ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್‌ಗೆ ಲಸಿಕೆ ಸಿದ್ಧ: ಇಸ್ರೇಲ್ ಸಚಿವಾಲಯ ಘೋಷಣೆ

|
Google Oneindia Kannada News

ಇಸ್ರೇಲ್, ಮೇ 5: ಇಡೀ ವಿಶ್ವವನ್ನು ನಲುಗಿಸಿರುವ ಕೊರೊನಾ ವೈರಸ್‌ಗೆ ಔಷಧ ಕಂಡುಹಿಡಿಯಲು ಹಲವು ರಾಷ್ಟ್ರಗಳು ಎಲ್ಲ ರೀತಿಯ ಪ್ರಯತ್ನ ಮಾಡ್ತಿವೆ. ಹಲವು ಪ್ರಯೋಗಗಳು ಆಗಿದ್ದರೂ ಯಾವುದು ಅಂತಿಮ ಹಂತಕ್ಕೆ ಬಂದಿಲ್ಲ.

ಇದೀಗ, ಇಸ್ರೇಲ್ ದೇಶವೂ ಕೊರೊನಾ ವೈರಸ್‌ ದಾಳಿಯಿಂದ ತತ್ತರಿಸಿರುವ ಜಗತ್ತಿಗೆ ಸಮಾಧಾನ ತರುವಂತಹ ವಿಷಯ ನೀಡಿದೆ. ಮನುಷ್ಯನ ದೇಹಕ್ಕೆ ನುಗ್ಗಿರುವ ಕೊರೊನಾಗೆ ದೇಹದೊಳಗೆಯೇ ನಿಷ್ಕ್ರಿಯ ಮಾಡಬಲ್ಲ Antibody ಅನ್ನು ಇಸ್ರೇಲ್ ಪತ್ತೆ ಹಚ್ಚಿದೆಯಂತೆ.

ಕೊರೊನಾ ವೈರಸ್ ಸೋಂಕು ರಹಿತಗೊಳಿಸಲು ಬಂತು UV ಬ್ಲಾಸ್ಟರ್!ಕೊರೊನಾ ವೈರಸ್ ಸೋಂಕು ರಹಿತಗೊಳಿಸಲು ಬಂತು UV ಬ್ಲಾಸ್ಟರ್!

ಈ ಕುರಿತು ಇಸ್ರೇಲ್ ರಕ್ಷಣಾ ಸಚಿವ ಸಫ್ತಾಲಿ ಬೆನೆಟ್ ಮಾಹಿತಿ ನೀಡಿದ್ದು, 'ದೇಶದ ಪ್ರಮುಖ ಜೈವಿಕ ಸಂಶೋಧನಾ ಸಂಸ್ಥೆಯ (IIBR) ವಿಜ್ಞಾನಿಗಳು ಕೊರೊನಾ ವೈರಸ್‌ನ್ನು ಮಾನವನ ದೇಹದಲ್ಲೇ ನಿಷ್ಕ್ರಿಯಗೊಳಿಸಬಲ್ಲ Antibody ಅಭಿವೃದ್ಧಿಪಡಿಸಿದ್ದಾರೆ' ಎಂದು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.

Israel Biological Institute Developed COVID-19 Antibody

ಖುದ್ದು ಸಫ್ತಾಲಿ ಬೆನೆಟ್ ಅವರೇ ಪ್ರಯೋಗಾಲಯಕ್ಕೆ ಭೇಟಿ ನೀಡಿ Antibody ಪರಿಶೀಲಿಸಿದ್ದಾರಂತೆ. ''ಪ್ರಯೋಗಾಲಯ ಸಂಸ್ಥೆಯ ಸಿಬ್ಬಂದಿಯ ಕೆಲಸ ನಿಜಕ್ಕು ಹೆಮ್ಮೆ ತಂದಿದೆ. ಅವರ ಸೃಜನಶೀಲತೆ ಅದ್ಭುತ ಸಾಧನೆ ಮಾಡುವಂತೆ ಮಾಡಿದೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಐಐಬಿಆರ್ ಕೊರೊನಾಗೆ ಲಸಿಕೆ ಕಂಡುಹಿಡಿಯುಲ್ಲಿ ಕೆಲಸ ಆರಂಭಿಸಿದ್ದೇವೆ. ಕೊರೊನಾ ವೈರಸ್‌ನ ಗುಣಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಪ್ರಗತಿ ಕಂಡಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿತ್ತು. ಇದೀಗ, ಲಸಿಕೆ ಅಭಿವೃದ್ದಿಪಡಿಸಲಾಗಿದೆ ಎಂದು ಘೋಷಣೆ ಮಾಡಿಕೊಂಡಿದೆ.

ಈ ಲಸಿಕೆಯನ್ನು ಮನುಷ್ಯನ ಮೇಲೆ ಪ್ರಯೋಗ ಮಾಡಲಾಗಿದೆಯೇ ಅಥವಾ ಫಲಿತಾಂಶ ಸಕ್ಸಸ್ ಆಗಿದೆಯೇ ಎಂಬುದರ ಬಗ್ಗೆ ಸಫ್ತಾಲಿ ಬೆನೆಟ್ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಮುಂದಿನ ದಿನದಲ್ಲಿ ಕೊರೊನಾ antibodyಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ಪಾದನೆ ಮಾಡಲು ಕಂಪನಿಗಳ ಜೊತೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ಒಂದು ವೇಳೆ ಇಸ್ರೇಲ್ ಹೇಳುತ್ತಿರುವಂತೆ ಕೊರೊನಾ ವೈರಸ್‌ಗೆ ಲಸಿಕೆ ಪತ್ತೆ ಹಚ್ಚಿದ್ದೆ ಆದರೆ, ಆಧುನಿಕ ಜಗತ್ತಿನಲ್ಲಿ ಇದೊಂದು ಐತಿಹಾಸಿಕ ಸಾಧನೆಯಾಗಿ ಉಳಿಯಲಿದೆ. ಪ್ರಪಂಚದ ಇತಿಹಾಸ ಪುಟದಲ್ಲಿ ಇಸ್ರೇಲ್ ದೊಡ್ಡ ಖ್ಯಾತಿ ಗಳಿಸಲಿದೆ.

English summary
Israel's Biological Institute completes development phase of COVID-19 antibody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X