ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್‌ನಲ್ಲಿ ರಾಜಕೀಯ ಅಸ್ಥಿರತೆ: ವರ್ಷದಲ್ಲೇ 3ನೇ ಚುನಾವಣೆ?

|
Google Oneindia Kannada News

ಇಸ್ರೇಲ್, ನವೆಂಬರ್ 21:ಇಸ್ರೇಲ್‌ನಲ್ಲಿ ರಾಜಕೀಯ ಅಸ್ಥಿರತೆ ಮುಂದುವರೆದಿದ್ದು, ಸರ್ಕಾರ ರಚಿಸಲು ಬ್ಲ್ಯೂ ಅಂಡ್ ವೈಟ್ ಪಕ್ಷ ವಿಫಲವಾಗಿದೆ.

ಇಸ್ರೇಲ್ ಅಧ್ಯಕ್ಷರ ಆಹ್ವಾನದ ಮೇರೆಗೆ ಕಳೆದೊಂದು ತಿಂಗಳಿನಿಂದ ಬ್ಯೂ ಅಂಡ್ ವೈಟ್ ಪಕ್ಷವು ಸರ್ಕಾರ ರಚನೆಗೆ ಕಸರತ್ತು ನಡೆಸಿತ್ತು.

ಆದರೆ ಬ್ಲ್ಯೂ ಅಂಡ್ ವೈಟ್ ಪಕ್ಷಕ್ಕೆ ಬೆಂಬಲ ನೀಡಲು ಲಿಕುಡ್ ಅಥವಾ ಉಳಿದ ಸಣ್ಣಪುಟ್ಟ ಪಕ್ಷಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ಸೋತಿರುವುದಾಗಿ ಇಸ್ರೇಲ್ ಅಧ್ಯಕ್ಷರಿಗೆ ಬ್ಲ್ಯೂ ಅಂಡ್ ವೈಟ್ ಪಕ್ಷದ ನಾಯಕ ಬೆನ್ನಿ ಗ್ಯಾಂಟ್ಸ್ ತಿಳಿಸಿದ್ದಾರೆ.

benny

ಹಾಲಿ ಪ್ರಧಾನಿ ಹಾಗೂ ಬಲಪಂಥೀಯ ಲಿಕುಡ್ ಪಕ್ಷದ ನಾಯಕ ಬೆಂಜಮಿನ್ ನೇತನ್ಯಾಹು, ನಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದರಿಂದ ಒಂದೇ ವರ್ಷದಲ್ಲಿ ಸತತ ಮೂರನೇ ಚುನಾವಣೆಯತ್ತ ಇಸ್ರೇಲ್ ಮುಖ ಮಾಡಿದೆ.

ಇಸ್ರೇಲ್ ಮದ್ಯ ಕಂಪೆನಿಯಿಂದ ಮಹಾತ್ಮ ಗಾಂಧಿಗೆ ಅವಮಾನ, ಕ್ಷಮೆ ಯಾಚನೆಇಸ್ರೇಲ್ ಮದ್ಯ ಕಂಪೆನಿಯಿಂದ ಮಹಾತ್ಮ ಗಾಂಧಿಗೆ ಅವಮಾನ, ಕ್ಷಮೆ ಯಾಚನೆ

ಇದಕ್ಕೂ ಮುನ್ನ ಸರ್ಕಾರ ರಚನೆ ಅಸಾಧ್ಯ ಎಂದು ಬೆಂಜಮಿನ್ ನೇತನ್ಯಾಹು ಕೂಡ ಅಧ್ಯಕ್ಷರಿಗೆ ತಿಳಿಸಿದ್ದರು.ಕಳೆದ ಎರಡೂ ಚುನಾವಣೆಯಲ್ಲಿ ಇಸ್ರೇಲ್ ಜನತೆ ಅತಂತ್ರ ಸಂಸತ್‌ನ್ನು ರಚಿಸಿದ್ದಾರೆ.

ಯಾವುದೇ ಪಕ್ಷಕ್ಕೆ ಬಹುಮತ ನೀಡಲಿಲ್ಲ. ಹಿಂದಿನ ಎರಡೂ ಚುನಾವಣೆಯಲ್ಲೂ ಲಿಕುಡ್ ಹಾಗೂ ವೈಟ್‌ ಅಂಡ್ ಬ್ಲ್ಯೂ ಪಕ್ಷಗಳು 30 ಸೀಟುಗಳನ್ನು ಗೆದ್ದಿದ್ದವು.

English summary
Isrel Seemed to be headed for the third round of election under a year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X