• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಸಂಸ್ಕೃತಿಯಂತೆ ನಮಸ್ಕಾರ ಮಾಡಿ- ಇಸ್ರೇಲ್ ಪ್ರಧಾನ ಮಂತ್ರಿ ಸಲಹೆ

|

ಜೆರುಸೆಲಂ, ಮಾರ್ಚ್ 9: ಕೊರೊನಾ ಇಡೀ ಪ್ರಪಂಚದ ಜನತೆಗೆ ಭಯ ಹುಟ್ಟಿಸಿದೆ. ಎಲ್ಲ ದೇಶಗಳು ತಮ್ಮ ತಮ್ಮ ಪ್ರಜೆಗಳಿಗೆ ಕೊರೊನಾದಿಂದ ಮುಂಜಾಗ್ರತೆವಹಿಸುವಂತೆ ತಿಳಿಸುತ್ತಿದ್ದಾರೆ. ಅದೇ ರೀತಿ ಇಸ್ರೇಲ್ ಸಹ ಕೊರೊನಾ ಬಗ್ಗೆ ಜನರಿಗೆ ಮಾಹಿತಿ ನೀಡಿದೆ.

ಇಸ್ರೇಲ್ ದೇಶದ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಪತ್ರಿಕಾಗೋಷ್ಠಿ ನಡೆಸಿ, ಕೊರೊನಾ ಬಗ್ಗೆ ಮಾತನಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಭಾರತದ ಸಂಸ್ಕೃತಿ ನಮಸ್ಕಾರದ ಬಗ್ಗೆ ತಿಳಿಸಿ, ಅದನ್ನು ಪಾಲಿಸುವಂತೆ ಹೇಳಿದ್ದಾರೆ.

ಭಾರತ ಸೇರಿದಂತೆ 14 ರಾಷ್ಟ್ರಗಳಿಗೆ ನಿರ್ಬಂಧ ಹೇರಿದ ಕತಾರ್

ಯಾರನಾದರೂ ಭೇಟಿಯಾದ ಸಂದರ್ಭದಲ್ಲಿ ಪರಸ್ಪರ ಹಸ್ತಲಾಘವ ಮಾಡದೆ, ನಮಸ್ತೆ ಮಾಡಿ ಎಂದು ದೇಶದ ಜನರಿಗೆ ಸೂಚನೆ ನೀಡಿದ್ದಾರೆ. ಹೀಗೆ ಮಾಡುವುದರಿಂದ ವೈರಸ್ ಹರಡುವುದು ಕಡಿಮೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಹೋಗದೆ ಇರುವುದು, ವೈರಸ್ ಹರಡಿದ ವ್ಯಕ್ತಿಯಿಂದ ದೂರ ಇರುವುದು, ಕೆಮ್ಮು, ಶೀತ, ಜ್ವರ ಬಂದರೆ ವೈದ್ಯರ ಬಳಿ ಹೋಗುವುದು ಹೀಗೆ ಮುಂಜಾಗ್ರತೆ ಕ್ರಮ ತೆಗೆದುಕೊಂಡು ಆರೋಗ್ಯವಾಗಿ ಇರುವಂತೆ ಹೇಳಿದ್ದಾರೆ.

ಸದನದಲ್ಲಿ ಕೊರೊನಾ ಚರ್ಚೆ: ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಸುಧಾಕರ್

ಭಾರತ ಸಂಸ್ಕೃತಿ ಎಲ್ಲ ದೇಶಗಳ ಸಂಸ್ಕೃತಿ ಶ್ರೇಷ್ಠ ಎನ್ನುವ ಹಾಗೆ ಮಾತಿದೆ. ಅನೇಕ ವಿದೇಶಿಗರು ಭಾರತ ಸಂಸ್ಕೃತಿಯನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಇಸ್ರೇಲ್ ದೇಶದ ಪ್ರಧಾನ ಮಂತ್ರಿ ಸಹ ನಮ್ಮ ಸಂಸ್ಕೃತಿಯನ್ನು ಪಾಲಿಸುವಂತೆ ಹೇಳಿದ್ದು, ಖುಷಿಯ ವಿಷಯ.

English summary
Israel prime minister Benjamin Netanyahu suggested citizens to greet with 'Namaste'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X