ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್ ನಲ್ಲಿ ಕೊವಿಡ್-19 ಲಸಿಕೆಯ ಮಾನವ ಪ್ರಯೋಗ ಶುರು

|
Google Oneindia Kannada News

ಜೆರುಸಲೆಂ, ಅಕ್ಟೋಬರ್.26: ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯುವುದಕ್ಕೆ ಜಾಗತಿಕ ಮಟ್ಟದಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ. ಇಸ್ರೇಲ್ ನ ಜೀವಶಾಸ್ತ್ರ ಸಂಶೋಧನಾ ಸಂಸ್ಥೆಯು ಮುಂದಿನ ವಾರದಲ್ಲೇ ಕೊರೊನಾವೈರಸ್ ಲಸಿಕೆಗೆ ಸಂಬಂಧಿಸಿದಂತೆ ಮಾನವ ಪ್ರಯೋಗ ಆರಂಭಿಸುವುದಾಗಿ ತಿಳಿಸಿದೆ.

ನವೆಂಬರ್.01ರಂದು ಮೊದಲ ಹಂತದಲ್ಲಿ 80 ಜನರನ್ನು ಕೊರೊನಾವೈರಸ್ ಲಸಿಕೆಯ ವೈದ್ಯಕೀಯ ಪ್ರಯೋಗದಲ್ಲಿ ಬಳಸಿಕೊಳ್ಳಲಾಗುತ್ತದೆ. ಮುಂದಿನ ಹಂತಗಳಲ್ಲಿ ಮಾನವ ಪ್ರಯೋಗದ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ.

ಸುಳ್ಳುಸುಳ್ಳು: 2020ರಲ್ಲಿ ಕೊವಿಡ್-19 ಔಷಧಿ ಸಿಗುತ್ತೆ ಎನ್ನುವುದೇ ಸುಳ್ಳು! ಸುಳ್ಳುಸುಳ್ಳು: 2020ರಲ್ಲಿ ಕೊವಿಡ್-19 ಔಷಧಿ ಸಿಗುತ್ತೆ ಎನ್ನುವುದೇ ಸುಳ್ಳು!

ಡಿಸೆಂಬರ್ ತಿಂಗಳಿನಲ್ಲಿ ಎರಡನೇ ಹಂತದ ಮಾನವ ಪ್ರಯೋಗ ನಡೆಯಲಿದ್ದು, ಅಂದು 960 ಜನರನ್ನು ಲಸಿಕೆ ಸಂಶೋಧನಾ ಪ್ರಯೋಗದಲ್ಲಿ ಬಳಸಿಕೊಳ್ಳಲಾಗುತ್ತದೆ. ಮೊದಲ ಎರಡು ಪ್ರಯೋಗದ ಫಲಿತಾಂಶವನ್ನು ನೋಡಿಕೊಂಡು 2021ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ 3ನೇ ಹಾಗೂ ಅಂತಿಮ ಮಾನವ ಪ್ರಯೋಗ ನಡೆಸಲಾಗುತ್ತದೆ. ಆಗ ಸರಿಸುಮಾರು 30000 ಜನರನ್ನು ವೈದ್ಯಕೀಯ ಪ್ರಯೋಗದಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ಸಂಶೋಧನಾ ಸಂಸ್ಥೆಯು ತಿಳಿಸಿದೆ.

Israel To Begin Human Trials Of Covid-19 Vaccine From Nov.01


ಸಂಶೋಧಕರ ಮೇಲೆ ಪ್ರಬಲ ವಿಶ್ವಾಸ:

ಕೊರೊನಾವೈರಸ್ ಲಸಿಕೆ ಸಂಶೋಧನೆ ನಡೆಸುತ್ತಿರುವ ನಮ್ಮ ಸಂಶೋಧಕರ ಸಾಮರ್ಥ್ಯದ ಮೇಲೆ ತಮಗೆ ಅತೀವ ವಿಶ್ವಾಸವಿದೆ. ನಮ್ಮ ವೈದ್ಯಕೀಯ ಸಂಶೋಧಕರು ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆಯನ್ನು ನೀಡುತ್ತಾರೆ ಎಂಬ ನಂಬಿಕೆಯಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಸ್ಯಾಮ್ಯೂವಲ್ ಶಾಪಿರಾ ತಿಳಿಸಿದ್ದಾರೆ. ಅಲ್ಲದೇ 15 ಮಿಲಿಯನ್ ಡೋಸ್ ಲಸಿಕೆ ಉತ್ಪಾದನೆಯ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪ್ರಾರಂಭಿಕ ಹಂತದಲ್ಲಿ ದೇಶದ ಪ್ರಜೆಗಳು ಹಾಗೂ ನೆರೆಹೊರೆಯ ಮಿತ್ರರಾಷ್ಟ್ರಗಳಿಗೆ ಲಸಿಕೆ ನೀಡುವ ಬಗ್ಗೆ ಹೇಳಿದರು.

ಭಾಗ-1: ಕೊವಿಡ್-19 ಔಷಧಿ ಪತ್ತೆಯಾದರೂ ಸೋಂಕಿತರಿಗೆ ಸಿಗುವುದೇ ಅನುಮಾನ ಭಾಗ-1: ಕೊವಿಡ್-19 ಔಷಧಿ ಪತ್ತೆಯಾದರೂ ಸೋಂಕಿತರಿಗೆ ಸಿಗುವುದೇ ಅನುಮಾನ

40 ಲಸಿಕೆ ಮಾದರಿಗಳ ಮೇಲೆ ಪ್ರಯೋಗ:

ಇಸ್ರೇಲ್ ರಕ್ಷಣಾ ಸಚಿವಾಲಯದ ವ್ಯಾಪ್ತಿಗೆ ಸೇರಿರುವ ಸಂಸ್ಥೆಯು ದೇಶದ ಜನತೆಯಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದೆ. ದೇಶದ 40 ಲಸಿಕೆಯ ಮಾದರಿಗಳನ್ನು ವಿಶ್ವದಾದ್ಯಂತ ವೈದ್ಯಕೀಯ ಪ್ರಯೋಗಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. 90 ಲಕ್ಷ ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಈವರೆಗೂ 3 ಲಕ್ಷ ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. 2400 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Recommended Video

Chikkapete ಗೆ Shopping ಹೋಗಿದಿರ ಹಾಗಾದ್ರೆ ಈ Video ನೋಡಿ | Oneindia Kannada

English summary
Israel To Begin Human Trials Of Covid-19 Vaccine From Nov.01.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X