ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್ ಸರ್ಕಾರ ಪತನ: ಹೊಸ ಚುನಾವಣೆಗೆ ನಾಂದಿ, ಎರಡು ವರ್ಷದಲ್ಲಿ ನಾಲ್ಕನೇ ಚುನಾವಣೆ!

|
Google Oneindia Kannada News

ಜೆರುಸಲೆಂ, ಡಿಸೆಂಬರ್ 23: ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್‌ ಸರ್ಕಾರ ನಾಲ್ಕನೇ ಬಾರಿಗೆ ಪತನಗೊಂಡಿದ್ದು, ದೇಶದಲ್ಲಿ ಮತ್ತೊಮ್ಮೆ ಅವಧಿಗೂ ಮುನ್ನ ಚುನಾವಣೆ ಎದುರಾಗಿದೆ.

ಮಂಗಳವಾರ ಮಧ್ಯರಾತ್ರಿಯಲ್ಲಿ ಇಸ್ರೇಲ್ ಸಂಸತ್ತು ತಾನಾಗಿಯೇ ವಿಸರ್ಜನೆಗೊಂಡಿತು. ಪ್ರಧಾನಿ ಬೆಂಜಮಿನ್ ನೆತನ್ಯಾಹು ಏಳು ತಿಂಗಳ ಹಿಂದೆ ಪ್ರಮುಖ ಎದುರಾಳಿ ಬೆನ್ನಿಗಾಂಟ್ಜ್‌ ಅವರ ಪಕ್ಷದ ಸಹಕಾರದೊಂದಿಗೆ ಸರ್ಕಾರ ರಚಿಸಿದ್ದರು. ಆದರೆ ಬೆಂಜಮಿನ್ ನೇತನ್ಯಾಹು ಅವರ ಲಿಕುಡ್ ಪಾರ್ಟಿ ಮತ್ತು ಗಾಂಟ್ಜ್‌ ನೇತೃತ್ವದ ಬ್ಲೂ ಆ್ಯಂಡ್ ವೈಟ್ ಪಾರ್ಟಿ ಮೈತ್ರಿ ಸರ್ಕಾರವು ಕಿತ್ತಾಟದಿಂದಲೇ ಮುರಿದುಬಿದ್ದಿದೆ.

ಗುಂಡಿನ ದಾಳಿಯಲ್ಲಿ ಇರಾನ್‌ನ ಪ್ರಮುಖ ಅಣು ವಿಜ್ಞಾನಿ ಹತ್ಯೆ: ಇಸ್ರೇಲ್ ಕೈವಾಡ ಆರೋಪಗುಂಡಿನ ದಾಳಿಯಲ್ಲಿ ಇರಾನ್‌ನ ಪ್ರಮುಖ ಅಣು ವಿಜ್ಞಾನಿ ಹತ್ಯೆ: ಇಸ್ರೇಲ್ ಕೈವಾಡ ಆರೋಪ

2020ರ ಬಜೆಟ್ ಅನುಮೋದನೆಗೆ ನೀಡಲಾಗಿದ್ದ ಕಾನೂನಾತ್ಮಕ ಗಡುವು ಮುಕ್ತಾಯವಾದ ಬೆನ್ನಲ್ಲೇ ಸಂಸತ್ ವಿಸರ್ಜನೆಯಾಗಿದೆ. ಹಣಕಾಸು ಖಾತೆಯನ್ನು ನೆತನ್ಯಾಹು ಪಕ್ಷ ನಿಭಾಯಿಸಿತ್ತು ಮತ್ತು ಬಜೆಟ್ ಮಂಡಿಸಲು ನಿರಾಕರಿಸಿತ್ತು.

Israels Government Collapses: Fourth Election In 2 Years

''ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅನಗತ್ಯ ಚುನಾವಣೆಗಳಿಗೆ ನಮ್ಮನ್ನು ಎಳೆದರು ಎಂದು ನೆತನ್ಯಾಹು ಟೀಕಿಸಿದ್ದಾರೆ. ಶನಿವಾರ ಸಂಜೆ ಕೋವಿಡ್ -19 ಲಸಿಕೆ ಪಡೆದ ಮೊದಲ ಇಸ್ರೇಲಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಮಗೆ ಚುನಾವಣೆ ಬೇಡ ಮತ್ತು ನಾವು ಅದರ ವಿರುದ್ಧ ಮತ ಚಲಾಯಿಸಿದ್ದೇವೆ. ಆದರೆ ನಾವು ಚುನಾವಣೆಗಳಿಗೆ ಹೆದರುವುದಿಲ್ಲ, ಏಕೆಂದರೆ ನಾವು ಗೆಲ್ಲುತ್ತೇವೆ'' ಎಂದು ನೆತನ್ಯಾಹು ಹೇಳಿದ್ದಾರೆ.

ನೆತನ್ಯಾಹು ಎದುರಿಸುತ್ತಿರುವ ಲಂಚ, ಮೋಸ, ಭ್ರಷ್ಟಾಚಾರದ ಆರೋಪಗಳನ್ನು ಉಲ್ಲೇಖಿಸುತ್ತಾ ಗ್ಯಾಂಟ್ಜ್ ಹೀಗೆ ''ಪ್ರಧಾನ ಮಂತ್ರಿಯು ತನ್ನದೇ ವಿಚಾರಣೆಯಲ್ಲಿ ಮುಳುಗಿದ್ದಾನೆ ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲ ಎಂದು ನಾನು ಹೇಳಲು ವಿಷಾದಿಸುತ್ತೇನೆ ಮತ್ತು ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವ ಬದಲು ಇಡೀ ದೇಶವನ್ನು ಅನಿಶ್ಚಿತತೆಯ ಅವಧಿಗೆ ಎಳೆದಿದ್ದಾರೆ " ಎಂದು ಆರೋಪಿಸಿದ್ದಾರೆ.

ಕಳೆದ ಎರಡು ವರ್ಷದಲ್ಲಿ ಮೂರು ಅನಿರ್ದಿಷ್ಟ ಚುನಾವಣೆಗಳ ನಂತರ ಮತ್ತು ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಮೊದಲ ಅಲೆಯೊಂದಿಗೆ, ಗ್ಯಾಂಟ್ಜ್ ಏಪ್ರಿಲ್‌ನಲ್ಲಿ ನೆತನ್ಯಾಹು ಪಕ್ಷಕ್ಕೆ ಕೈ ಜೋಡಿಸಲು ಒಪ್ಪಿಕೊಂಡರು. ಇದನ್ನು "ತುರ್ತು" ಸಮ್ಮಿಶ್ರ ಸರ್ಕಾರ ಎಂದು ಕರೆಯಲಾಗಿದೆ.

English summary
The Israeli government collapsed on Tuesday at midnight (17.00 EST) local time after the country's parliament failed to meet a deadline for passage of the 2020 and 2021 budgets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X