ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದ ಸರಣಿ ಸ್ಫೋಟಕ್ಕೆ ಇಸ್ಲಾಮಿಕ್ ಸ್ಟೇಟ್ ಉಗ್ರರೇ ಹೊಣೆ

By ವಿಕಾಸ್ ನಂಜಪ್ಪ
|
Google Oneindia Kannada News

ಕೊಲಂಬೊ, ಏಪ್ರಿಲ್ 23: ಈಸ್ಟರ್ ದಿನದಂದು ಶ್ರೀಲಂಕಾದ ವಿವಿಧೆಡೆ ಸರಣಿ ಬಾಂಬ್ ಸ್ಫೋಟಕ್ಕೆ ಕಾರಣವಾಗಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರರು ಎಂಬುದು ದೃಢಪಟ್ಟಿದೆ. ಉಗ್ರ ಸಂಘಟನೆಯ ಎಎಂಎಕ್ಯೂ ಸುದ್ದಿ ವಾಹಿನಿಯಲ್ಲಿ ಮಂಗಳವಾರದಂದು ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.

ಶ್ರೀಲಂಕಾದಲ್ಲಿ ಭಾನುವಾರದಂದು ನಡೆದ 8 ಸ್ಫೋಟಗಳಲ್ಲಿ 321ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಕೊಲಂಬೋ ಸ್ಫೋಟಕ್ಕೂ ನಮಗೂ ಸಂಬಂಧವಿಲ್ಲ : ತಮಿಳು ಸಂಘಟನೆಕೊಲಂಬೋ ಸ್ಫೋಟಕ್ಕೂ ನಮಗೂ ಸಂಬಂಧವಿಲ್ಲ : ತಮಿಳು ಸಂಘಟನೆ

ನ್ಯೂಜಿಲೆಂಡ್ ನಲ್ಲಿ ಮಸೀದಿಗಳ ಮೇಲೆ ಇತ್ತೀಚೆಗೆ ನಡೆದ ದಾಳಿಯ ಪ್ರತೀಕಾರ ರೂಪವಾಗಿ ಕೊಲಂಬೋ, ನೆಗೊಂಬೋದಲ್ಲಿನ ಚರ್ಚ್, ಹೋಟೆಲ್ ಗಳಲ್ಲಿ ಬಾಂಬ್ ಸ್ಫೋಟ ನಡೆಸಲಾಗಿದೆ ಎರಡು ಸ್ಥಳೀಯ ಇಸ್ಲಾಮಿಕ್ ಉಗ್ರ ಸಂಘಟನೆಗಳು ಕೃತ್ಯ ಎಸಗಿವೆ ಎಂದು ಶ್ರೀಲಂಕಾದ ರಕ್ಷಣಾ ಸಚಿವ ರುವಾನ್ ವಿಜೆವರ್ದನೆ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳುಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು

50 ಮಂದಿ ಸಾವಿಗೆ ಕಾರಣವಾಗಿದ್ದ ಈ ದುರ್ಘಟನೆಯ ಸೇಡನ್ನು ತೀರಿಸಿಕೊಳ್ಳುವುದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಾರ್ಚ್ ತಿಂಗಳಿನಲ್ಲಿ ಈ ಬಗ್ಗೆ ಸುಳಿವು

ಮಾರ್ಚ್ ತಿಂಗಳಿನಲ್ಲಿ ಈ ಬಗ್ಗೆ ಸುಳಿವು

ಮಾರ್ಚ್ ತಿಂಗಳಿನಲ್ಲಿ ಇಸ್ಲಾಮಿಕ್ ಸ್ಟೇಟ್ ವಕ್ತಾರ ಅಬು ಹಸನ್ ಅಲ್ ಮುಜಹಿರ್ ಅವರು ಆಡಿಯೋ ಸಂದೇಶ ಕಳಿಸಿ, ನ್ಯೂಜಿಲೆಂಡ್ ಮಸೀದಿ ಮೇಲಿನ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಹೇಳಿದ್ದ. 50 ಮಂದಿ ಸಾವಿಗೆ ಕಾರಣವಾಗಿದ್ದ ಈ ದುರ್ಘಟನೆಯ ಸೇಡನ್ನು ತೀರಿಸಿಕೊಳ್ಳುವುದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಚಿತ್ರದಲ್ಲಿ : ಟೆಲಿಗ್ರಾಮ್ ಅಪ್ಲಿಕೇಷನ್ ನಲ್ಲಿ ಅನೇಕ ಗ್ರೂಪ್ ಗಳಲ್ಲಿ ಹರಿದಾಡಿದ ಉಗ್ರ ಸಂಘಟನೆಯ ಮೂವರು ಕಾರ್ಯಕರ್ತರ ಪೈಕಿ ಒಬ್ಬನ ಫೋಟೋ.
ಇಸ್ಲಾಮಿಕ್ ಸ್ಟೇಟ್ ವಕ್ತಾರ ಅಬು ಹಸನ್ ಅಲ್ ಮುಜಹಿರ್

ಇಸ್ಲಾಮಿಕ್ ಸ್ಟೇಟ್ ವಕ್ತಾರ ಅಬು ಹಸನ್ ಅಲ್ ಮುಜಹಿರ್

ಇಸ್ಲಾಮಿಕ್ ಸ್ಟೇಟ್ ವಕ್ತಾರ ಅಬು ಹಸನ್ ಅಲ್ ಮುಜಹಿರ್ ಹಂಚಿದ್ದ 44 ನಿಮಿಷದ ಈ ಆಡಿಯೋ ಸಂದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ವಿರುದ್ಧ ನಡೆದಿರುವ ಅಭಿಯಾನ ಅಥವಾ ಪ್ರತಿಭಟನೆಗಳನ್ನು ಹತ್ತಿಕ್ಕಲಾಗುವುದು, ಸಿರಿಯಾದಲ್ಲಿ ಐಎಸ್ಐಎಸ್ ವಿರುದ್ಧ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿ, ಸದ್ಯದಲ್ಲೇ ನ್ಯೂಜಿಲೆಂಡ್ ನ ಎರಡು ಮಸೀದಿ ಮೇಲಿನ ದಾಳಿಯ ಪ್ರತೀಕಾರ ತೆಗೆದುಕೊಳ್ಳಲಾಗುವುದು ಎಂದಿದ್ದ.

ಅಧಿಕೃತವಾಗಿ ಯಾರೂ ಹೊಣೆ ಹೊತ್ತುಕೊಂಡಿಲ್ಲ

ಅಧಿಕೃತವಾಗಿ ಯಾರೂ ಹೊಣೆ ಹೊತ್ತುಕೊಂಡಿಲ್ಲ

ಸೋಮವಾರದಂದು ಟೆಲಿಗ್ರಾಂ ಅಪ್ಲಿಕೇಷನ್ ನಲ್ಲಿ ಕೊಲಂಬೋ ದಾಳಿಗೆ ಸಂಬಂಧಿಸಿದ ಮೂವರು ಆತ್ಮಾಹುತಿ ದಾಳಿಕೋರರನ್ನು ಪರಿಚಯಿಸಿದ ವಿಡಿಯೋ ಹಂಚಿಕೆಯಾಗಿತ್ತು. ಅಬು ಉಬೈದಾ, ಅಬು ಮುಖ್ತಾರ್ ಹಾಗೂ ಅಬು ಬರಾ ಅವರು ಚರ್ಚ್ ಪ್ರವೇಶಿಸಿ, ಸ್ಫೋಟಿಸುವ ಚಿತ್ರ, ವಿಡಿಯೋ ಇದರಲ್ಲಿತ್ತು.

ಆದರೆ, ಇಲ್ಲಿ ತನಕ ಬಹಿರಂಗವಾಗಿ ಯಾವುದೇ ಉಗ್ರ ಸಂಘಟನೆಗಳು ಈಸ್ಟರ್ ದಿನದ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಸ್ಥಳೀಯ ಇಸ್ಲಾಮಿಕ್ ಸಂಘಟನೆಗಳಿಗೆ ವಿದೇಶಿ ಉಗ್ರ ಸಂಘಟನೆಯಿಂದ ಸೂಚನೆ ನೀಡಲಾಗಿತ್ತು ಎಂಬ ವರದಿ ಬಂದಿದೆ.
ತೌಹಿದ್ ಸಂಘಟನೆ ಬಗ್ಗೆ ಅನುಮಾನ, ಗೊಂದಲ

ತೌಹಿದ್ ಸಂಘಟನೆ ಬಗ್ಗೆ ಅನುಮಾನ, ಗೊಂದಲ

ಟಿಎನ್ಟಿಜೆ ಪ್ರಧಾನ ಕಾರ್ಯದರ್ಶಿ ಈ ಬಗ್ಗೆ ಸ್ಪಷ್ಟನೆ ನೀಡಿ, ತೌಹಿದ್ ಎಂಬ ಪದ ಎಲ್ಲಾ ಸಂಘಟನೆಗಳಲ್ಲೂ ಸಮಾನವಾಗಿ ಬಳಕೆಯಲ್ಲಿರುವುದರಿಂದ ಗೊಂದಲ, ಅನುಮಾನ ಮೂಡುವುದು ಸಹಜ ಹಾಗೂ ದುರದೃಷ್ಟಕರ. ಟಿಎನ್ಟಿಜೆ ಯಾವುದೇ ಕಾರಣಕ್ಕೂ ಎಂದಿಗೂ ಉಗ್ರವಾದವನ್ನು ಒಪ್ಪುವುದಿಲ್ಲ ಹಾಗೂ ಬೆಂಬಲಿಸುವುದಿಲ್ಲ. ಅಮಾಯಕರ ಸಾವಿಗೆ ಕಾರಣವಾದ ಸಂಘಟನೆಗೆ ಧಿಕ್ಕಾರವಿರಲಿ ಎಂದು ಹೇಳಿದ್ದಾರೆ.

English summary
The Islamic State has claimed responsibility for the suicide bombings that rocked Sri Lanka on Sunday, in which 321 people were killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X