ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ನಾಯಕನ ಹೆಣ ಉರುಳಿಸಿತು ಇಸ್ರೇಲ್ ಸೇನೆಯ ರಾಕೆಟ್..!

|
Google Oneindia Kannada News

ಇಸ್ರೇಲ್ ರೊಚ್ಚಿಗೆದ್ದಿದೆ, ತನ್ನ ಮೇಲೆ ಕೈಯಿಟ್ಟ ಒಬ್ಬೊಬ್ಬ ಉಗ್ರನಿಗೂ ನರಕ ತೋರಿಸಬೇಕು ಎಂದು ಪ್ರತಿಜ್ಞೆ ಮಾಡಿದೆ. ಇದೇ ಕಾರಣಕ್ಕೆ ಹಮಾಸ್ ಉಗ್ರರ ಗ್ಯಾಂಗ್‌ನ ಹುಡುಕಿ ಹುಡುಕಿ ಹೊಸಕಿ ಹಾಕುತ್ತಿದೆ ಇಸ್ರೇಲ್.

Recommended Video

Israeli ಸೇನೆಯ ಆರ್ಭಟಕ್ಕೆ ಉಗ್ರರ ಲೀಡರ್ ಮಟಾಶ್ | Oneindia Kannada

ಹೀಗೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ, ಉಗ್ರ ಸಂಘಟನೆ ಕಮಾಂಡರ್‌ ಹಸ್ಸಾಮ್‌ ಅಬು ಹರ್‌ಬೀದ್‌ ಹತ್ಯೆಯಾಗಿದ್ದಾನೆ. ಇಸ್ರೇಲ್ ಸೇನೆ ಗಾಜಾ ಪಟ್ಟಿಯ ಹಲವೆಡೆ ವೈಮಾನಿಕ ದಾಳಿ ನಡೆಸಿದೆ. ಉಗ್ರರ ರಕ್ಷಣೆಗೆ ನಿರ್ಮಿಸಿದ್ದ 15 ಕಿ.ಮೀ ಉದ್ದದ ಸುರಂಗ ನಾಶವಾಗಿ ಹೋಗಿದೆ.

ಹಾಗೇ ಹಮಾಸ್ ಉಗ್ರರ ಮನೆಗಳು ಕೂಡ ಪೀಸ್ ಪೀಸ್ ಆಗಿವೆ. ದುರಂತವೆಂದರೆ ಉಗ್ರರನ್ನ ಹತ್ಯೆಮಾಡಲು ಇಸ್ರೇಲ್ ನಡೆಸಿದ ದಾಳಿಯಲ್ಲಿ ನೂರಾರು ಅಮಾಯಕರ ಮನೆಗಳು ಕೂಡ ನಾಶವಾಗಿವೆ.

ದಾಳಿಯಿಂದಾಗಿ ವಿದ್ಯುತ್‌, ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಜನರು ಎಲ್ಲಿ ಹೋಗಬೇಕು, ಏನು ಮಾಡಬೇಕು ಎಂಬುದು ತೋಚದೆ ಅನಾಥರಾಗಿದ್ದಾರೆ. ಹತ್ತಾರು ಮಕ್ಕಳು ಅಪ್ಪ-ಅಮ್ಮನ ಕಳೆದುಕೊಂಡು ನರಳಾಡುವ ಪರಿಸ್ಥಿತಿ ಎದುರಾಗಿದೆ. ಬದುಕಿದರೆ ಸಾಕಪ್ಪಾ ಎಂಬಂತಹ ಪರಿಸ್ಥಿ ಗಾಜಾ ಪಟ್ಟಿಯಲ್ಲಿ ನಿರ್ಮಾಣವಾಗಿದೆ.

ಜಿಹಾದ್‌ ಉಗ್ರಗಾಮಿ ಸಂಘಟನೆ

ಜಿಹಾದ್‌ ಉಗ್ರಗಾಮಿ ಸಂಘಟನೆ

ಇದೀಗ ಹತ್ಯೆಯಾಗಿರುವ ಜಿಹಾದ್‌ ಉಗ್ರಗಾಮಿ ಸಂಘಟನೆ ಕಮಾಂಡರ್‌ ಹಸ್ಸಾಮ್‌ ಅಬು ಹರ್‌ಬೀದ್‌ 15 ವರ್ಷಗಳಿಂದಲೂ ಈ ಪಾಪ ಕೃತ್ಯ ನಡೆಸುತ್ತಿದ್ದಾನೆ ಎನ್ನಲಾಗಿದೆ. ಅಲ್ಲದೇ ಇಸ್ರೇಲ್‌ ಮೇಲೆ ನಡೆಸಿದ ರಾಕೆಟ್‌ ಅಟ್ಯಾಕ್‌ನಲ್ಲಿ ಹಸ್ಸಾಮ್‌ ಅಬು ಹರ್‌ಬೀದ್‌ ಕೈವಾಡ ಇತ್ತು ಎಂದಿದೆ ಇಸ್ರೇಲ್ ಸೇನೆ. ಇದೇ ಕಾರಣಕ್ಕೆ ಈ ಉಗ್ರರ ನಾಯಕನನ್ನ ಹುಡುಕಿ ಕೊಂದು ಹಾಕಿದೆ ಇಸ್ರೇಲ್ ಸೇನೆ. ಹಸ್ಸಾಮ್‌ ಅಬು ಹರ್‌ಬೀದ್‌ ಹತ್ಯೆ ಬಳಿಕ ಕೌಂಟರ್ ಅಟ್ಯಾಕ್ ಅಂದ್ರೆ ಉಗ್ರರು ಪ್ರತಿದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದ್ದು, ಅಲರ್ಟ್ ಮಾಡಲಾಗಿದೆ.

ಯಾವ ತಪ್ಪನ್ನೂ ಮಾಡದ ಅಮಾಯಕರು

ಯಾವ ತಪ್ಪನ್ನೂ ಮಾಡದ ಅಮಾಯಕರು

ಗಾಜಾ ಪಟ್ಟಿಯಲ್ಲಿ ಯಾವ ತಪ್ಪನ್ನೂ ಮಾಡದ ಅಮಾಯಕರು, ಹಮಾಸ್ ಉಗ್ರರ ಉಪಟಳದಿಂದಾಗಿ ಪದೇ ಪದೆ ಇಸ್ರೇಲ್ ಕೈಯಲ್ಲಿ ಸಿಲುಕಿ ನರಳುತ್ತಿದ್ದಾರೆ. ತಪ್ಪು ಮಾಡಿರುವ ಹಮಾಸ್ ಉಗ್ರರು ಎಸ್ಕೇಪ್ ಆಗಿದ್ದಾರೆ. ಆದರೆ ಅಮಾಯಕರು ಇಸ್ರೇಲ್ ದಾಳಿಗೆ ಸಿಲುಕಿ ನರಳಿ ನರಳಿ ಸಾಯುತ್ತಿದ್ದಾರೆ. ಇಸ್ರೇಲ್ ನಡೆಸಿದ ರಾಕೆಟ್ ದಾಳಿಯಲ್ಲಿ ನೂರಾರು ಜನ ಮನೆ ಕಳೆದುಕೊಂಡು ಬೀದಿಯಲ್ಲಿ ಬದುಕುತ್ತಿದ್ದಾರೆ. ಅನ್ನ, ನೀರು ಸಿಗದೆ ಕಣ್ಣೀರು ಹಾಕುವ ಪರಿಸ್ಥಿತಿ ಅಲ್ಲಿ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತ ಕೂಡ ಅಸಹಾಯಕ ಪರಿಸ್ಥಿತಿಗೆ ತಲುಪಿದೆ.

ಹಮಾಸ್ ಉಗ್ರರ ಕೈವಾಡ

ಹಮಾಸ್ ಉಗ್ರರ ಕೈವಾಡ

ಪ್ರತಿಬಾರಿ ಗಾಜಾ ಪಟ್ಟಿ ಹಾಗೂ ಇಸ್ರೇಲ್ ನಡುವೆ ಹಿಂಸಾಚಾರ ನಡೆದಾಗಲೂ ಹಮಾಸ್ ಉಗ್ರರ ಕೈವಾಡ ಎದ್ದು ಕಾಣುತ್ತದೆ. ಆದರೆ ಮೊದಲು ಬೆಂಕಿ ಹಚ್ಚುವ ಕೆಲಸ ಮಾಡುವ ಉಗ್ರರ ಗ್ಯಾಂಗ್, ಇಸ್ರೇಲ್ ಪ್ರತಿದಾಳಿ ಆರಂಭಿಸುತ್ತಿದ್ದಂತೆ ಎಸ್ಕೇಪ್ ಆಗಿಬಿಡುತ್ತಾರೆ. ಇದೇ ರೀತಿ ಈಗಲೂ ಯುದ್ಧ ಆರಂಭವಾಗುತ್ತಿದ್ದಂತೆ ಉಗ್ರರು ಎಸ್ಕೇಪ್ ಆಗಿದ್ದಾರೆ. ಇದಕ್ಕಾಗಿ ಉಗ್ರರು ಸುರಂಗ ರಚಿಸಿಕೊಂಡು, ವ್ಯವಸ್ಥಿತವಾಗಿ ಇಸ್ರೇಲ್‌ ಸೇನೆ ಕೈಗೆ ಸಿಗದೆ ಓಡಿ ಹೋಗುತ್ತಾರೆ. ಆದರೆ ಈ ಬಾರಿ ಉಗ್ರರ 35 ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ.

ತೀಕ್ಷ್ಣವಾಗಿ ಪ್ರತಿಕ್ರಿಯೆ

ತೀಕ್ಷ್ಣವಾಗಿ ಪ್ರತಿಕ್ರಿಯೆ

ಹಮಾಸ್ ಉಗ್ರರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಉಗ್ರರ ಗ್ಯಾಂಗ್ ಜನರ ಮಧ್ಯೆ ಅಡಗಿ ಕೂತು ಜನರ ಮೇಲೆಯೇ ದಾಳಿ ಮಾಡುತ್ತಿದೆ ಎಂದಿದ್ದಾರೆ. ಈ ಮೂಲಕ ಹಮಾಸ್ ಉಗ್ರ ಪಡೆಯನ್ನ ಹೇಡಿಗಳು ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಮತ್ತೊಂದ್ಕಡೆ ನಾವಿನ್ನೂ ಕಾರ್ಯಾಚರಣೆ ಮಧ್ಯದಲ್ಲಿದ್ದು, ಗುರಿ ಮುಟ್ಟಿಲ್ಲ ಎಂದು ಹೇಳಿದ್ದಾರೆ ನೆತನ್ಯಾಹು. ಹೀಗೆ ಇಸ್ರೇಲ್ ಯದ್ಧದಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನೂ ಪರೋಕ್ಷವಾಗಿ ರವಾನಿಸಿದ್ದಾರೆ ನೆತನ್ಯಾಹು.

English summary
Israeli military killed Hamas terrorists commander & Searching for others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X