ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್‌ಗೆ ಹೆದರಿ ಬಾಲ ಮುದುರಿಕೊಂಡ ಉಗ್ರರು

|
Google Oneindia Kannada News

ನವದೆಹಲಿ, ಮಾರ್ಚ್ 16: ವಿಶ್ವದೆಲ್ಲೆಡೆ ಕೊರೊನಾವೈರಸ್ ಭೀತಿಯಲ್ಲಿ ಎಲ್ಲವೂ ಸ್ತಬ್ದವಾಗುತ್ತಿದೆ. ಅತಿ ಶ್ರೀಮಂತರಿಂದ ಹಿಡಿದು ಬಡವರ ತನಕ ವೈರಾಣು ಪ್ರಭಾವ ಕಂಡು ಬಂದಿದೆ. ಈ ನಡುವೆ ಜಗತ್ತಿಗೆ ಮಾರಕವಾಗಿರುವ ಪಾತಕಿಗಳಿಗೂ ಕೊರೊನಾವೈರಸ್ ಚುರುಕು ಮುಟ್ಟಿಸಿದೆ. ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ತನ್ನ ಚಟುವಟಿಕೆಗಳನ್ನು ಬಂದ್ ಮಾಡಿದೆ.

ಭಯೋತ್ಪಾದನಾ ಪಡೆಗಳಿಗೆ ಸದ್ಯಕ್ಕೆ ಯಾವುದೇ ರೀತಿ ಚಟುವಟಿಕೆ, ಪ್ರಯಾಣ, ಜನ ಸಂದಣಿ ನಡುವೆ ಕಾಣಿಸಿಕೊಳ್ಳದಿರುವಂತೆ ಸೂಚನೆ ಕಳಿಸಲಾಗಿದೆ. ಅಲ್ ನಬಾ ನ್ಯೂಸ್ ಲೆಟರ್ ಪ್ರಕಾರ, ದೇವರಲ್ಲಿ ನಂಬಿಕೆ ಇರಿಸಿ, ಶಾರ್ ಇ ನಿರ್ದೇಶನದಂತೆ ನಡೆದುಕೊಳ್ಳಿ, ಮಾಸ್ಕ್ ಧರಿಸಿ ಸ್ವಯಂ ಪ್ರತ್ಯೇಕವಾಗಿ ನೆಲೆಸಿ, ಕಾಯಿಲೆಗೆ ತುತ್ತಾದವರು ಕಂಡು ಬಂದರೆ ಮಿಕ್ಕವರು ಎಚ್ಚರವಾಗಿ ಅಲ್ಲಿಂದ ದೂರ ಉಳಿಯಿರಿ ಎಂದು ಜಾಗೃತಿ ಸಂದೇಶ ಕಳಿಸಲಾಗಿದೆ.

ISIS suspends all terror activity in wake of coronavirus

ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು? ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?

ಇದಲ್ಲದೆ ಸಾಂಕ್ರಾಮಿಕ ಪಿಡುದು ಇರುವ ದೇಶಗಳಲ್ಲಿ ಸುಳಿಯಬೇಡಿ, ಸಾರ್ವಜನಿಕರು ಹೆಚ್ಚಾಗಿರುವ ಸ್ಥಳಗಳಲ್ಲಿ ಸದ್ಯಕ್ಕೆ ಹೋಗಬೇಡಿ, ನಿಮ್ಮ ಮುಖವನ್ನು ಮುಚ್ಚಿಕೊಂಡು ಓಡಾಡಿ, ಸೀನು, ಕೆಮ್ಮು ಬಂದರೆ ಚಿಕಿತ್ಸೆ ಪಡೆದುಕೊಳ್ಳಿ. ಮುಖ್ಯವಾಗಿ ಯುರೋಪ್ ರಾಷ್ಟ್ರಗಳಿಗೆ ಕಾಲಿಡಬೇಡಿ ಎಂದು ಐಎಸ್ಐಎಸ್ ಮುಖಂಡರುಗಳು ತಮ್ಮ ಸದಸ್ಯರಿಗೆ ಸಂದೇಶ ಕಳಿಸಿದ್ದಾರೆ.

English summary
In the wake of the coronavirus outbreak, the Islamic State too has some advise. The ISIS has been sending out messages to protest its terrorists from the deadly virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X