• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರೀ 3 ಕೋಟಿಗೆ ಲೈಟ್‌ಹೌಸ್‌ ಇರುವ ದ್ವೀಪ ಖರೀದಿಸಿ!

|
Google Oneindia Kannada News

ಸ್ಕಾಟ್ಯಾಂಡ್‌, ಆಗಸ್ಟ್‌ 08: ನಿಮಗೆ ಸ್ವಂತ ದ್ವೀಪ ಹೊಂದುವ ಕನಸಿದ್ದರೆ ಅದು ಕಡಿಮೆ ದುಡ್ಡಿಗೆ ಅದು ಇಲ್ಲಿದೆ. ಸ್ವಂತ ಮನೆ ಹೊಂದುವುದು ಎಲ್ಲರ ಬಾಳಿನ ಕನಸು. ಲಾನ್‌, ಸ್ವಿಮ್ಮಿಂಗ್‌ ಪೂಲ್‌ ಇವೇ ಮೊದಲಾದ ವಿಶೇಷ ಸೌಲಭ್ಯ ಇರುವ ಮನೆ ಬೆಲೆ ಕೇಳಿದರೆ ಶ್ರೀಸಾಮಾನ್ಯರ ತಲೆ ಗಿರ್‌ ಎನ್ನುವುದಂತೂ ಖಚಿತ.

ಆದರೆ 5 ರೂಮುಗಳು, ಒಂದು ಲೈಟ್‌ ಹೌಸ್‌, ಹೆಲಿಪ್ಯಾಡ್‌ ಅನ್ನು ಹೊಂದಿರುವ ದ್ವೀಪವು ಖರೀದಿಗೆ ಇದೆ. ಇದು ಭಾರತದ ಪ್ರಮುಖ ನಗರಗಳ ಆಯಕಟ್ಟಿನ ಜಾಗದ ಬೆಲೆಗಿಂತ ಕಡಿಮೆಗೆ ಲಭ್ಯವಿದೆ.

ಭಾರತ ಬಿಟ್ಟು ತೊಲಗಿ: ರೋಚಕ ಹೋರಾಟದ ಒಂದು ಝಲಕ್ ಭಾರತ ಬಿಟ್ಟು ತೊಲಗಿ: ರೋಚಕ ಹೋರಾಟದ ಒಂದು ಝಲಕ್

ಹೌದು, ಸ್ಕಾಟ್ಯಾಂಡ್‌ನ ಪ್ಲಾಡ್ಡಾ ಎಂಬ ಹೆಸರಿನ ದ್ವೀಪವು ರೂ. 3,35,34,872 ಕ್ಕೆ ಮಾರಾಟಕ್ಕೆ ಇದೆ. ಈ ದ್ವೀಪವು ಅರ್ರಾನ್ ಕರಾವಳಿಯಲ್ಲಿದೆ. 1790 ರ ದಶಕದ ಹಿಂದಿನ ಐದು ಬೆಡ್‌ರೂಮ್ ಹೊಂದಿರುವ ಮನೆಯೂ ಹೆಲಿಪ್ಯಾಡ್ ಮತ್ತು ಲೈಟ್‌ಹೌಸ್ ಅನ್ನು ಒಳಗೊಂಡಿದೆ. ಈ ದ್ವೀಪದ ಬೆಲೆಯು ಮುಂಬೈನಂತಹ ಮೆಟ್ರೋಪಾಲಿಟನ್ ನಗರದಲ್ಲಿ 3 ಬಿಎಚ್‌ಕೆ ಮನೆ ಬೆಲೆಗಿಂತ ಕಡಿಮೆಯಾಗಿದೆ.

28 ಎಕರೆ ಪ್ರದೇಶದ ದ್ವೀಪವು ಹಲವಾರು ವರ್ಷಗಳಿಂದ ಖಾಲಿಯಾಗೇ ಇದೆ. ಅದನ್ನು ಮತ್ತೆ ವಾಸ ಯೋಗ್ಯ ಮಾಡಲು ನವೀಕರಣ ಮಾಡಬೇಕಾದ ಅಗತ್ಯವಿದೆ. ಪ್ಲಾಡ್ಡಾ ದ್ವೀಪವನ್ನು ಅರ್ರಾನ್ ಎಸ್ಟೇಟ್ 30 ವರ್ಷಗಳ ಹಿಂದೆ ಫ್ಯಾಷನ್ ವಿನ್ಯಾಸಕರಾದ ಡೆರೆಕ್ ಮತ್ತು ಸ್ಯಾಲಿ ಮಾರ್ಟೆನ್ ಅವರಿಗೆ ಮಾರಾಟ ಮಾಡಿತ್ತು. ಅವರು ಪ್ರಸ್ತುತ ದ್ವೀಪದ ಮಾಲೀಕರಾಗಿದ್ದಾರೆ.

ಈ ದ್ವೀಪವು ಗ್ಲ್ಯಾಸ್ಗೋದಿಂದ 31 ಮೈಲುಗಳಷ್ಟು ದೂರದಲ್ಲಿದೆ. ಮುಖ್ಯ ಭೂಭಾಗದಲ್ಲಿರುವ ಆರ್ಡ್ರೊಸಾನ್‌ನಿಂದ ದೋಣಿಯ ಮೂಲಕ ಇದನ್ನು ತಲುಪಬಹುದಾಗಿದೆ. ಇದನ್ನು ನೈಟ್ ಫ್ರಾಂಕ್‌ನೊಂದಿಗೆ ಪಟ್ಟಿ ಮಾಡಲಾಗಿದೆ.

ಬಿಬಿಸಿ ಪ್ರಕಾರ, ಈ ದ್ವೀಪದಲ್ಲಿ 100 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ವಾಸವಾಗಿವೆ. ದ್ವೀಪದ ಲೈಟ್‌ಹೌಸ್ ಅನ್ನು 1990 ರಿಂದ ಎಡಿನ್‌ಬರ್ಗ್‌ನಿಂದ ಸ್ವಯಂಚಾಲಿತಗೊಳಿಸಲಾಗಿದೆ. ಸಾಂಪ್ರದಾಯಿಕ ಲ್ಯಾಂಟರ್ನ್ ಮತ್ತು ಲೆನ್ಸ್ ಅನ್ನು ಗೋಪುರದ ಮೇಲ್ಭಾಗದಲ್ಲಿ ಸೌರಶಕ್ತಿ- ಚಾಲಿತ ಎಲ್‌ಇಡಿ ದೀಪಗಳಿಂದ ಬದಲಾಯಿಸಲಾಗಿದೆ ಎಂದು ನೈಟ್ ಫ್ರಾಂಕ್‌ನ ವಕ್ತಾರರು ತಿಳಿಸಿದ್ದಾರೆ.

Island with a lighthouse For Sale here for just 3 crores

ಹಿಂದಿನ ಲೈಟ್‌ಹೌಸ್ ಕಾವಲು ಕಾಯುವವರಿಗೆ ಮೀಸಲಿದ್ದು, ಮನೆಯು ಎರಡು ವಾಸದ ಕೋಣೆಗಳು ಮತ್ತು ಸ್ನಾನಗೃಹ, ಹಾಗೆಯೇ ಅಡುಗೆ ಮತ್ತು ಫ್ರೀಜರ್ ಕೋಣೆಯನ್ನು ಒಳಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಮನೆಯನ್ನು ವಾಸಕ್ಕೆ ಬಳಸಲಾಗಿಲ್ಲ. ನವೀಕರಣ ಮಾಡಬೇಕಾಗಿದೆ ಎನ್ನಲಾಗಿದೆ.

English summary
An island with 5 rooms, a lighthouse, a helipad is available for purchase. It is available at less than the cost of strategic locations in major cities of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X