ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಿಕ್ಕಾರ ಕೂಗಲು ಪ್ರಧಾನಿ ನಿವಾಸದ ಎದುರೇ ಸಾವಿರಾರು ಜನ!

|
Google Oneindia Kannada News

ಜೆರುಸಲೆಂ, ಆಗಸ್ಟ್.02: ಇಸ್ರೇಲ್ ನಲ್ಲಿ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ವಿರುದ್ಧ ಜನವಿರೋಧಿ ಅಲೆ ಎದ್ದಿದೆ. ಕಳೆದೊಂದು ವಾರಗಳಿಂದ ರಾಜಧಾನಿ ಜೆರುಸಲೆಂನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕಾವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

Recommended Video

ಭಾರತವನ್ನ ಸೇರಿಸಿಕೊಂಡಿರುವ ಚೀನಾದ ಹೊಸ ನಕ್ಷೆ ಮುದ್ರಣ | Oneindia Kannada

ಕಳೆದೊಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆ ಕಾವು ಏರುತ್ತಲೇ ಇದೆ. ಶನಿವಾರ ಜೆರುಸಲೆಂ ಕೇಂದ್ರ ಭಾಗದ ಟೆಲ್ ಅವಿವ್ ಸಮೀಪದಲ್ಲಿ ಇರುವ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅಧಿಕೃತ ನಿವಾಸದ ಎದುರಿನಲ್ಲಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದರು.

ರಾಷ್ಟ್ರಾಧ್ಯಕ್ಷ, ಪ್ರಧಾನಿಗೂ ಅಂಟಿದ ಕೊವಿಡ್-19: ಅತಿದೊಡ್ಡ ಪಟ್ಟಿ!ರಾಷ್ಟ್ರಾಧ್ಯಕ್ಷ, ಪ್ರಧಾನಿಗೂ ಅಂಟಿದ ಕೊವಿಡ್-19: ಅತಿದೊಡ್ಡ ಪಟ್ಟಿ!

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೇಶದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಮತ್ತು ನಿಯಂತ್ರಣವನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಈ ಹಿನ್ನೆಲೆ ಕೂಡಲೇ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಕ್ರೈಂ ಮಿನಿಸ್ಟರ್ ಎಂಬ ಪೋಸ್ಟರ್ ಪ್ರದರ್ಶನ

ಕ್ರೈಂ ಮಿನಿಸ್ಟರ್ ಎಂಬ ಪೋಸ್ಟರ್ ಪ್ರದರ್ಶನ

ಇಸ್ರೇಲ್ ಬಾವುಟಗಳ ಜೊತೆಗೆ ಕ್ರೈಂ ಮಿನಿಸ್ಟರ್ ಎಂಬ ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟನಾಕಾರರು ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ವಿರುಗ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಭ್ರಷ್ಟಾಚಾರದಲ್ಲಿ ನಿರತರಾಗಿರುವ ಪ್ರಧಾನಿಯು ಸಾರ್ವಜನಿಕರ ಜೊತೆಗೆ ಸಂಪರ್ಕವನ್ನೇ ಹೊಂದಿಲ್ಲ ಎಂದು ಆರೋಪಿಸಿದರು.

9 ವರ್ಷಗಳ ಹಿಂದೆ ಹೊತ್ತಕೊಂಡ ಹೋರಾಟದ ಕಿಚ್ಚು

9 ವರ್ಷಗಳ ಹಿಂದೆ ಹೊತ್ತಕೊಂಡ ಹೋರಾಟದ ಕಿಚ್ಚು

ದೇಶದಲ್ಲಿ ದಿನಬಳಕೆ ಸರಕು ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬದುಕುವುದೇ ಕಷ್ಟವಾಗುತ್ತಿದೆ. ಸರ್ಕಾರವು ಸರಿಯಾದ ರೀತಿ ಆಡಳಿತ ನಿರ್ವಹಿಸುತ್ತಿಲ್ಲ ಎಂದು 2011ರಿಂದಲೇ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದವು. ಪ್ರಧಾನಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದ್ದಂತೆ ಈ ಪ್ರತಿಭಟನೆಯ ಕಾವು ಮತ್ತಷ್ಟು ಏರಿಕೆಯಾಗಿದೆ.

ಎಡಪಂಥೀಯರ ವಿರುದ್ಧ ಬೆಂಜಮಿನ್ ನೆತನ್ಯಾಹು ಆರೋಪ

ಎಡಪಂಥೀಯರ ವಿರುದ್ಧ ಬೆಂಜಮಿನ್ ನೆತನ್ಯಾಹು ಆರೋಪ

ಇಸ್ರೇಲ್ ನಲ್ಲಿ ಜನಜೀವನ ಸರಳಗೊಳಿಸಿ ಎಲ್ಲ ಸವಾಲುಗಳನ್ನು ಎದುರಿಸಲು ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಪ್ರಯತ್ನಿಸುತ್ತಿದ್ದಾರೆ. ಆದರೆ ದೇಶದಲ್ಲಿ ಶಾಂತಿ ಕದಡುವುದರ ಹಿಂದೆ ಎಡಬಂಥೀಯರು ಮತ್ತು ಅರಾಜಕತಾವಾದಿಗಳ ಕೈವಾಡವಿದೆ. ಅಂಥವರಿಗೆ ಉಚಿತ ಮತ್ತು ನಿರಂತರ ಪ್ರಚಾರಕ್ಕಾಗಿ ಎರಡು ಖಾಸಗಿ ವಾಹಿನಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇಷ್ಟುದಿನ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಗಳು ಇದೀಗ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಕೆಲವು ಎಡಪಂಥೀಯ ಪ್ರತಿಭಟನಾಕಾರರು ಪೊಲೀಸರ ಜೊತೆಗೆ ಸಂಘರ್ಷಕ್ಕೆ ಇಳಿದಿದ್ದು, ಶಸ್ತ್ರಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದರು. ತಮ್ಮ ವಿರುದ್ಧ ಹಿಂಸಾತ್ಮಕ ಹೋರಾಟ ನಡೆಸುತ್ತಿರುವ ಬಗ್ಗೆ ಬೆಂಜಮಿನ್ ನೆತನ್ಯಾಹು ಆರೋಪಿಸಿದ್ದಾರೆ.

ಕೊರೊನಾವೈರಸ್ ಜೊತೆಗೆ ನಿರುದ್ಯೋಗವೂ ಹೆಚ್ಚಳ

ಕೊರೊನಾವೈರಸ್ ಜೊತೆಗೆ ನಿರುದ್ಯೋಗವೂ ಹೆಚ್ಚಳ

ಇಸ್ರೇಲ್ ನಲ್ಲಿ ಕೊರೊನಾವೈರಸ್ ಕಾಣಿಸಿಕೊಂಡ ಆರಂಭದಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಲಾಯಿತು. ಅದಾಗಿ ಆರಂಭಿಕ ಹಂತದಲ್ಲಿಯೇ ದೇಶವನ್ನು ಆರ್ಥಿಕತೆಗೆ ತೆರೆದಿಡಲಾಯಿತು. ಅಂದರೆ ಎಲ್ಲ ರೀತಿ ವಹಿವಾಟು ಮತ್ತು ಸಂಚಾರಕ್ಕೆ ಅನುಮತಿ ನೀಡಲಾಯಿತು. ಇದರಿಂದ ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಪ್ರಧಾನಿ ನೆತನ್ಯಾಹು ಸರ್ಕಾರವು ಸಂಪೂರ್ಣವಾಗಿ ವಿಫಲವಾಯಿತು. ಇದರಿಂದಾಗಿ ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ದಾಖಲೆ ಮಟ್ಟದಲ್ಲಿ ಏರಿರೆಯಾಯಿತು. ಇದರ ಜೊತೆಗೆ ಶೇ.20ರಷ್ಟು ನಿರುದ್ಯೋಗ ಸಮಸ್ಯೆಯು ಉಲ್ಬಣವಾಯಿತು ಎನ್ನುವುದು ಪ್ರತಿಭಟನಾಕಾರರ ವಾದವಾಗಿದೆ.

ಕೊರೊನಾವೈರಸ್ ಅಂಕಿ-ಸಂಖ್ಯೆಗಳ ಪ್ರಮಾಣ ಹೇಗಿದೆ?

ಕೊರೊನಾವೈರಸ್ ಅಂಕಿ-ಸಂಖ್ಯೆಗಳ ಪ್ರಮಾಣ ಹೇಗಿದೆ?

ಆಗಸ್ಟ್.02ರಂದು ಜಾಗತಿಕ ಅಂಕಿ-ಅಂಶಗಳ ಪಟ್ಟಿಯಲ್ಲಿ ಇಸ್ರೇಲ್ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ಹೊಂದಿರುವ 33 ರಾಷ್ಟ್ರವಾಗಿದೆ. ದೇಶದಲ್ಲಿ 72315 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 45631 ಸೋಂಕಿತರು ಗುಣಮುಖರಾಗಿದ್ದಾರೆ. ಮಹಾಮಾರಿಗೆ ಇದುವರೆಗೂ 531 ಜನರು ಪ್ರಾಣ ಬಿಟ್ಟಿದ್ದು, 26153 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

English summary
Israel: Anti-Netanyahu Protests In Jerusalem Appear To Gain Steam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X