ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಗಾಸಸ್ ಬೇಹುಗಾರಿಕೆ ತನಿಖೆಗಾಗಿ ಸಚಿವರ ಸಮಿತಿ ರಚಿಸಿದ ಇಸ್ರೇಲ್‌

|
Google Oneindia Kannada News

ಜೆರುಸಲೆಂ, ಜು.22: ಜಾಗತಿಕ ಪೆಗಾಸಸ್ ಬೇಹುಗಾರಿಕೆಯ ಪ್ರಕರಣವು ಇಸ್ರೇಲಿ ಸಂಸ್ಥೆಯಾದ ಎನ್ಎಸ್ಒ ಗ್ರೂಪ್‌ಗೆ ಸೇರಿದ ಕಾರಣ ಈ ಬಗ್ಗೆ ತನಿಖೆ ನಡೆಸಲು ಇಸ್ರೇಲ್ ಹಿರಿಯ ಸಚಿವರ ತಂಡವನ್ನು ಸ್ಥಾಪಿಸಿದೆ ಎಂದು ತಿಳಿದುಬಂದಿದೆ.

ಇನ್ನು ಈ ನಡುವೆ ಮುಂಬರುವ ಬುಧವಾರ ಕಾಂಗ್ರೆಸ್ ಮುಖಂಡ ಶಶಿ ತರೂರ್ ನೇತೃತ್ವದ ಮಾಹಿತಿ ಮತ್ತು ತಂತ್ರಜ್ಞಾನದ ಭಾರತದ ಸಂಸದೀಯ ಸ್ಥಾಯಿ ಸಮಿತಿಯು ಈ ಪೆಗಾಸಸ್‌ ಬೇಹುಗಾರಿಕೆ ನಡೆಸಲು ಯಾರು ಆದೇಶ ನೀಡಿದರು ಎಂಬ ಬಗ್ಗೆ ಸರ್ಕಾರಿ ಉನ್ನತ ಅಧಿಕಾರಿಗಳನ್ನು ಪ್ರಶ್ನಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಪೆಗಾಸಸ್ ಹಗರಣ: ಮಾಧ್ಯಮಗಳ ಮೇಲೆ ಬೇಹುಗಾರಿಕೆ ಬಗ್ಗೆ ಫ್ರೆಂಚ್ ವಕೀಲರುಗಳಿಂದ ತನಿಖೆಪೆಗಾಸಸ್ ಹಗರಣ: ಮಾಧ್ಯಮಗಳ ಮೇಲೆ ಬೇಹುಗಾರಿಕೆ ಬಗ್ಗೆ ಫ್ರೆಂಚ್ ವಕೀಲರುಗಳಿಂದ ತನಿಖೆ

ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯು (ಎನ್‌ಎಸ್‌ಸಿ) ಪೆಗಾಸಸ್ ತನಿಖಾ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದೆ. ವಿಶೇಷವೆಂದರೆ, ಎನ್‌ಎಸ್‌ಒ ರಫ್ತುಗಳನ್ನು ನೋಡಿಕೊಳ್ಳುವುದು ಎನ್‌ಎಸ್‌ಸಿ ಆಗಿದೆ. ಈ ಹಿನ್ನೆಲೆ ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯು ಎನ್‌ಎಸ್‌ಒ ಗ್ರೂಪ್ ತನ್ನ ತಂತ್ರಜ್ಞಾನಗಳ ದುರುಪಯೋಗ ಮಾಡಿರುವ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುವುದಾಗಿ ಹೇಳಿದೆ. ಹಾಗೆಯೇ ಅಗತ್ಯಬಿದ್ದರೆ ವ್ಯವಸ್ಥೆಯನ್ನು ಸ್ಥಗಿತಗೊಳಿಸುತ್ತದೆ ಎಂದಿದೆ.

Israel sets up inter-ministerial panel to probe Pegasus snooping case

ಫ್ರಾನ್ಸ್, ಮೆಕ್ಸಿಕೊ, ಭಾರತ, ಮೊರಾಕೊ ಮತ್ತು ಇರಾಕ್‌ನಲ್ಲಿ ಪೆಗಾಸಸ್‌ನ ದುರುಪಯೋಗ ಕಂಡುಬಂದ ನಂತರ ಇಸ್ರೇಲ್‌ ಆಡಳಿತ ಈ ಕ್ರಮವು ಕೈಗೊಂಡಿದೆ. ಈ ಕ್ರಮವು ಇಸ್ರೇಲ್‌ನಲ್ಲಿ ಈ ವಿಚಾರದಲ್ಲಿ ಉಂಟಾಗಲ್ಲಿದ್ದ ಆಕ್ರೋಶವನ್ನು ತಪ್ಪಿಸಿಕೊಳ್ಳುವ ಭಾಗವಾಗಿದೆ. ಇನ್ನು ಈ ಸ್ಪೈವೇರ್ ಪ್ರಮುಖ 10 ಪ್ರಧಾನ ಮಂತ್ರಿಗಳು, ಮೂವರು ಅಧ್ಯಕ್ಷರು ಮತ್ತು ಒಬ್ಬ ರಾಜನನ್ನು ಗುರಿಯಾಗಿಸಿದೆ ಎನ್ನಲಾಗಿದೆ.

 ಪೆಗಾಸಸ್‌ ಬೇಹುಗಾರಿಕೆ: ಮೋದಿ ವಿರುದ್ದ ತನಿಖೆ, ಶಾ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ ಪೆಗಾಸಸ್‌ ಬೇಹುಗಾರಿಕೆ: ಮೋದಿ ವಿರುದ್ದ ತನಿಖೆ, ಶಾ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

ಎನ್ಎಸ್ಒ ಈ ಪೆಗಾಸಸ್‌ ಅನ್ನು ಪರಿಶೀಲಿಸಿದ ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡುತ್ತದೆ ಎಂದು ಹೇಳಿಕೊಂಡಿದೆ. ಈ ಮೂಲಕ ಆಡಳಿತದ ಮೇಲೆ ಬೊಟ್ಟು ಮಾಡಿದೆ. ಪೆಗಾಸಸ್ ರಾಷ್ಟ್ರೀಯ ಭದ್ರತೆಗೆ ಬೆದರಿಕೆಗಳನ್ನು ತಡೆಯಲು ಸಹಾಯಕವಾಗಿದೆ. ಆದರೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಜಕೀಯ ವಿರೋಧಿಗಳ ಸರ್ಕಾರವನ್ನು ಅಸ್ಥಿರಗೊಳಿಸಲು ಅಥವಾ ಚುನಾವಣೆಗಳನ್ನು ಗೆಲ್ಲಲು ಇದರ ದುರುಪಯೋಗ ಮಾಡಲಾಗಿದೆ ಎಂಬ ಗಂಭೀರ ಆರೋಪವು ಪ್ರಸ್ತುತ ಭಾರತದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಲಿದೆ.

ಇನ್ನು ಶಶಿ ತರೂರ್‌ ನೇತೃತ್ವದ ಸಂಸದೀಯ ಸಮಿತಿಯು ಜುಲೈ 28 ರಂದು ನಡೆಯುವ ಸಭೆಗೆ ತಾಂತ್ರಿಕ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಕರೆದಿದೆ. ಈ ಸಭೆಯ ಅಜೆಂಡಾವು ಲೋಕಸಭಾ ಸಚಿವಾಲಯದ ಅಧಿಸೂಚನೆಯ ಪ್ರಕಾರ ನಾಗರಿಕರ ಡೇಟಾ ಸುರಕ್ಷತೆ ಮತ್ತು ಗೌಪ್ಯತೆಯಾಗಿದೆ.

ಕೃಷಿ ದೈತ್ಯ ಮೊನ್ಸಾಂಟೊ ಅಧಿಕಾರಿಗಳು ಮತ್ತು ಇತರ ಸಿಎಎ ವಿರೋಧಿ ಕಾರ್ಯಕರ್ತರು ಪೆಗಾಸಸ್‌ನ ಸಂಭಾವ್ಯ ಗುರಿಗಳಾಗಿದ್ದಾರೆ ಎಂದು ಬುಧವಾರ, ಸ್ಪೈವೇರ್‌ನ ಬಗ್ಗೆ ಜಾಗತಿಕ ಮಾಧ್ಯಮ ಒಕ್ಕೂಟ ಮಾಡಿದ ವರದಿಯು ಉಲ್ಲೇಖಿಸಿದೆ. ತಳೀಯವಾಗಿ ಮಾರ್ಪಡಿಸಿದ ಬೀಜಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ 2018 ರಲ್ಲಿ ಮೊನ್ಸಾಂಟೊದ ಆರು ಮೊಬೈಲ್ ಸಂಖ್ಯೆಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಅಲ್ಲದೆ, ಅಸ್ಸಾಂನಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಎಎಎಸ್‌ಯು ಸದಸ್ಯ ಸಮುಜ್ಜಲ್ ಭಟ್ಟಾಚಾರ್ಜಿ ಹಾಗೂ ಯುಎಲ್‌ಎಫ್‌ಎನ ಅನುಪ್ ಚೆಟಿಯಾ ಈ ಪಟ್ಟಿಯಲ್ಲಿ ಇದ್ದಾರೆ ಎಂದು ಹೇಳಲಾಗಿದೆ.

ಪೆಗಾಸಸ್‌ ಬೇಹುಗಾರಿಕೆಯು ಭಾರತ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ಭಾರೀ ಸಂಚಲನವನ್ನು ಉಂಟು ಮಾಡಿದೆ. ಈಗಾಗಲೇ ಈ ಇಸ್ರೇಲಿ ಸಂಸ್ಥೆಯಾದ ಎನ್ಎಸ್ಒ ಗ್ರೂಪ್‌ಗೆ ಸೇರಿದ ಪೆಗಾಸಸ್‌ ದುರುಪಯೋಗ ಮಾಡುವ ಮೂಲಕ ಬೇಹುಗಾರಿಕೆ ನಡೆಸಿರುವ ಬಗ್ಗೆ ಫ್ರೆಂಚ್ ವಕೀಲರುಗಳು ತನಿಖೆ ಆರಂಭಿಸಿದ್ದಾರೆ. ''ಮೊರೊಕನ್ ಗುಪ್ತಚರ ಸೇವೆಗಳು ಇಸ್ರೇಲಿ ಮಾಲ್‌ವೇರ್‌ ಪೆಗಾಸಸ್ ಅನ್ನು ಹಲವಾರು ಫ್ರೆಂಚ್ ಪತ್ರಕರ್ತರ ಮೇಲೆ ಕಣ್ಣಿಡಲು ಬಳಸಿಕೊಂಡಿವೆ ಎಂಬ ಆರೋಪದ ಬಗ್ಗೆ ತನಿಖೆ ಆರಂಭಿಸಲಾಗಿದೆ,'' ಎಂದು ಪ್ಯಾರಿಸ್‌ನಲ್ಲಿನ ಪ್ರಾಸಿಕ್ಯೂಟರ್‌ಗಳು (ವಕೀಲರು) ಮಂಗಳವಾರ ಹೇಳಿದ್ದಾರೆ. ವೈಯಕ್ತಿಕ ಗೌಪ್ಯತೆ ಉಲ್ಲಂಘನೆ, ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನಗಳನ್ನು ಹ್ಯಾಕ್‌ ಮಾಡುವುದು ಹಾಗೂ ಕ್ರಿಮಿನಲ್ ವಿಚಾರ ಸೇರಿದಂತೆ 10 ವಿಭಿನ್ನ ಆರೋಪಗಳನ್ನು ಈ ತನಿಖಾ ತಂಡವು ಪರಿಶೀಲಿಸುತ್ತಿದೆ.

(ಒನ್‌ಇಂಡಿಯಾ ಸುದ್ದಿ)

English summary
Israel is learnt to have set up a senior inter-ministerial team to examine allegations of Pegasus snooping scandal since the spyware belongs to an Israeli firm, the NSO Group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X