• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ಸೇರಿ 6 ರಾಷ್ಟ್ರಗಳಿಗೆ ಇಸ್ರೇಲ್‌ನಿಂದ ಪ್ರಯಾಣ ನಿರ್ಬಂಧ

|
Google Oneindia Kannada News

ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಭಾರತ ಸೇರಿ 6 ದೇಶಗಳಿಗೆ ಪ್ರಯಾಣವನ್ನು ನಿಷೇಧಿಸಿದೆ.

ಇಸ್ರೇಲ್ ಪ್ರಧಾನಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಇಸ್ರೇಲ್‌ನಿಂದ ಉಕ್ರೇನ್, ಭಾರತ, ಬ್ರೆಜಿಲ್, ಇಥಿಯೋಪಿಯಾ, ದಕ್ಷಿಣ ಆಫ್ರಿಕಾ, ಮೆಕ್ಸಿಕೋ ಹಾಗೂ ಟರ್ಕಿಗೆ ಹೋಗುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.

ಕೋವಿಡ್ 19: ಭಾರತದಿಂದ ಪ್ರಯಾಣಿಸುವವರಿಗೆ ಅಮೆರಿಕ ನಿರ್ಬಂಧಕೋವಿಡ್ 19: ಭಾರತದಿಂದ ಪ್ರಯಾಣಿಸುವವರಿಗೆ ಅಮೆರಿಕ ನಿರ್ಬಂಧ

ಈ ನಿರ್ಬಂಧಗಳು ಮೇ 3 ರಿಂದ ಚಾಲ್ತಿಗೆ ಬರಲಿದೆ, ಮೇ 16ರವರೆಗೂ ಇರಲಿದೆ. ಇಸ್ರೇಲ್‌ನವರು ಅಲ್ಲದಿದ್ದರೆ ಬೇರೆ ದೇಶಗಳಿಗೆ ತೆರಳುವುದಾದರೆ ಶಾಶ್ವತವಾಗಿ ಅಲ್ಲಿರುವ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ, ಕೋವಿಡ್‌ನಿಂದಾಗಿ ಭಾರತದ ಪರಿಸ್ಥಿತಿ ಮತ್ತಷ್ಟು ಭಯಾನಕವಾಗಲಿದೆ ಎಂದು ಅಮೆರಿಕದ ಬೈಡನ್ ಸರ್ಕಾರ ಹೇಳಿದೆ. ಭಾರತದಲ್ಲಿ ಈಗಾಗಲೇ 3 ಲಕ್ಷಕ್ಕೂ ಅಧಿಕ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಇನ್ನೂ ಅಂತಿಮ ಹಂತವನ್ನು ತಲುಪಿಲ್ಲ, ಅಂತಿಮ ಘಟ್ಟ ತುಂಬಾ ಭೀಕರವಾಗಿರಲಿದೆ ಎಂದಿದ್ದಾರೆ.

Assembly Election Results 2021 Live Updates: 5 ರಾಜ್ಯಗಳ ಚುನಾವಣೆ ಫಲಿತಾಂಶAssembly Election Results 2021 Live Updates: 5 ರಾಜ್ಯಗಳ ಚುನಾವಣೆ ಫಲಿತಾಂಶ

ಭಾರತದ ಪರಿಸ್ಥಿತಿ ನೋಡಿ ಭಯವಾಗುತ್ತಿದೆ, ನಿತ್ಯ 50 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹೆಚ್ಚಾಗುತ್ತಿವೆ. ಅಮೆರಿಕವು ಆಕ್ಸಿಜನ್, ವೆಂಟಿಲೇಟರ್, ಲಸಿಕೆ ತಯಾರಿಕಾ ಕಚ್ಚಾವಸ್ತುಗಳು ಸೇರಿದಂತೆ ಹಲವು ವೈದ್ಯಕೀಯ ಸಾಮಗ್ರಿಗಳನ್ನು ತುರ್ತಾಗಿ ಕಳುಹಿಸಿಕೊಡುತ್ತೇವೆ ಎಂದು ಆರೋಗ್ಯ ಭದ್ರತಾ ಅಧಿಕಾರಿ ಗೇಲ್ ಸ್ಮಿತ್ ತಿಳಿಸಿದ್ದಾರೆ.

Karnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶKarnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಪ್ರಯಾಣಿಸುವವರಿಗೆ ಅಮೆರಿಕ ನಿರ್ಬಂಧ ಹೇರಿದೆ. ಈ ನಿಯಮ ಅಮೆರಿಕನ್ ನಾಗರಿಕರು, ಶಾಶ್ವತ ನಿವಾಸಿಗಳು ಅಥವಾ ಇತರ ವಿನಾಯಿತಿ ಪಡೆದವರಿಗೆ ಅನ್ವಯಿಸುವುದಿಲ್ಲ. ಈ ನಿಯಮ ಮೇ.4 ರಿಂದ ಜಾರಿಯಾಗಲಿದೆ ಎಂದು ಜೆನ್ ಸಾಕಿ ಮಾಹಿತಿ ನೀಡಿದ್ದಾರೆ.

English summary
Israel barred its citizens from travelling to India and six other countries, citing high Covid infection rates there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X