ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ್ಯಾಪ್ ಟಾಪ್ ಬಾಂಬ್? ಬೆಚ್ಚಿಬೀಳಿಸುವ ಐಸಿಸ್ ನ ಹೊಸ ಆವಿಷ್ಕಾರ!

|
Google Oneindia Kannada News

ಇಸ್ರೇಲ್, ಜೂನ್ 13: ಲ್ಯಾಪ್ ಟಾಬ್ ಬ್ಯಾಟರಿಯನ್ನೇ ಹೋಲುವ, ಲ್ಯಾಪ್ ಟಾಫ್ ನಲ್ಲೇ ಅಳವಡಿಸಬಲ್ಲ ಹೊಸ ರೀತಿಯ ಬಾಂಬ್ ಅನ್ನು ಐಸಿಸ್ ಆವಿಷ್ಕರಿಸುತ್ತಿದೆ ಎಂಬ ಬೆಚ್ಚಿಬೀಳಿಸುವ ಮಾಹಿತಿಯನ್ನು ಇಸ್ರೇಲ್ ಸರ್ಕಾರ ಪತ್ತೆ ಮಾಡಿದೆ!

'ನೀವೇ ಮುಂದಿನ ಟಾರ್ಗೆಟ್' ಸೌದಿ ಅರೇಬಿಯಾಗೆ ಐಸಿಸ್ ಎಚ್ಚರಿಕೆ'ನೀವೇ ಮುಂದಿನ ಟಾರ್ಗೆಟ್' ಸೌದಿ ಅರೇಬಿಯಾಗೆ ಐಸಿಸ್ ಎಚ್ಚರಿಕೆ

ಇತ್ತೀಚೆಗೆ ಐಸಿಸ್ ನ ವೆಬ್ ಸೈಟ್ ವೊಂದನ್ನು ಹ್ಯಾಕ್ ಮಾಡಿದ್ದ ಇಸ್ರೇಲ್ ಗೆ ಐಸಿಸ್ ಇಂಥದೊಂದು ಆಘಾತಕಾರಿ ಬಾಂಬ್ ಅನ್ನು ಆವಿಷ್ಕರಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಬಾಂಬ್ ಥೇಟ್ ಲ್ಯಾಪ್ ಟಾಪ್ ಬ್ಯಾಟರಿಯನ್ನೇ ಹೋಲಲಿದ್ದು, ವಿಮಾನ ಪ್ರಯಾಣದ ಸಮಯದಲ್ಲಿ ತಪಾಸಣೆ ಮಾಡುವವರಿಗೂ ಇದರ ಬಗ್ಗೆ ಯಾವುದೇ ಅನುಮಾನ ಬಾರದಿರುವಂತೆ ಈ ಬಾಂಬ್ ಅನ್ನು ತಯಾರಿಸಲಾಗುತ್ತಿದೆಯಂತೆ.

ISIS's news target, Lap top bomb is true?

ಐಸಿಸ್ ನ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುವುದಂದ್ರೆ ಸುಲಭದ ಕೆಲಸವಲ್ಲ, ಸಿಕ್ಕಾಬಟ್ಟೆ ಚಾಣಾಕ್ಯ ತನದಿಂದ ತನ್ನ ವೆಬ್ ಸೈಟ್ ಗಳಲನ್ನು ಐಸಿಸ್ ನಿರ್ವಹಿಸುತ್ತದೆ. ಅಂಥಾದ್ದರಲ್ಲಿ ಅದರ ವೆಬ್ ಸೈಟ್ ಅನ್ನೇ ಹ್ಯಾಕ್ ಮಾಡುವಲ್ಲಿಯೂ ಇಸ್ರೇಲ್ ಯಶಸ್ವಿಯಾಗಿದ್ದು, ಇಂಥ ಆಘಾತಕಾರಿ ಮಾಹಿತಿಯನ್ನು ಕಲೆಹಾಕಿದೆ.

ಕಾಸರಗೋಡಲ್ಲಿ ಬಾಲಕಿಯನ್ನು ಐಸಿಸ್ ಗೆ ಸೇರ್ಪಡೆಗೊಳಿಸಲು ಯತ್ನಕಾಸರಗೋಡಲ್ಲಿ ಬಾಲಕಿಯನ್ನು ಐಸಿಸ್ ಗೆ ಸೇರ್ಪಡೆಗೊಳಿಸಲು ಯತ್ನ

ಈ ಲ್ಯಾಪ್ ಟಾಪ್ ಬಾಂಬ್ ಗಳು ಏರ್ ಪೋರ್ಟ್ ಗಳಲ್ಲಿರುವ ಬಾಂಬ್ ಪತ್ತೆ ಮಶೀನ್, ಎಕ್ಸ್ ರೇ ಮಶಿನ್ ಗಳನ್ನೂ ಮೋಸಗೊಳಿಸುವಷ್ಟು ತಾಂತ್ರಿಕವಾಗಿ ಮುಂದುವರಿದಿವೆಯಂತೆ! ಈ ಬಗ್ಗೆ ಅನುಮಾನವಿರುವುದರಿಂದಲೇ ಕಳೆದ ಮಾರ್ಚ್ ನಲ್ಲಿ ಅಮೆರಿಕಕ್ಕೆ ಟರ್ಕಿ ಮತ್ತು ಆಫ್ರಿಕದಿಂದ ತೆರಳುತ್ತಿದ್ದ ಪ್ರಯಾಣಿಕರ ಲ್ಯಾಪ್ ಟಾಪ್ ಗಳನ್ನು ವಿಮಾನದಲ್ಲಿ ಕೊಂಡೊಯ್ಯುವುದಕ್ಕೆ ನಿಷೇಧ ಹೇರಲಾಗಿತ್ತು.

ಮತ್ತಷ್ಟು ದಾಳಿ ಐಸಿಸ್ ನಿಂದ ಪಾಶ್ಚಿಮಾತ್ಯ ದೇಶಗಳಿಗೆ ಬೆದರಿಕೆಮತ್ತಷ್ಟು ದಾಳಿ ಐಸಿಸ್ ನಿಂದ ಪಾಶ್ಚಿಮಾತ್ಯ ದೇಶಗಳಿಗೆ ಬೆದರಿಕೆ

ಒಟ್ಟಿನಲ್ಲಿ ಈ ಲ್ಯಾಪ್ ಟಾಪ್ ಬಾಂಬ್ ಎಂಬ ಹೊಸ ಭೀತಿ ಜನರ ನಿದ್ದೆಕೆಡಿಸಿರುವುದಂತೂ ಸುಳ್ಳಲ್ಲ.

English summary
ISIS's news target , Lap top bomb is true? Some spy agency form Israeli government has proved that, the gossips about lap top bomb is true!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X