ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಪುಟಗಳ ನಿಧನವಾರ್ತೆ ಪ್ರಕಟಿಸಿದ ಇಟಲಿಯ ದಿನಪತ್ರಿಕೆ!

|
Google Oneindia Kannada News

ಚೀನಾ ಹೊರತು ಪಡಿಸಿದರೆ ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಹೆಚ್ಚು ಹೈರಾಣಾಗಿರುವ ದೇಶ ಇಟಲಿ. ಕಳೆದ 48 ಗಂಟೆಗಳಲ್ಲಿ ಇಟಲಿಯಲ್ಲಿ ಡೆಡ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ 717 ಮಂದಿ ಸಾವನ್ನಪ್ಪಿದ್ದಾರೆ.

Recommended Video

Is Brandy And Beer The Best Medicine For Coronavirus | Oneindia Kannada

ಇತರೆ ದೇಶಗಳಿಗೆ ಹೋಲಿಸಿದರೆ, ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಯೂರೋಪ್ ನಲ್ಲಿ ಅತಿ ಹೆಚ್ಚು ಸಾವು ಸಂಭವಿಸುತ್ತಿದೆ. ವಿಶ್ವದ ಸಾಂಕ್ರಾಮಿಕ ಪಿಡುಗು ಕೊರೊನಾ ವೈರಸ್ ನ ಕೇಂದ್ರ ಸ್ಥಾನ ಇದೀಗ ಯೂರೋಪ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

ಕೊರೊನಾ ಹೊಡೆತಕ್ಕೆ ಕಂಗೆಟ್ಟ ಯೂರೋಪ್: ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಸಾವುಕೊರೊನಾ ಹೊಡೆತಕ್ಕೆ ಕಂಗೆಟ್ಟ ಯೂರೋಪ್: ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಸಾವು

ಇಟಲಿಯಲ್ಲಿ ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದಾಗಿ 2158 ಮಂದಿ ಮೃತಪಟ್ಟಿದ್ದಾರೆ. ಈ ನಡುವೆ ಇಟಲಿಯ ದಿನಪತ್ರಿಕೆಯೊಂದು ಬರೋಬ್ಬರಿ 10 ಪುಟಗಳ ನಿಧನವಾರ್ತೆ ಪ್ರಕಟ ಮಾಡಿದೆ.

Italian Newspaper Prints 10 Pages Of Obituaries

ಇಟಲಿಯ Bergamo ಎಂಬ ದಿನಪತ್ರಿಕೆಯಲ್ಲಿ ಫೆಬ್ರವರಿ 9 ರಂದು ಒಂದುವರೆ ಪುಟಕ್ಕೆ ಮಾತ್ರ ಸೀಮಿತವಾಗಿದ್ದ ನಿಧನವಾರ್ತೆ ಮಾರ್ಚ್ 13 ರ ಹೊತ್ತಿಗೆ 10 ಪುಟಗಳು ತುಂಬಿವೆ.

ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ಇಟಲಿ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಆಹಾರ ಮತ್ತು ಔಷಧಿ ಅಂಗಡಿಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲವೂ ಬಂದ್ ಆಗಿದೆ. ಜಿಮ್, ಮ್ಯೂಸಿಯಂ, ನೈಟ್ ಕ್ಲಬ್ ಗಳೆವಕ್ಕೂ ಬಾಗಿಲು ಹಾಕಲಾಗಿದೆ.

ಇಟಲಿಯ ಅಂಕಿಅಂಶ:

ಕೋವಿಡ್-19 ಪಾಸಿಟಿವ್ ಒಟ್ಟು ಪ್ರಕರಣ: 27,980

ಕೊರೊನಾ ಸೋಂಕಿನಿಂದ ಒಟ್ಟು ಸಾವು: 2158

ಒಟ್ಟು ಗುಣಮುಖರಾದವರು: 2749

English summary
Italian Newspaper Bergamo prints 10 pages of Obituaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X