ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಇಟಲಿ ಪ್ರಧಾನಿ ಮಾರಿಯೋ ದ್ರಾಘಿ ರಾಜೀನಾಮೆ

|
Google Oneindia Kannada News

ರೋಮ್, ಜುಲೈ 21: ಇಟಲಿಯ ಏಕೀಕೃತ ಸರ್ಕಾರದ ಚುನಾಯಿತ ಮುಖ್ಯಸ್ಥರಾಗಿ ನೇಮಕಗೊಂಡ ಒಂದೂವರೆ ವರ್ಷದ ನಂತರ, ಮಾರಿಯೋ ಡ್ರಾಘಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಮಾರಿಯೋ ದ್ರಾಘಿ ಇಟಲಿ ಅಧ್ಯಕ್ಷ ಸೆರ್ಗಿಯೋ ಮಟ್ಟರೆಲ್ಲಾಗೆ ರಾಜೀನಾಮೆ ಸಲ್ಲಿಸಿದರು.

ಮಾರಿಯೋ ದ್ರಾಘಿ ಅವರ ಒಕ್ಕೂಟ ಸರ್ಕಾರವು ಪತನಗೊಂಡ ನಂತರ, ದೇಶವು ರಾಜಕೀಯ ಪ್ರಕ್ಷುಬ್ಧತೆಗೆ ದೂಡಿದೆ ಮತ್ತು ಆರ್ಥಿಕತೆ ತೀರ ಕುಸಿದಿದೆ. ಇನ್ನು ಬುಧವಾರ ರಾತ್ರಿ ವಿಶ್ವಾಸ ಮತ ಯಾಚನೆ ವೇಳೆ ಅವರದ್ದೇ ಸರ್ಕಾರದಲ್ಲಿನ ಮೂರು ಪಕ್ಷಗಳು ನಿರಾಕರಿಸಿದ್ದವು.

ರಾಜೀನಾಮೆಯನ್ನು ಅಂಗೀಕರಿಸಿರುವ ಇಟಲಿ ಅಧ್ಯಕ್ಷ ಮುಂದಿನ ಚುನಾವಣೆಗಳ ತನಕ ಉಸ್ತುವಾರಿ ನಾಯಕರಾಗಿ ಉಳಿಯುವಂತೆ ಕೇಳಿಕೊಂಡಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಆರಂಭಿಕ ಚುನಾವಣೆಗೆ ಕರೆ ನೀಡುತ್ತಾರೆ. ಅಲ್ಲಿಯವರೆಗೆ ದ್ರಾಘಿ ಅವರು ಸರ್ಕಾರದ ಮುಖ್ಯಸ್ಥರಾಗಿ ಮುಂದುವರಿಯಬಹುದು.

Italian Prime Minister Mario Draghi resigns

ಸಿಲ್ವಿಯೊ ಬರ್ಲುಸ್ಕೋನಿಯ ಸೆಂಟರ್-ರೈಟ್ ಫೋರ್ಜಾ ಇಟಾಲಿಯಾ, ಮ್ಯಾಟಿಯೊ ಸಾಲ್ವಿನಿಯ ಆಂಟಿ ಮೈಗ್ರೆಂಟ್ ಲೀಗ್ ಮತ್ತು ಪಾಪುಲಿಸ್ಟ್‌ ಫೈವ್ ಸ್ಟಾರ್ ಮೂವ್ಮೆಂಟ್ ಮೂರು ಪಕ್ಷಗಳು
ಅವರನ್ನು ಬೆಂಬಲಿಸಿಲ್ಲ. ಒಟ್ಟಾಗಿ ಕೆಲಸ ಮಾಡುವುದು ಇನ್ನು ಮುಂದೆ ಸಾಧ್ಯವಿಲ್ಲ ಎಂದು ಈ ಪಕ್ಷಗಳು ವಿಶ್ವಾಸ ಮತದಿಂದ ಹೊರಗುಳಿಯಲು ನಿರ್ಧರಿಸಿದ್ದವು. ಇದು ಪ್ರಧಾನಿ ದಾಘ್ರಿಗೆ ದೊಡ್ಡ ಪೆಟ್ಟು ನೀಡಿತು.

Recommended Video

ಮೆಟ್ರೋ ನಿಲ್ದಾಣದಲ್ಲಿ ರಾರಾ ರಕ್ಮಮ್ಮ ಹಾಡಿಗೆ ಕುಣಿದ ಹುಡುಗಿಗೆ ಈಗ ಸಂಕಷ್ಟ | *India | Oneindia Kannada

74 ವರ್ಷದ ಮಾರಿಯೋ ದ್ರಾಘಿ ಇಟಲಿಯಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನ ಮುಖ್ಯಸ್ಥರಾಗಿ ಅವರು ಯೂರೋಜೋನ್ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ಅವರನ್ನು ಸೂಪರ್ ಮಾರಿಯೋ ಎಂದು ಕರೆಯಲಾಗುತ್ತಿತ್ತು.

ಕೊರೊನಾ ಸಾಂಕ್ರಾಮಿಕ ಮತ್ತು ಅನಾರೋಗ್ಯದ ಜೊತೆಗೆ ಆರ್ಥಿಕ ಪಥನದೊಂದಿಗೆ ಇಟಲಿ ಸೆಣಸಾಡುತ್ತಿರುವಾಗ 2021 ರಲ್ಲಿ ಮಾರಿಯೋ ಡ್ರಾಘಿ ಪ್ರಧಾನ ಮಂತ್ರಿ ಸ್ಥಾನಕ್ಕೆ ಏರಿದ್ದರು.

English summary
Italian prime minister Mario Draghi resigned on Thursday after key coalition allies boycotted a confidence vote. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X