ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಾಮಿಕ್ ಸ್ಟೇಟ್, ಅಲ್ ಕೈದಾದಂಥವು ಅಮೆರಿಕದ ಸಾಹಸ ಉತ್ಪನ್ನಗಳು

|
Google Oneindia Kannada News

ಇಸ್ಲಾಮಿಕ್ ಸ್ಟೇಟ್, ಅಲ್ ಕೈದಾದಂಥ ಭಯೋತ್ಪಾದಕ ಸಂಘಟನೆಗಳು ಮತ್ತು ಅಫ್ಘಾನಿಸ್ತಾನ ಹಾಗೂ ಇರಾಕ್ ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವುದು ಪಶ್ಚಿಮ ಹಾಗೂ ದಕ್ಷಿಣ ಏಷ್ಯಾದಲ್ಲಿ ಅಮೆರಿಕ ಸಾಹಸದ ಉತ್ಪನ್ನಗಳು ಎಂದು ಗುರುವಾರ ಇರಾನ್ ಹೇಳಿದೆ. ಅಮೆರಿಕದ ಕಾರ್ಯದರ್ಶಿ ಮೈಕ್ ಪೊಂಪೆ ಬುಧವಾರ ಮಾಡಿರುವ ಭಯೋತ್ಪಾದನೆಯ ಆರೋಪಕ್ಕೆ ಇರಾನ್ ಈ ರೀತಿ ಪ್ರತಿಕ್ರಿಯೆ ನೀಡಿದೆ.

ಕಟುವಾದ ಶಬ್ದಗಳಲ್ಲಿ ಪ್ರತಿಕ್ರಿಯೆ ನೀಡಿರುವ ಇರಾನ್, ತಳ ಮಟ್ಟದಲ್ಲಿನ ವಾಸ್ತವವನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಪರಿಣಾಮ ಜಗತ್ತಿನ ಇತರ ದೇಶಗಳ ಜತೆ ಅಮೆರಿಕ ಸಂಬಂಧವನ್ನು ಹಾಳುಗೆಡವಿದೆ ಹಾಗೂ ಕಷ್ಟದ ವಿಷಯಗಳ ಬಗ್ಗೆ ಮಾತುಕತೆಯೂ ಸಾಧ್ಯವಿಲ್ಲದಂತೆ ಆಗಿದೆ ಎಂದು ಹೇಳಿದೆ.

ಇರಾನ್-ಅಮೆರಿಕ ಯುದ್ಧ ಸನ್ನಿವೇಶ; ಭಾರತದ ತೈಲ ಸಂಗ್ರಹ 9.5 ದಿನಕ್ಕೆಇರಾನ್-ಅಮೆರಿಕ ಯುದ್ಧ ಸನ್ನಿವೇಶ; ಭಾರತದ ತೈಲ ಸಂಗ್ರಹ 9.5 ದಿನಕ್ಕೆ

ತಾಲಿಬಾನ್, ಅಲ್ ಕೈದಾ, ಐಎಸ್ ಐಎಸ್ ಗಳು ಪ್ರವರ್ಧಮಾನಕ್ಕೆ ಬಂದಿರುವುದು ಅಮೆರಿಕವು ಸಮಕಾಲೀನ ಪರಿಸ್ಥಿತಿಯಲ್ಲಿ ತೋರುತ್ತಿರುವ ಸಾಹಸದಿಂದ. ನಮ್ಮ ಪ್ರದೇಶವೂ ಸೇರಿದಂತೆ ಅಫ್ಘಾನಿಸ್ತಾನ, ಇರಾಕ್, ಸಿರಿಯಾ, ಯೆಮೆನ್ ಇಲ್ಲೆಲ್ಲ ಸಮಸ್ಯೆ ಆಗಿರುವುದರ ಮೂಲವು ಕಾನೂನು ಬಾಹಿರವಾದ ಅಮೆರಿಕ ಸೈನ್ಯದ ಹಸ್ತಕ್ಷೇಪ ಹಾಗೂ ಅಲ್ಲಿನ ಸಾಮಾಜಿಕ ನೀತಿಗಳಿಂದ ಎಂದು ಇರಾನ್ ರಾಯಭಾರ ಕಚೇರಿಯ ವಕ್ತಾರರು ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Islamic State, Al Qaeda are products of US adventurism: Iran

ಭಾರತದ ವಿದೇಶಾಂಗ ಸಚಿವ ಜೈಶಂಕರ್ ಜತೆಗಿನ ಪತ್ರಿಕಾ ಗೋಷ್ಠಿ ವೇಳೆ ಮೈಕ್ ಪೊಂಪೆ, ಭಯೋತ್ಪಾದನೆಯ ಅತಿ ದೊಡ್ಡ ಪ್ರಾಯೋಜಿತ ದೇಶ ಇರಾನ್ ಎಂದಿದ್ದರು.

English summary
Islamic State, Al Qaeda are products of US adventurism, said by Iran on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X