ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾಲೆಸ್ಟೈನ್ ನ ಗಾಜಾಪಟ್ಟಿ ಮೇಲೆ ಇಸ್ರೇಲ್ ನಿಂದ ಮಿಸೈಲ್ ದಾಳಿ

|
Google Oneindia Kannada News

ಟೆಲ್ ಅವೀವ್ , ಮಾರ್ಚ್ 26: ಉಗ್ರರ ಪ್ರಮುಖ ಅಡಗುದಾಣಗಳಿರುವ ಪ್ಯಾಲೆಸ್ಟೈನ್ ಗಾಜಾಪಟ್ಟಿ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ.

ಉಗ್ರರ ಹತ್ತಾರು ಅಡಗುದಾಣಗಳೊಂದಿಗೆ ಸಮೀಪದಲ್ಲಿದ್ದ ಹತ್ತಾರು ಮನೆಗಳೂ ಕೂಡ ದ್ವಂಸವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮುಖ್ಯವಾಗಿ ಹಮಾಸ್ ಉಗ್ರ ಸಂಘಟನೆಯ ಪ್ರಮುಖ ಮುಖಂಡನ ನಿವಾಸದ ಮೇಲೂ ಇಸ್ರೇಲ್ ಪಡೆಗಳು ಕ್ಷಿಪಣಿ ದಾಳಿ ನಡೆಸಿದ್ದು, ಇದಲ್ಲದೇ ಉಗ್ರ ಸಂಘಟನೆಯ ಸುಮಾರು 15ಕ್ಕೂ ಹೆಚ್ಚು ಉಗ್ರ ಅಡಗುದಾಣಗಳ ಮೇಲೆ ದಾಳಿ ಮಾಡಿದೆ.

ಮಧ್ಯರಾತ್ರಿಯಲ್ಲಿ ಇಸ್ರೇಲಿ ಪಡೆಗಳು ಗಾಜಾಪಟ್ಟಿ ಮೇಲೆ ಕ್ಷಿಪಣಿಗಳ ಮಳೆಯನ್ನೇ ಸುರಿಸಿದ್ದು, ಈ ವೇಳೆ ಸ್ಛಳೀಯ ಕುಖ್ಯಾತ ಉಗ್ರಗಾಮಿ ಸಂಘಟನೆ ಹಮಾಸ್ ಹತ್ತಕ್ಕೂ ಅಡಗುದಾಣಗಳು ಧ್ವಂಸವಾಗಿವೆ. ಅಂತೆಯೇ ಅಡಗುದಾಣಗಳ ಸಮೀಪದಲ್ಲೇ ಇದ್ದ ಹಲವು ಮನೆಗಳು ಕೂಡ ಧ್ವಂಸವಾಗಿವೆ.

ದೆಹಲಿ, ಮುಂಬೈ, ಗೋವಾ ಮೇಲೆ ಎರಡೆರಡು ಭಯೋತ್ಪಾದನಾ ದಾಳಿ ಎಚ್ಚರಿಕೆದೆಹಲಿ, ಮುಂಬೈ, ಗೋವಾ ಮೇಲೆ ಎರಡೆರಡು ಭಯೋತ್ಪಾದನಾ ದಾಳಿ ಎಚ್ಚರಿಕೆ

ಈ ಬಗ್ಗೆ ಸ್ವತಃ ಹಮಾಸ್ ಉಗ್ರ ಸಂಘಟನೆ ವಕ್ತಾರ ಫಾವ್ಜಿ ಬರ್ಹೌಮ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಹಮಾಸ್ ಕೇಂದ್ರಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ.

ಇಸ್ರೇಲ್ ಈ ಕುಕೃತ್ಯಕ್ಕೆ ಈಜಿಪ್ಟ್ ಕೂಡ ನೆರವು ನೀಡಿದ್ದು, ದಲ್ಲಾಳಿಯಾಗಿ ಕಾರ್ಯನಿರ್ವಹಿಸಿದೆ. ಆದರೆ ಇಸ್ರೇಲಿ ಪಡೆಗಳ ದಾಳಿಗೆ ನಾವೂ ಪ್ರತೀಕಾರ ನಡೆಸುತ್ತೇವೆ ಎಂದು ಹೇಳಿದ್ದಾರೆ.

Israel-Gaza Flare-up Continues Despite Reports of a Cease-fire

ಕಳೆದವಾರವಷ್ಟೇ ಇದೇ ಹಮಾಸ್ ಉಗ್ರರು ಇರ್ಸೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ಎರಡು ಬಾರಿ ಕ್ಷಿಪಣಿ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಯಾವುದೇ ಸಾವಾಗಿರಲಿಲ್ಲವಾದರೂ, ನಾಲ್ಕು ಇಸ್ರೇಲ್ ಪ್ರಜೆಗಳು ಗಾಯಗೊಂಡಿದ್ದರು.

ಆ ಬಳಿಕ ಇಸ್ರೇಲ್ ಕೂಡ ಟೆಲ್ ಅವೀವ್ ನಿಂಗ ಗಾಜಾಪಟ್ಟಿ ಮೇಲೆ ಕ್ಷಿಪಣಿ ದಾಳಿ ಮಾಡಿ ತಿರುಗೇಟು ನೀಡಿತ್ತು. ಇದೀಗ ಮತ್ತೆ ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆ ಮುಗಿಬಿದ್ದಿದೆ.

ಅತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅಮೆರಿಕ ಪ್ರವಾಸದಲ್ಲಿದ್ದು, ಅಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಇಸ್ರೇಲ್ ಪಡೆಗಳು ದಾಳಿ ನಡೆಸಿರುವುದು ಹಲವು ಗೊಂದಲ, ಕುತೂಹಲಕ್ಕೆ ಕಾರಣವಾಗಿದೆ.

English summary
After a rocket from Gaza hit central Israel Monday, the Israeli air force launched an offensive striking Hamas targets in the Strip.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X