ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಕರ ಯುದ್ಧ ನಿಲ್ಲಿಸಿದ ಇಸ್ರೇಲ್, ನೂರಾರು ಜನರು ಜೈಲು ಪಾಲು..!

|
Google Oneindia Kannada News

ಬರೋಬ್ಬರಿ 11 ದಿನಗಳ ಕಾಲ ಭೀಕರ ಯುದ್ಧ ನಡೆಸಿದ್ದ ಇಸ್ರೇಲ್ ತಣ್ಣಗಾಗಿದೆ. ಪ್ಯಾಲೆಸ್ತೇನ್ ಉಗ್ರರ ಮೇಲೆ ರೊಚ್ಚಿಗೆದ್ದು ಇಸ್ರೇಲ್ ಗಾಜಾ ಪಟ್ಟಿ ಮೇಲೆ ನಡೆಸಿದ್ದ ದಾಳಿಗೆ ಅರ್ಧಕರ್ಧ ಗಾಜಾ ಪಟ್ಟಿ ನೆಲಸಮವಾಗಿದೆ. ಈ ಭೀಕರ ಯುದ್ಧ ನಿಂತು ಇನ್ನೂ ಕೆಲವು ಗಂಟೆಗಳು ಕೂಡ ಕಳೆದಿಲ್ಲ, ಅಗಲೇ ಇಸ್ರೇಲ್ ಹೊಸ ಕಾರ್ಯಾಚರಣೆ ಶುರುಮಾಡಿದ್ದು ಸಾವಿರಾರು ಜನರನ್ನ ಬಂಧಿಸಿದೆ.

ಇಸ್ರೇಲ್‌ನಲ್ಲೇ ಇದ್ದು ಹಮಾಸ್ ಉಗ್ರರ ಪರವಾಗಿ ನಿಂತಿದ್ದ ಆರೋಪದಡಿ ನೂರಾರು ಪ್ಯಾಲೆಸ್ತೇನ್ ಪ್ರಜೆಗಳನ್ನ ಬಂಧಿಸಲಾಗಿದೆ. ಅಷ್ಟಕ್ಕೂ ಇಸ್ರೇಲ್ ಹಿಂದೆ ಪ್ಯಾಲೆಸ್ತೇನ್‌ ಭಾಗವಾಗಿತ್ತು. ಆದರೆ ಅರ್ಧ ಶತಮಾನದ ಹಿಂದೆ ಪ್ಯಾಲೆಸ್ತೇನ್‌ನ ಮೂಲ ನಿವಾಸಿಗಳು ಚದುರಿ ಹೋಗಿದ್ದರು.

ಈಗಲೂ ಇಸ್ರೇಲ್‌ನಲ್ಲಿ ಲಕ್ಷಾಂತರ ಪ್ಯಾಲೆಸ್ತೇನ್ ಜನರು ವಾಸಿಸುತ್ತಿದ್ದಾರೆ. ಆದ್ರೆ ಇಸ್ರೇಲ್‌ನಲ್ಲಿ ವಾಸವಿರುವ ಪ್ಯಾಲೆಸ್ತೇನಿಯರ ಪೈಕಿ ಹಲವು ಯುವಕರು ಹಮಾಸ್ ಉಗ್ರರಿಗೆ ಸಹಾಯ ಮಾಡುತ್ತಿರುವ ಆರೋಪ ಮಾಡಿ, ಇಸ್ರೇಲ್ ಪೊಲೀಸರು ನೂರಾರು ಜನರನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಮತ್ತೆ ಈಗ ಭುಗಿಲೆದ್ದಿದೆ.

2 ಸಾವಿರ ಮನೆಗಳು ನಾಶ

2 ಸಾವಿರ ಮನೆಗಳು ನಾಶ

ಬರೋಬ್ಬರಿ 11 ದಿನಗಳ ಕಾಲ ನಡೆದ ಭೀಕರ ಕಾಳಗದಲ್ಲಿ ಸುಮಾರು 2000 ಸಾವಿರಕ್ಕೂ ಹೆಚ್ಚು ಮನೆಗಳು ಸರ್ವನಾಶವಾಗಿ ಹೋಗಿದ್ದರೆ, 15 ಸಾವಿರಕ್ಕೂ ಹೆಚ್ಚು ಮನೆಗಳು ಅರ್ಧ ಭಾಗ ಬಿದ್ದು ಹೋಗಿವೆ. ಇಸ್ರೇಲ್ ನಡೆಸಿದ ದಾಳಿ ಪರಿಣಾಮ ಗಾಜಾ ಪಟ್ಟಿ ಅಕ್ಷರಶಃ ನರಕವಾಗಿದೆ. ಅತ್ತ ಹಮಾಸ್ ಉಗ್ರರು ಇಸ್ರೇಲ್‌ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದರೆ, ಇತ್ತ ಇಸ್ರೇಲ್ ಕೂಡ ಗಾಜಾ ಪಟ್ಟಿಯ ಮೇಲೆ ಅಟ್ಯಾಕ್ ಮಾಡುತ್ತಿತ್ತು. ಹೀಗೆ ಇಬ್ಬರ ಜಗಳದಲ್ಲಿ ಅಮಾಯಕರ ರಕ್ತಪಾತ ನಡೆಯಿತು. ಸುಮಾರು 300 ನಾಗರಿಕರು ಬಡಿದಾಟದಲ್ಲಿ ಜೀವ ಕಳೆದುಕೊಂಡರು.

ಗಲಾಟೆ ಶುರುವಾಗಿದ್ದು ಹೇಗೆ..?

ಗಲಾಟೆ ಶುರುವಾಗಿದ್ದು ಹೇಗೆ..?

1967 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಭೂಪ್ರದೇಶವನ್ನು ವಶಪಡಿಸಿಕೊಂಡ ನೆನಪಿಗೆ ಮೆರವಣಿಗೆ ಆಯೋಜಿಸಲಾಗಿತ್ತು. ವಿಜಯದ ದಿನವನ್ನ ನೆನಪಿಸಿಕೊಳ್ಳುವ ಸಲುವಾಗಿ ಯಹೂದಿಗಳು ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದರು. ಆದರೆ ಮೆರವಣಿಗೆ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎನ್ನಲಾಗುತ್ತಿದೆ. ಹೀಗೆ ಹಿಂಸೆ ಭುಗಿಲೇಳುತ್ತಲೇ ಇಸ್ರೇಲಿ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಇಸ್ರೇಲಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದೇ ತಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಇದಾದ ಬಳಿಕ ಪ್ಯಾಲೆಸ್ತೇನ್ ಹಾಗೂ ಇಸ್ರೇಲ್ ನಡುವೆ ಹಿಂಸೆ ಆರಂಭವಾಗಿ, ಗಾಜಾ ಪಟ್ಟಿ ಮೇಲೆ ನಡೆಸಿದ್ದ ದಾಳಿಗೆ ಸುಮಾರು 300 ಜನ ಬಲಿಯಾಗಿದ್ದಾರೆ.

‘ಹಮಾಸ್ ಉಗ್ರರು ಹೇಡಿಗಳು’

‘ಹಮಾಸ್ ಉಗ್ರರು ಹೇಡಿಗಳು’

ಪ್ರತಿಬಾರಿ ಗಾಜಾ ಪಟ್ಟಿ ಹಾಗೂ ಇಸ್ರೇಲ್ ನಡುವೆ ಹಿಂಸಾಚಾರ ನಡೆದಾಗಲೂ ಹಮಾಸ್ ಉಗ್ರರ ಕೈವಾಡ ಎದ್ದು ಕಾಣುತ್ತದೆ. ಆದರೆ ಮೊದಲು ಬೆಂಕಿ ಹಚ್ಚುವ ಕೆಲಸ ಮಾಡುವ ಉಗ್ರರ ಗ್ಯಾಂಗ್, ಇಸ್ರೇಲ್ ಪ್ರತಿದಾಳಿ ಆರಂಭಿಸುತ್ತಿದ್ದಂತೆ ಎಸ್ಕೇಪ್ ಆಗಿಬಿಡುತ್ತಾರೆ. ಇದೇ ರೀತಿ ಈಗಲೂ ಯುದ್ಧ ಆರಂಭವಾಗುತ್ತಿದ್ದಂತೆ ಉಗ್ರರು ಎಸ್ಕೇಪ್ ಆಗಿದ್ದಾರೆ. ಇದಕ್ಕಾಗಿ ಉಗ್ರರು ಸುರಂಗ ರಚಿಸಿಕೊಂಡು, ವ್ಯವಸ್ಥಿತವಾಗಿ ಇಸ್ರೇಲ್‌ ಸೇನೆ ಕೈಗೆ ಸಿಗದೆ ಓಡಿ ಹೋಗುತ್ತಾರೆ. ಆದರೆ ಈ ಬಾರಿ ಉಗ್ರರ 35 ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿತ್ತು.

ಹಿಂಸೆ ಖಂಡಿಸಿದ್ದ ಭಾರತ

ಹಿಂಸೆ ಖಂಡಿಸಿದ್ದ ಭಾರತ

ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ್ದ ದಾಳಿಯನ್ನ ಭಾರತ ತೀವ್ರವಾಗಿ ಖಂಡಿಸಿತ್ತು. ಜೆರುಸಲೇಂನ 'ಟೆಂಪಲ್‌ ಮೌಂಟ್‌' ಬಳಿ ನಡೆದ ಹಿಂಸಾಚಾರವನ್ನೂ ಖಂಡಿಸಿತ್ತು. ಹಿಂಸೆ ಬಿಟ್ಟು ಶಾಂತಿಯಿಂದ ವರ್ತಿಸಲು ಭಾರತ ಸಲಹೆ ನೀಡಿತ್ತಲ್ಲದೆ, ಶೇಕ್‌ ಜರಾ ಸುತ್ತಲೂ ನೆಲೆಸಿರುವವರನ್ನು ಬಲವಂತವಾಗಿ ಹೊರದಬ್ಬುತ್ತಿರುವ ಕೃತ್ಯಕ್ಕೂ ಭಾರತ ಬೇಸರ ವ್ಯಕ್ತಪಡಿಸಿತ್ತು. ಎರಡೂ ಬಣಗಳು ಯಥಾಸ್ಥಿತಿ ಕಾಪಾಡಬೇಕಿದೆ ಎಂದು ಭಾರತ ಸಲಹೆ ನೀಡಿತ್ತು. ಇದೀಗ ಅಂತಾರಾಷ್ಟ್ರೀಯ ಸಮುದಾಯದ ಮಧ್ಯಪ್ರವೇಶ ಯುದ್ಧವನ್ನು ತಣ್ಣಗಾಗಿಸಿದೆ.

English summary
Israel troops arrested hundreds of Palestine’s, allegedly over supporting the violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X