ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್ ವಿಮಾನ ನಿಲ್ದಾಣಕ್ಕೆ ಐಎಸ್‌ಐಎಸ್‌ ಉಗ್ರರ ದಾಳಿ ಭೀತಿ

|
Google Oneindia Kannada News

ಕಾಬೂಲ್, ಆಗಸ್ಟ್ 23; ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಾರಗಳು ಕಳೆದಿವೆ. ಈಗ ಅಲ್ಲಿ ಹೊಸ ಸರ್ಕಾರ ರಚನೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಐಎಸ್‌ಐಎಸ್ ಉಗ್ರರು ತಾಲಿಬಾನಿಗಳ ಜೊತೆ ಕೈ ಜೋಡಿಸಿದ್ದಾರೆಯೇ? ಎಂಬ ಆತಂಕದ ವಿಚಾರ ಬಹಿರಂಗವಾಗುತ್ತಿದೆ.

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಅಮೆರಿಕದವರನ್ನು ರಕ್ಷಣೆ ಮಾಡಲು ಕಾಬೂಲ್ ವಿಮಾನ ನಿಲ್ದಾಣಕ್ಕಿಂತ ಬೇರೆ ಪ್ರದೇಶವನ್ನು ಹುಡುಕಲಾಗುತ್ತಿದೆ. ಕಾಬೂಲ್ ವಿಮಾನ ನಿಲ್ದಾಣವನ್ನು ತಾಲಿಬಾನ್ ವಶಕ್ಕೆ ಪಡೆಯಲು ಐಎಸ್‌ಐಎಸ್ ಸಹಕಾರ ನೀಡುವ ನಿರೀಕ್ಷೆ ಇದೆ.

ಕರ್ನಾಟಕದಲ್ಲಿ ಐಎಸ್‌ಐಎಸ್ ಚಟುವಟಿಕೆ; ಎನ್‌ಐಎ ಚಾರ್ಜ್ ಶೀಟ್ ಕರ್ನಾಟಕದಲ್ಲಿ ಐಎಸ್‌ಐಎಸ್ ಚಟುವಟಿಕೆ; ಎನ್‌ಐಎ ಚಾರ್ಜ್ ಶೀಟ್

ಕಾಬೂಲ್‌ನಲ್ಲಿರುವ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಮೆರಿಕ, ನ್ಯಾಟೋ ಪಡೆಯ ಹಿಡಿತದಲ್ಲಿದೆ. ಆದರೆ ತಾಲಿಬಾನಿಗಳು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಹಾಕಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಹೊರಗೆ ಗುಂಡಿನ ದಾಳಿ ಸಹ ನಡೆದ ವರದಿಯಾಗಿದೆ.

ಅಫ್ಘಾನಿಸ್ತಾನ ತಾಲಿಬಾನ್ ಹಿಡಿತದಲ್ಲಿದ್ದರೂ ಅಮೆರಿಕಕ್ಕೆ ಬೆದರಿಕೆ: ಬೈಡನ್ಅಫ್ಘಾನಿಸ್ತಾನ ತಾಲಿಬಾನ್ ಹಿಡಿತದಲ್ಲಿದ್ದರೂ ಅಮೆರಿಕಕ್ಕೆ ಬೆದರಿಕೆ: ಬೈಡನ್

 ISIS Threat For Kabul Airport US Troops On Alert

ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ತಾಲಿಬಾನಿಗಳು ಪ್ರಯತ್ನ ನಡೆಸಿದ್ದಾರೆ. ಇದು ಆತಂಕದ ಬೆಳವಣಿಗೆಯಾಗಿದೆ. ವಿಮಾನ ನಿಲ್ದಾಣ ತೊರೆಯುವಂತೆ ಐಎಸ್‌ಐಎಸ್‌ನಿಂದ ಬೆದರಿಕೆ ಸಂದೇಶಗಳು ಬರುತ್ತಿದೆ ಎಂದು ಅಮೆರಿಕ ಸೇನೆಯ ಅಧಿಕಾರಿಗಳು ಹೇಳಿದ್ದಾರೆ.

 ಹಿಂಸಾಚಾರ ಅಂತ್ಯಕ್ಕೆ ತಾಲಿಬಾನ್‌ ಜೊತೆ ಅಧಿಕಾರ ಹಂಚಿಕೆಗೆ ಮುಂದಾದ ಅಫ್ಘಾನಿಸ್ತಾನ? ಹಿಂಸಾಚಾರ ಅಂತ್ಯಕ್ಕೆ ತಾಲಿಬಾನ್‌ ಜೊತೆ ಅಧಿಕಾರ ಹಂಚಿಕೆಗೆ ಮುಂದಾದ ಅಫ್ಘಾನಿಸ್ತಾನ?

ಬೇರೆ-ಬೇರೆ ದೇಶಗಳ ನಾಗರಿಕರನ್ನು ಅಫ್ಘಾನಿಸ್ತಾನದಿಂದ ರಕ್ಷಣೆ ಮಾಡಲು ಕಾಬೂಲ್‌ ವಿಮಾನ ನಿಲ್ದಾಣ ಪ್ರಮುಖ ಪ್ರದೇಶವಾಗಿದೆ. ಒಂದು ವೇಳೆ ಐಎಸ್‌ಐಎಸ್‌ ಸಹಕಾರದಿಂದ ವಿಮಾನ ನಿಲ್ದಾಣ ತಾಲಿಬಾನಿಗಳ ವಶಕ್ಕೆ ಹೋದರೆ ಬೇರೆ ದೇಶಗಳ ವಿಮಾನ ಸಂಚಾರಕ್ಕೆ ಅಡ್ಡಿಯಾಗಲಿದೆ.

"ನಾವು ಬೇರೆ ಪ್ರದೇಶಗಳನ್ನು ಗುರುತಿಸುತ್ತಿದ್ದೇವೆ. ನಾಗರಿಕರನ್ನು ಚಿಕ್ಕ-ಚಿಕ್ಕ ಗುಂಪುಗಳಾಗಿ ವಿಂಗಡನೆ ಮಾಡಿ, ಅಲ್ಲಿಂದ ರಕ್ಷಣೆ ಮಾಡಲಾಗುತ್ತದೆ" ಎಂದು ಅಮೆರಿಕ ಸೇನೆಯ ಅಧಿಕಾರಿಗಳು ಹೇಳಿದ್ದಾರೆ. ಬೆದರಿಕೆ ಸಂದೇಶ ಕಳಿಸುತ್ತಿರುವ ಐಎಸ್‌ಐಎಸ್ ಉಗ್ರರು ಅಮೆರಿಕದ ಸೇನೆ ಮೇಲೆ ದಾಳಿ ಮಾಡುವ ಸಾಧ್ಯತೆ ಸಹ ಇರುವ ಕಾರಣ ಎಚ್ಚರಿಕೆ ವಹಿಸಲಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತ ಅಫ್ಘಾನಿಸ್ತಾನದ ಪರಿಸ್ಥಿತಿ ನಿಭಾಯಿಸಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನಲೆಯಲ್ಲಿಯೇ ಐಎಸ್‌ಐಎಸ್‌ ಉಗ್ರರು ಬೆದರಿಕೆ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಇದು ಅಫ್ಘಾನಿಸ್ತಾನದಲ್ಲಿರುವ ಬೇರೆ ದೇಶಗಳ ನಾಗರಿಕರಲ್ಲಿಯೂ ಆತಂಕ ಮೂಡಿಸಿದೆ.

ಶನಿವಾರವೇ ಅಮೆರಿಕ ರಾಯಭಾರ ಕಚೇರಿ ತನ್ನ ದೇಶದ ಜನರಿಗೆ ಕಾಬೂಲ್ ವಿಮಾನ ನಿಲ್ದಾಣಕ್ಕೆ ತೆರಳಬೇಡಿ. ಅಲ್ಲಿ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದೆ. ಆಗಸ್ಟ್ 14ರ ಬಳಿಕ ಅಮೆರಿಕ ಅಫ್ಘಾನಿಸ್ತಾನದಿಂದ 17,000 ಜನರನ್ನು ಸ್ಥಳಾಂತರ ಮಾಡಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಜೊತೆ ಶನಿವಾರ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಮತ್ತು ಐಎಸ್‌ಐಎಸ್‌ನಿಂದ ಬೆದರಿಕೆ ಬಂದರ ಅದನ್ನು ನಿಭಾಯಿಸುವ ಕುರಿತು ಚರ್ಚೆಯನ್ನು ನಡೆಸಿದ್ದಾರೆ ಎಂದು ವೈಟ್ ಹೌಸ್ ತಿಳಿಸಿದೆ.

ಪೆಂಟಗಾನ್‌ನಲ್ಲಿರುವ ಅಮೆರಿಕ ಸೇನೆಯ ಮುಖ್ಯ ಕಚೇರಿ ಕಾಬೂಲ್ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪರಿಸ್ಥಿತಿ ಬಗ್ಗೆ ಕಣ್ಗಾವಲು ಇಟ್ಟಿದೆ. ಐಎಸ್‌ಐಎಸ್ ಕಾರ್ ಬಾಂಬ್, ಆತ್ಮಾಹುತಿ ಬಾಂಬ್ ದಾಳಿ ನಡೆಸಬಹುದು ಎಂದು ಅಂದಾಜಿಸಲಾಗಿದ್ದು, ಕಟ್ಟೆಚ್ಚರವಹಿಸಲಾಗಿದೆ.

ಭಾರತ ಸೇರಿದಂತೆ ವಿವಿಧ ದೇಶಗಳ ನಾಗರಿಕರು ಅಫ್ಘಾನಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿ ಸಿಲುಕಿದ್ದಾರೆ. ಅವರು ಸ್ವ ದೇಶಕ್ಕೆ ಮರಳಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸುದುವುದು ಅನಿವಾರ್ಯವಾಗಲಿದೆ. ಆದರೆ ವಿಮಾನ ನಿಲ್ದಾಣಕ್ಕೆ ಆಗಮಿಸಲು ತಾಲಿಬಾನ್ ಉಗ್ರರು ಅಡ್ಡಿಪಡಿಸುತ್ತಿದ್ದಾರೆ.

ಐಎಸ್‌ಐಎಸ್ ಉಗ್ರರು ತಾಲಿಬಾನಿಗಳಿಂತ ಅಪಾಯಕಾರಿ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಅವರ ಬಳಿ ಇದ್ದು, ಆತ್ಮಾಹುತಿ ಬಾಂಬ್ ದಾಳಿ, ಕಾರ್ ಬಾಂಬ್ ದಾಳಿ, ಶಿರಚ್ಛೇಧದಂತೆ ಕೌರ್ಯವನ್ನು ಮೆರೆಯುತ್ತಾರೆ. ಉಗ್ರರು ತಾಲಿಬಾನಿಗಳ ಜೊತೆ ಕೈ ಜೋಡಿಸಿದರೆ ಆತಂಕ ಹೆಚ್ಚಾಗಲಿದೆ.

ಇರಾಕ್, ಸಿರಿಯಾ ಭಾಗದಲ್ಲಿ ಸಕ್ರಿಯರಾಗಿರುವ ಐಎಸ್‌ಐಎಸ್ ಉಗ್ರರಿಗೆ ಅಮೆರಿಕ ಮೇಲೆ ಮೊದಲಿನಿಂದಲೂ ದ್ವೇಷ ಹೆಚ್ಚು. ವಿವಿಧ ರಾಷ್ಟ್ರಗಳು ತಮ್ಮ ನಾಗರಿಕರನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರ ಮಾಡಲು ಪ್ರಯತ್ನ ನಡೆಸುತ್ತಿರುವಾಗ ಐಎಸ್‌ಐಎಸ್ ಉಗ್ರರ ಪ್ರವೇಶದ ಬಗ್ಗೆ ಹಬ್ಬಿರುವ ಸುದ್ದಿ ಆತಂಕ ಮೂಡಿಸಿದೆ.

English summary
Airport in Kabul Afghanistan have threats from the Islamic State of Iraq and Syria (ISIS). Now airport under America army hands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X