• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಸ್ರೇಲ್‌ನಲ್ಲಿ ಮೂರನೇ ಬಾರಿಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್‌!

|

ಜೆರುಸಲೆಂ, ಡಿಸೆಂಬರ್ 24: ದೇಶದಲ್ಲಿ ಏರುತ್ತಿರುವ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಇಸ್ರೇಲ್ ಮೂರನೇ ಬಾರಿಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಹೇಳಿದ್ದಾರೆ.

ಈ ನಿರ್ಬಂಧಗಳು ಭಾನುವಾರ ಸಂಜೆ 5ಗಂಟೆಯಿಂದ ಜಾರಿಗೆ ಬರಲಿದ್ದು, ಇದು ಕನಿಷ್ಠ 14 ದಿನಗಳವರೆಗೆ ಜಾರಿಯಲ್ಲಿರುತ್ತದೆ ಎಂದಿದ್ದಾರೆ. ಆದರೆ ಲಾಕ್‌ಡೌನ್‌ ಘೋಷಣೆ ಅಂತಿಮಗೊಳ್ಳಲು ಕ್ಯಾಬಿನೆಟ್ ಅನುಮೋದನೆ ಬಾಕಿ ಇದೆ ಎಂದು ನೆತನ್ಯಾಹು ಕಚೇರಿಯ ಹೇಳಿಕೆ ತಿಳಿಸಿದೆ.

'ಯಹೂದಿ'ಗಳ ನಾಡಲ್ಲಿ ಅರಾಜಕತೆ..? ಇಸ್ರೇಲ್‌ನಲ್ಲಿ ಭುಗಿಲೇಳುತ್ತಾ ಹಿಂಸಾಚಾರ..?'ಯಹೂದಿ'ಗಳ ನಾಡಲ್ಲಿ ಅರಾಜಕತೆ..? ಇಸ್ರೇಲ್‌ನಲ್ಲಿ ಭುಗಿಲೇಳುತ್ತಾ ಹಿಂಸಾಚಾರ..?

ಕೊರೊನಾವೈರಸ್ ಹೊಸ ರೂಪಾಂತರವು ಇಸ್ರೇಲ್ ದೇಶದಲ್ಲಿ ಹೆಚ್ಚು ಹರಡುತ್ತಿದ್ದು, ಹೊಸ ರೂಪಾಂತರದ ಮೊದಲ ಪ್ರಕರಣಗಳನ್ನು ಆರೋಗ್ಯ ಸಚಿವಾಲಯ ಪತ್ತೆ ಮಾಡಿದ ನಂತರ ಇದು ಸಂಭವಿಸಿದೆ. ಬ್ರಿಟನ್‌ನಿಂದ ಹಿಂದಿರುಗಿದ ಮೂರು ಜನರಲ್ಲಿ ಇದು ಕಂಡುಬಂದಿದ್ದು, ನಾಲ್ಕನೇ ಪ್ರಕರಣದ ಮೂಲ ಇನ್ನೂ ತಿಳಿದಿಲ್ಲ.

ಇಸ್ರೇಲ್‌ನಲ್ಲಿ 3.85 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆಯು 3,150ಕ್ಕೂ ಹೆಚ್ಚು ದಾಖಲಾಗಿದೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಮಂಗಳವಾರ ಮಧ್ಯರಾತ್ರಿಯಲ್ಲಿ ಇಸ್ರೇಲ್ ಸರ್ಕಾರ ಪತನಗೊಂಡಿತ್ತು. ಪ್ರಧಾನಿ ಬೆಂಜಮಿನ್ ನೆತನ್ಯಾಹು ಏಳು ತಿಂಗಳ ಹಿಂದೆ ಪ್ರಮುಖ ಎದುರಾಳಿ ಬೆನ್ನಿಗಾಂಟ್ಜ್‌ ಅವರ ಪಕ್ಷದ ಸಹಕಾರದೊಂದಿಗೆ ಸರ್ಕಾರ ರಚಿಸಿದ್ದರು. ಆದರೆ ಬೆಂಜಮಿನ್ ನೇತನ್ಯಾಹು ಅವರ ಲಿಕುಡ್ ಪಾರ್ಟಿ ಮತ್ತು ಗಾಂಟ್ಜ್‌ ನೇತೃತ್ವದ ಬ್ಲೂ ಆ್ಯಂಡ್ ವೈಟ್ ಪಾರ್ಟಿ ಮೈತ್ರಿ ಸರ್ಕಾರವು ಕಿತ್ತಾಟದಿಂದಲೇ ಮುರಿದುಬಿದ್ದಿದೆ.

English summary
Israel will impose a third national lockdown to fight climbing COVID-19 infections, Prime Minister Benjamin Netanyahu said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X