• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೂನ್ 14ರಂದು ಇಸ್ರೇಲ್ ಹೊಸ ಸರ್ಕಾರದ ಭವಿಷ್ಯ ನಿರ್ಧಾರ

By Dw News
|
Google Oneindia Kannada News

ಟೆಲ್ ಅವೀವ್, ಜೂನ್ 8: ಇಸ್ರೇಲ್ ಹಾಗೂ ಗಾಜಾ ನಡುವಿನ ಯುದ್ಧದ ವಾತಾವರಣ ತಿಳಿಯಾಗುತ್ತಿದ್ದಂತೆ ರಾಜಕೀಯ ಸಂಘರ್ಷ ಭುಗಿಲೆದ್ದಿದೆ. ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೆಳಗಿಳಿಸಲು ವಿಪಕ್ಷಗಳು ಒಗ್ಗೂಡಿವೆ. ಹೊಸ ಮೈತ್ರಿ ಸರ್ಕಾರ ಸ್ಥಾಪನೆಯಾಗಿದ್ದು, ಜೂನ್ 14ರಂದು ವಿಶ್ವಾಸ ಮತ ಯಾಚಿಸಲಿದೆ.

''ಹೊಸ ಸರ್ಕಾರ ತನ್ನ ವಿಶ್ವಾಸಮತ ಸಾಬೀತು ಪಡಿಸಲು ದಿನಾಂಕ ನಿಗದಿಯಾಗಿದೆ. ಸಂಸತ್ ಅಧಿವೇಶನ ಕರೆಯಲಾಗಿದ್ದು, ಏಳು ದಿನಗಳಲ್ಲಿ ಹೊಸ ಸರ್ಕಾರ ಸ್ಥಾಪನೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ'' ಎಂದು ಸಂಸತ್ ಸ್ಪೀಕರ್ ಯಾರಿನ್ ಲೆವಿನ್ ಹೇಳಿದ್ದಾರೆ.

ವಿಪಕ್ಷ ನಾಯಕ ಯಾಯಿರ್ ಲಾಪಿಡ್ ಅವರು ಹೊಸ ಮೈತ್ರಿಕೂಟ ಸಾಧಿಸಿದ್ದು, ಎಂಟು ಪಕ್ಷಗಳು ಒಕ್ಕೂಟದಲ್ಲಿವೆ. ಜೂನ್ 14ರಂದು ವಿಶ್ವಾಸ ಮತ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಎರಡು ಎಡರಂಗ ಹಾಗೂ ಎರಡು ಕೇಂದ್ರಿಯ ಹಾಗೂ ಮೂರು ಬಲಪಂಥೀಯ ಚಿಂತನೆಯ ಪಕ್ಷಗಳ ಜೊತೆಗೆ ಅರಬ್ ಇಸ್ಲಾಮಿಕ್ ಮೂಲವಾದಿ ಪಕ್ಷ ಕೂಡಾ ಸರ್ಕಾರ ರಚನೆಯ ಕಸರತ್ತಿನಲ್ಲಿವೆ.

ವಿಪಕ್ಷಗಳ ಮುಖಂಡರಾಗಿರುವ ಲಾಪಿಡ್ ಹಾಗೂ ಬೆನ್ನೆಟ್ ಅವರು ಪಿಎಂ ಆಗಿ ದೇಶವನ್ನು ಹಂತ ಹಂತವಾಗಿ ಮುನ್ನಡೆಸುವ ಸಾಧ್ಯತೆಯಿದೆ.

Israels parliament to vote on approving new government

ನೆತನ್ಯಾಹು ಭವಿಷ್ಯವೇನು?

ಇಸ್ರೇಲ್ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಪ್ರಧಾನಿಯೊಬ್ಬರ ವಿರುದ್ಧ $219,000 ಭ್ರಷ್ಟಾಚಾರದ ಪ್ರಕರಣ ಎದುರಿಸಿದ ಘಟನೆಗೆ ಇಸ್ರೇಲ್ ಸಾಕ್ಷಿಯಾಗಿತ್ತು.

ಇಸ್ರೇಲ್ ಹೊಸ ಅಧ್ಯಕ್ಷರ ಆಯ್ಕೆ, ನೆತನ್ಯಾಹು ಕೆಳಗಿಳಿಸಲು ತಂತ್ರ?ಇಸ್ರೇಲ್ ಹೊಸ ಅಧ್ಯಕ್ಷರ ಆಯ್ಕೆ, ನೆತನ್ಯಾಹು ಕೆಳಗಿಳಿಸಲು ತಂತ್ರ?

12 ವರ್ಷಗಳ ಕಾಲ ಆಡಳಿತ ನಡೆಸಿರುವ ಬೆಂಜಮಿನ್ ನೇತನ್ಯಾಹು(71ವರ್ಷ) ವಿರುದ್ಧ ಭ್ರಷ್ಟಾಚಾರ, ಮೋಸ, ನಂಬಿಕೆ ದ್ರೋಹ ಪ್ರಕರಣಗಳು ದಾಖಲಾಗಿದೆ.

ಬೆನ್ನಿ ಗಾಂಟ್ಜ್ ಜೊತೆ 18 ತಿಂಗಳ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಂಡಿರುವ ನೇತನ್ಯಾಹು ಸರ್ಕಾರ ಉಳಿಸಿಕೊಂಡಿದ್ದಲ್ಲದೆ, ರಾಜೀನಾಮೆ ನೀಡದೆ ವಿಚಾರಣೆ ಎದುರಿಸಿದ್ದರು.

English summary
Israel's new incoming eight-party coalition government could be sworn in within the next week, bringing and end to Prime Minister Benjamin Netanyahu's 12-year reign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X