ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹೆಚ್ಚಳ; ಇಸ್ರೇಲ್‌ನಲ್ಲಿ ನಾಲ್ಕನೇ ಡೋಸ್ ಲಸಿಕೆ ನೀಡಲು ಸಿದ್ಧತೆ

|
Google Oneindia Kannada News

ಇಸ್ರೇಲ್, ಸೆಪ್ಟೆಂಬರ್ 13: ಕೊರೊನಾ ಸೋಂಕಿನ ವಿರುದ್ಧ ಸಮರ್ಥ ಹೋರಾಟಕ್ಕೆ ನಾಲ್ಕನೇ ಡೋಸ್ ಲಸಿಕೆ ಅಗತ್ಯಬಿದ್ದರೆ ಸೂಕ್ತ ಲಸಿಕೆ ಪೂರೈಕೆ ಸಂಬಂಧ ಇಸ್ರೇಲ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ದೇಶದ ಉನ್ನತ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

'ಕೊರೊನಾ ಸೋಂಕಿನ ಸಂಭಾವ್ಯತೆ ಬಗ್ಗೆ ನಮಗೆ ತಿಳಿದಿಲ್ಲ. ಈ ಬಾರಿಯಂತೆ ಆರು ತಿಂಗಳ ಅವಧಿಯಲ್ಲೇ ಮತ್ತೊಂದು ಡೋಸ್ ಅವಶ್ಯಕತೆ ಬರುವ ಹಾಗೆ ಆಗಬಾರದು. ಮೂರನೇ ಡೋಸ್ ಪರಿಣಾಮ ಹೆಚ್ಚು ಕಾಲ ಉಳಿಯುತ್ತದೆ ಎಂದು ನಾನು ಆಶಿಸುತ್ತೇನೆ' ಎಂದು ಆರೋಗ್ಯ ಸಚಿವಾಲಯದ ವ್ಯವಸ್ಥಾಪನಕ ನಿರ್ದೇಶಕ ನಾಚ್ಮನ್ ಆಶ್ ಹೇಳಿದ್ದಾರೆ.

 ಎಲ್ಲರಿಗೂ ಕೊರೊನಾ ಬೂಸ್ಟರ್ ಡೋಸ್ ಅಗತ್ಯವಿದೆಯೇ? ಬ್ರಿಟನ್‌ ತಜ್ಞರ ಅಭಿಪ್ರಾಯ ಎಲ್ಲರಿಗೂ ಕೊರೊನಾ ಬೂಸ್ಟರ್ ಡೋಸ್ ಅಗತ್ಯವಿದೆಯೇ? ಬ್ರಿಟನ್‌ ತಜ್ಞರ ಅಭಿಪ್ರಾಯ

ಇಸ್ರೇಲ್‌ನಲ್ಲಿ ಮುಖ್ಯವಾಗಿ ಫೈಜರ್ ಮಾಡರ್ನಾ ಲಸಿಕೆಯನ್ನು ನೀಡಲಾಗುತ್ತಿದೆ. ಆಗಸ್ಟ್‌ ತಿಂಗಳಿನಿಂದ ಬೂಸ್ಟರ್ ಲಸಿಕೆಗಳನ್ನು ನೀಡಲು ಆರಂಭಿಸಿದ್ದು, ಇದುವರೆಗೂ 2.8 ಮಿಲಿಯನ್ ಮಂದಿಗೆ ಮೂರನೇ ಡೋಸ್ ಲಸಿಕೆ ನೀಡಿದೆ. ಲಸಿಕೆ ನೀಡಿದ ಐದು ತಿಂಗಳ ನಂತರ ಲಸಿಕೆಗಳ ಪರಿಣಾಮ ದುರ್ಬಲಗೊಳ್ಳುತ್ತದೆ. ಇದು ಬೂಸ್ಟರ್ ಲಸಿಕೆ ನೀಡುವುದನ್ನು ಅನಿವಾರ್ಯಗೊಳಿಸಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

Israel Getting Ready For Fourth Covid-19 Vaccine Dose

ಈ ತಿಂಗಳ ಕೊನೆಯಲ್ಲಿ ಅಮೆರಿಕ ಹಾಗೂ ಬ್ರಿಟನ್ ಕೂಡ ಬೂಸ್ಟರ್ ಲಸಿಕೆ ನೀಡಲು ಯೋಜನೆ ರೂಪಿಸುತ್ತಿವೆ. ಯುರೋಪ್ ದೇಶಗಳಲ್ಲಿ ಮೂರನೇ ಡೋಸ್ ನೀಡುವ ತಯಾರಿ ಸಾಗುತ್ತಿದೆ. ಆದರೆ ಈ ಬೂಸ್ಟರ್ ಲಸಿಕೆಗಳನ್ನು ನೀಡುವ ಯೋಜನೆಗಳಿಗೆ ಸ್ವಲ್ಪ ಕಾಲ ತಡೆಹಿಡಿಯುವಂತೆ ವಿಶ್ವ ಆರೋಗ್ಯ ಸಂಸ್ಥೆ ಮನವಿ ಮಾಡಿದೆ.

ಇಸ್ರೇಲ್‌ನಲ್ಲಿ ಕೋವಿಡ್‌ ತೀವ್ರ ಹೆಚ್ಚಳ: ಜಗತ್ತಿಗೆ ಈ ದೇಶ ಪಾಠಇಸ್ರೇಲ್‌ನಲ್ಲಿ ಕೋವಿಡ್‌ ತೀವ್ರ ಹೆಚ್ಚಳ: ಜಗತ್ತಿಗೆ ಈ ದೇಶ ಪಾಠ

ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೋಸ್ ಅದನಾಂ ಫೆಬ್ರಿಯೋಸಿಸಿಸ್, ಈ ವರ್ಷದ ಕೊನೆಯವರೆಗಾದರೂ ಬೂಸ್ಟರ್‌ ಲಸಿಕೆಗಳಿಗೆ ತಡೆಹಿಡಿಯಬೇಕು. ಇದರಿಂದ ಬಡ ದೇಶಗಳು ಕೊರೊನಾ ಲಸಿಕೆಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಮನವಿ ಮಾಡಿದ್ದಾರೆ. ಆದರೆ ಹಲವು ದೇಶಗಳು ಬೂಸ್ಟರ್ ಡೋಸ್‌ಗಳನ್ನು ನೀಡಲು ಮುಂದಾಗಿವೆ.

ಬೂಸ್ಟರ್‌ ಲಸಿಕೆ ಪಡೆದವರನ್ನು ಸೇರಿ ಇಸ್ರೇಲ್‌ನಲ್ಲಿ 7ಮಿಲಿಯನ್ ಅರ್ಹ ಜನರಿಗೆ ಲಸಿಕೆ ನೀಡಲಾಗಿದೆ. 2.7 ಮಿಲಿಯನ್ ಮಂದಿ ಎರಡು ಡೋಸ್ ಲಸಿಕೆಗಳನ್ನು ಪಡೆದುಕೊಂಡಿದ್ದರೆ, ಸುಮಾರು 5 ಲಕ್ಷ ಮಂದಿ ಕೇವಲ ಒಂದು ಡೋಸ್ ಲಸಿಕೆ ಪಡೆದಿದ್ದಾರೆ. ಒಂದು ಮಿಲಿಯನ್ ಮಂದಿ ಲಸಿಕೆ ಪಡೆದಿಲ್ಲ.

Israel Getting Ready For Fourth Covid-19 Vaccine Dose

ಕೊರೊನಾ ಸೋಂಕನ್ನು ಸಮರ್ಥವಾಗಿ ನಿಭಾಯಿಸಿದ ದೇಶ ಎಂದು ಕರೆಸಿಕೊಂಡಿದ್ದ ಇಸ್ರೇಲ್‌ ಸೆಪ್ಟೆಂಬರ್‌ನಲ್ಲಿ ಕೊರೊನಾ ಹಾಟ್‌ಸ್ಪಾಟ್ ಆಗಿ ಮಾರ್ಪಟ್ಟಿದೆ. ಬೇಸಿಗೆಯಲ್ಲಿ ಡೆಲ್ಟಾ ಹರಡುವಿಕೆ ಆರಂಭವಾಗುತ್ತಿದ್ದಂತೆ ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿನ ದರ ಹೊಂದಿದ ದೇಶವಾಗಿದೆ ಇಸ್ರೇಲ್. ಜಾನ್‌ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿ ಪ್ರಕಾರ, ಸೆಪ್ಟೆಂಬರ್ 4ರ ವಾರದಲ್ಲಿ ಇಸ್ರೇಲ್ ಅತಿ ಹೆಚ್ಚು ಸೋಂಕಿನ ದರ ದಾಖಲಿಸಿದೆ.

ಇಸ್ರೇಲ್‌ನಲ್ಲಿ ಈವರೆಗೆ ಸುಮಾರು ಶೇಕಡ 61 ರಷ್ಟು ಮಂದಿಗೆ ಎರಡು ಡೋಸ್‌ ಕೋವಿಡ್‌ ಲಸಿಕೆ ನೀಡಲಾಗಿದೆ. ಇಸ್ರೇಲ್‌ನಲ್ಲಿ ಡೆಲ್ಟಾ ಸೋಂಕಿನ ಪ್ರಕರಣಗಳು ತೀವ್ರವಾಗಿ ಹರಡುತ್ತಿದ್ದಂತೆ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಇಸ್ರೇಲ್‌ನಲ್ಲಿ ಹಿಂದೆಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ನಾಲ್ಕನೇ ಡೋಸ್ ಲಸಿಕೆ ನೀಡುವ ಆಲೋಚನೆಯೂ ಸರ್ಕಾರದ ಮುಂದಿದೆ.

ಈ ಹಿನ್ನೆಲೆಯಲ್ಲಿ ಬೂಸ್ಟರ್ ಲಸಿಕೆಗಳನ್ನು ಜನರಿಗೆ ನೀಡಲು ಆರಂಭಿಸಿದ್ದು, ಸೋಂಕಿನ ಉಲ್ಬಣ ತಗ್ಗಿದಂತೆ ತೋರುತ್ತಿದೆ ಎಂದು ಆಶ್ ಹೇಳಿದ್ದಾರೆ.

ಎರಡು ಡೋಸ್ ಲಸಿಕೆ ಪಡೆದವರಿಗಿಂತ ಲಸಿಕೆ ಹಾಕದ ಜನರಲ್ಲಿ ತೀವ್ರತರ ಸೋಂಕು ಕಂಡುಬಂದಿದೆ. ಲಸಿಕೆ ಉತ್ಪತ್ತಿ ಮಾಡಿದ ರೋಗನಿರೋಧಕ ಶಕ್ತಿ ತಗ್ಗುತ್ತಿದ್ದರೂ ಗಂಭೀರ ಅನಾರೋಗ್ಯದ ವಿರುದ್ಧ ಲಸಿಕೆ ರಕ್ಷಣೆ ನೀಡುವುದರದಲ್ಲಿ ಎರಡು ಮಾತಿಲ್ಲ ಎಂದು ಅವರು ಹೇಳಿದ್ದಾರೆ.

ಇದರೊಂದಿಗೆ ಮಕ್ಕಳಲ್ಲಿ ಕೊರೊನಾ ಸೋಂಕು ಹರಡುವಿಕೆ ಹೆಚ್ಚಳವಾಗಲು ಆರಂಭವಾಗಿದೆ.

English summary
Israel is preparing to ensure it has sufficient vaccine supply in case a fourth round of Covid-19 shots is needed,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X