ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ಆರೋಪ: ಇಸ್ರೇಲ್ ಪ್ರಧಾನಿ ಬೆಂಜಮಿನ್ ಗೆ ಭೀತಿ

By Mahesh
|
Google Oneindia Kannada News

ಟೆಲ್ ಅವಿವ್, ಫೆಬ್ರವರಿ 14: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರಿಗೆ ಬಂಧನ ಭೀತಿ ಎದುರಾಗಿದೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಬೆಂಜಮಿನ್ ನೇತನ್ಯಾಹು ಅವರ ವಿರುದ್ಧದ ಎರಡು ಪ್ರಕರಣಗಳಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲು ಸ್ಥಳೀಯ ಪೊಲೀಸರು ಮುಂದಾಗಿದ್ದಾರೆ.

'ಆರೋಪಗಳೆಲ್ಲವೂ ನಿರಾಧಾರವಾಗಿದ್ದು, ನಾನೇನು ತಪ್ಪು ಎಸಗಿಲ್ಲ, ನಾನು ರಾಜೀನಾಮೆ ನೀಡುವ ಅಗತ್ಯವಿಲ್ಲ' ಎಂದು ಬೆಂಜಮಿನ್ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ಬೆಂಜಮಿನ್ ವಿರುದ್ಧ ಯಾವ ರೀತಿ ಕ್ರಮ ಜರುಗಿಸಬೇಕು ಎಂಬುದರ ಬಗ್ಗೆ ಅಟರ್ನಿ ಜನರಲ್ ಅವರು ಈ ಬಗ್ಗೆ ನಿರ್ಧರಿಸಲಿದ್ದಾರೆ.

Israel police recommend Benjamin Netanyahu corruption charge: Reports

ಸುಮಾರು 12 ವರ್ಷಗಳಿಂದ ಇಸ್ರೇಲ್ ನಲ್ಲಿ ಆಡಳಿತ ನಡೆಸುತ್ತಿರುವ ಬೆಂಜಮಿನ್ ಅವರು ಭಾರತದ ಪ್ರಧಾನಿ ಮೋದಿ ಅವರ ಆಪ್ತ ಗೆಳೆಯರಾಗಿ ಗುರುತಿಸಿಕೊಂಡಿದ್ದಾರೆ.

ನೇತನ್ಯಾಹು ಅವರಿಗೆ ಐಷಾರಾಮಿ ಉಡುಗೊರೆಗಳು, ದುಬಾರಿ ಸಿಗಾರ್ ಗಳನ್ನು ಹಾಲಿವುಡ್ ನಿರ್ಮಾಪಕ ಅರ್ನಾನ್ ಮಿಲ್ಚಾನ್, ಆಸ್ಟ್ರೇಲಿಯದ ಕೋಟ್ಯಧಿಪತಿ ಜೇಮ್ಸ್ ಪ್ಯಾಕರ್ ಮುಂತಾದವರು ನೀಡಿದ್ದಾರೆ.

ಬೆಂಜಮಿನ್ ಅವರ ಪತ್ನಿಗೆ ಪಿಂಕ್ ಶಾಂಪೇನ್ ಸಿಕ್ಕಿದೆ. ಈ ಗಿಫ್ಟ್ ಗಳ ಮೌಲ್ಯ ಹಲವಾರು ಸಾವಿರ ಡಾಲರ್ ಗಳಾಗಿದ್ದು, ಇವಕ್ಕೆ ಅಧಿಕೃತ ದಾಖಲೆಗಳು ಸಿಕ್ಕಿಲ್ಲ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು, ಈಗ ಚಾರ್ಜ್ ಶೀಟ್ ಹಾಕಲು ಮುಂದಾಗಿದ್ದಾರೆ.

English summary
Israeli police recommended that Prime Minister Benjamin Netanyahu be indicted in two cases of alleged corruption after a long-running probe, media reports said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X