಮಾಜದಲ್ಲಿ ಇಂತಹ ದುರಂತಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಟಿ ಹೇಳಿದ್ದಾರೆ.

ಬುಧವಾರ ಸಂಜೆಯವರೆಗೂ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಅವಶೇಷಗಳ ಅಡಿ ಇನ್ನಷ್ಟು ಮಂದಿ ಬದುಕುಳಿದಿರುವ ಬಗ್ಗೆ ಆಶಯ ಹೊಂದಲಾಗಿತ್ತು.

ಕಳೆನಾಶಕದಿಂದ ರೈತನಿಗೆ ಕ್ಯಾನ್ಸರ್: ಮಾನ್ಸೆಂಟೊಗೆ 9 ಮಿಲಿಯನ್ ದಂಡಕಳೆನಾಶಕದಿಂದ ರೈತನಿಗೆ ಕ್ಯಾನ್ಸರ್: ಮಾನ್ಸೆಂಟೊಗೆ 9 ಮಿಲಿಯನ್ ದಂಡ

ಸೇತುವೆಯ ಅಡಿ 30ಕ್ಕೂ ಹೆಚ್ಚು ವಾಹನಗಳು ಮತ್ತು ಭಾರಿ ಸರಕು ಸಾಗಣೆ ವಾಹನಗಳು ಸಿಲುಕಿಕೊಂಡಿದ್ದು, 13 ಮಂದಿ ಗಾಯಗೊಂಡಿದ್ದಾರೆ.

ಈ ಅವಘಡಕ್ಕೆ ಭಾರಿ ಪ್ರಮಾಣದ ಗಾಳಿ ಸಹಿತ ಮಳೆಯೇ ಕಾರಣ ಎಂದು ಆರಂಭದಲ್ಲಿ ಅಧಿಕಾರಿಗಳು ಹೇಳಿದ್ದರು. ಆದರೆ, ಸೇತುವೆಯ ರಚನಾತ್ಮಕ ವೈಫಲ್ಯಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕಾಂಟಿ ಹೇಳಿದ್ದಾರೆ.

'ಅಪ್ಪಾ, ಕ್ಷಮಿಸು' ಎಂದು ಬೇಡಿದರೂ ಮಕ್ಕಳ ಕತ್ತು ಕತ್ತರಿಸಿದ ಕಟುಕ'ಅಪ್ಪಾ, ಕ್ಷಮಿಸು' ಎಂದು ಬೇಡಿದರೂ ಮಕ್ಕಳ ಕತ್ತು ಕತ್ತರಿಸಿದ ಕಟುಕ

ಇದರಿಂದ ಮೊರಾಂಡಿ ಸೇತುವೆಯ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾಗಿದೆ. ಸೇತುವೆ ಕುಸಿತಕ್ಕೆ ಕಾರಣಗಳ ಬಗ್ಗೆ ಗಂಭೀರ ಪರಿಶೀಲನೆ ನಡೆಸಬೇಕಾಗಿದೆ ಎಂದು ಅಧ್ಯಕ್ಷ ಸರ್ಗಿಯೊ ಮಟ್ಟರೆಲ್ಲ ಹೇಳಿದ್ದಾರೆ.

1968ರಲ್ಲಿ ಸಂಚಾರಕ್ಕೆ ಮುಕ್ತವಾಗಿದ್ದ ಮೋಟಾರ್‌ವೇ ಸೇತುವೆ, ಜೆನೊವಾ ನಗರದ ಜನರು ಮತ್ತು ಪ್ರವಾಸಿಗರ ಓಡಾಟಕ್ಕೆ ಪ್ರಮುಖ ಹೆದ್ದಾರಿ ಮಾರ್ಗವಾಗಿದೆ. ಇದು ಮೆಡಿಟರೇನಿಯನ್ ಪ್ರದೇಶ ಸೇರಿದಂತೆ ಫ್ರಾನ್ಸ್ ಪಶ್ಚಿಮದ ಕರಾವಳಿ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.

English summary
At least 39 people have died in the bridge collapse tragedy in Genoa of Italy. Italian Prime Minister Giuseppe Conte on Wednesday declared a 12 month state of emergency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X