ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಸ್ ವೇಗಾಸ್ ದಾಳಿ: ಹೊಣೆ ಹೊತ್ತ ಐಸಿಸ್ ಮೇಲೆ 'ಎಫ್‌ಬಿಐ'ಗೆ ಅನುಮಾನ

By Sachhidananda Acharya
|
Google Oneindia Kannada News

ಲಾಸ್ ವೇಗಾಸ್, ಅಕ್ಟೋಬರ್ 3: ಅಮೆರಿಕಾ ಇತಿಹಾಸದ ಭೀಕರ ನರಮೇಧ ಲಾಸ್ ವೇಗಾಸ್ ಶೂಟೌಟ್ ತಾನೇ ಮಾಡಿದ್ದು ಎಂದು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನಾ ಸಂಘಟನೆ (ಐಸಿಸ್) ಹೇಳಿಕೊಂಡಿದೆ. ಆದರೆ, ಬಂದೂಕುಧಾರಿಗೆ ಅಂತರಾಷ್ಟ್ರೀಯ ಉಗ್ರ ಸಂಘಟನೆಗಳ ಜತೆ ಸಂಪರ್ಕ ಇರಲೇ ಇಲ್ಲ ಎಂದು ಅಮೆರಿಕಾದ ಪೊಲೀಸರು ವಾದಿಸಿದ್ದಾರೆ.

ಅಮೆರಿಕಾ ಇತಿಹಾಸದಲ್ಲೇ ಭೀಕರ ಶೂಟೌಟ್, ನರಮೇಧಕ್ಕೆ 59 ಬಲಿ, 500 ಜನರಿಗೆ ಗಾಯಅಮೆರಿಕಾ ಇತಿಹಾಸದಲ್ಲೇ ಭೀಕರ ಶೂಟೌಟ್, ನರಮೇಧಕ್ಕೆ 59 ಬಲಿ, 500 ಜನರಿಗೆ ಗಾಯ

ಲಾಸ್ ವೇಗಾಸ್ ನ ಮ್ಯಾಂಡಲಾಯ್ ಬೇ ರೆಸಾರ್ಟ್ ನಲ್ಲಿ ಭಾನುವಾರ ರಾತ್ರಿ ಸ್ಟೀಫನ್ ಪ್ಯಾಡ್ಡಾಕ್ ಎಂಬಾತ ಯದ್ವಾ ತದ್ವಾ ಗುಂಡಿನ ಮಳೆಗರೆದ ಪರಿಣಾಮ 59ಜನ ಸಾವನ್ನಪ್ಪಿ 515ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

Islamic State group claims Las Vegas attack

ಇದನ್ನು ಇತ್ತೀಚೆಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ನಮ್ಮ ಸೈನಿಕ ನಡೆಸಿದ್ದಾಗಿ ಐಸಿಸ್ ತನ್ನ ಮಾಧ್ಯಮ 'ಅಮಾಕ್' ಮೂಲಕ ಹೇಳಿಕೆ ನೀಡಿದೆ. ಜಿಹಾದಿಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವ ದೇಶಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಅದು ಹೇಳಿದೆ.

ಆದರೆ, ಐಸಿಸ್ ವಾದವನ್ನು ತಳ್ಳಿ ಹಾಕಿರುವ ಅಮೆರಿಕಾದ ತನಿಖಾ ಸಂಸ್ಥೆ ಎಫ್ಬಿಐ ಮತ್ತು ಅಲ್ಲಿನ ಸ್ಥಳೀಯ ಪೊಲೀಸರು ಫ್ಯಾಡ್ಡಾಕ್ ಗೆ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜತೆ ಸಂಬಂಧವೇ ಇರಲಿಲ್ಲ ಎಂದು ವಾದಿಸಿದ್ದಾರೆ.

ಇದೇ ಮೊದಲ ಬಾರಿಗೆ ಐಸಿಸ್ ವಾದವನ್ನು ಅಂತರಾಷ್ಟ್ರೀಯ ಭಯೋತ್ಪಾದಕ ತಜ್ಞರೂ ತಳ್ಳಿ ಹಾಕುತ್ತಿದ್ದಾರೆ. ಈ ಬಾರಿ ಐಸಿಸ್ ವಾದ ಸಾಮಾನ್ಯಕ್ಕಿಂತ ಭಿನ್ನವಾಗಿದೆ. ಇದರಲ್ಲೇನೋ ಮೋಸ ಅಡಗಿದೆ ಎಂದು ಅನುಮಾನಿಸಿದ್ದಾರೆ.

English summary
The Islamic State group claimed today that the shooting massacre in Las Vegas was carried out by one of its "soldiers" who had "converted to Islam" months ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X