ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಧರ್ಮಗುರು ರಹೀಮುಲ್ಲಾ ಹಕ್ಕಾನಿ ಹತ್ಯೆ ಹೊಣೆ ಹೊತ್ತ ಐಸಿಸ್

|
Google Oneindia Kannada News

ಕಾಬೂಲ್, ಆಗಸ್ಟ್ 12: ಐಸಿಸ್ ವಿರುದ್ಧ ಉಗ್ರ ಭಾಷಣಗಳಿಗೆ ಹೆಸರಾಗಿದ್ದ ಹಿರಿಯ ತಾಲಿಬಾನ್ ಧರ್ಮಗುರು ರಹೀಮುಲ್ಲಾ ಹಕ್ಕಾನಿ ಹತ್ಯೆ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ.

ಗುರುವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಮದರಸಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹಿರಿಯ ತಾಲಿಬಾನ್ ಧರ್ಮಗುರು ರಹೀಮುಲ್ಲಾ ಹಕ್ಕಾನಿ ಹತ್ಯೆಯಾಗಿದ್ದರು. ಸ್ಫೋಟದಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ.

Breaking: ತಾಲಿಬಾನ್‌ನ ಸದಸ್ಯ ಶೇಖ್ ರಹೀಮುಲ್ಲಾ ಹಕ್ಕಾನಿ ಹತ್ಯೆBreaking: ತಾಲಿಬಾನ್‌ನ ಸದಸ್ಯ ಶೇಖ್ ರಹೀಮುಲ್ಲಾ ಹಕ್ಕಾನಿ ಹತ್ಯೆ

ಹೆಣ್ಣು ಮಕ್ಕಳು ಶಾಲೆಗೆ ಹೋಗಲು ಅವಕಾಶ ನೀಡುವುದರ ಪರವಾಗಿ ಇತ್ತೀಚೆಗೆ ಸಾರ್ವಜನಿಕವಾಗಿ ಮಾತನಾಡಿದ್ದ ರಹೀಮುಲ್ಲಾ ಹಕ್ಕಾನಿ ಅವರ ಮೇಲೆ ಅಕ್ಟೋಬರ್ 2020 ರಲ್ಲಿ ಪಾಕಿಸ್ತಾನದಲ್ಲಿ ಹತ್ಯೆ ಪ್ರಯತ್ನ ನಡೆದಿತ್ತು. ಇದರ ಹಿಂದೆಯೂ ಒಮ್ಮೆ ಕೊಲೆ ಯತ್ನ ನಡೆಸಲಾಗಿತ್ತು. ಆದರೆ ಎರಡು ಪ್ರಯತ್ನಗಳಿಂದ ಬದುಕುಳಿದಿದ್ದರು.

ISIS claimed the bomb attack on Rahimullah Haqqani at his madrassa

ತಾಲಿಬಾನ್ ಸರ್ಕಾರದ ಉಪ ವಕ್ತಾರ ಬಿಲಾಲ್ ಕರಿಮಿ ಟ್ವೀಟ್ ಮಾಡಿದ್ದು, ಶೇಖ್ ರಹೀಮುಲ್ಲಾ ಹಕ್ಕಾನಿ ಹತ್ಯೆ ಆಗಿರುವುದನ್ನು ಖಚಿತಪಡಿಸಿದ್ದರು. "ದೇಶದ ಶ್ರೇಷ್ಠ ಶೈಕ್ಷಣಿಕ ವ್ಯಕ್ತಿ ಶೇಖ್ ರಹೀಮುಲ್ಲಾ ಹಕ್ಕಾನಿ ಶತ್ರುಗಳ ಕ್ರೂರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ," ಎಂದಿದ್ದರು.

'ಹದೀಸ್ ಸಾಹಿತ್ಯ'ದ ವಿದ್ವಾಂಸ ಎಂದು ಹೇಳಲಾದ ಹಕ್ಕಾನಿ, ಪಾಕಿಸ್ತಾನದ ಸ್ವಾಬಿ ಮತ್ತು ಅಕೋರಾ ಖಟ್ಟಕ್‌ನಲ್ಲಿರುವ ದೇವಬಂದಿ ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಪಡೆದಿದ್ದರು.

ಹತ್ಯೆ ಬಳಿಕ, ISIS ತನ್ನ ಟೆಲಿಗ್ರಾಂ ಚಾನೆಲ್‌ಗಳಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡು, ತಮ್ಮ ಬಾಂಬರ್ ತನ್ನ ಸ್ಫೋಟಕ ಉಡುಪನ್ನು ಧರ್ಮಗುರುಗಳ ಕಚೇರಿಯೊಳಗೆ ಸ್ಫೋಟಿಸಿದ್ದಾನೆ ಎಂದು ಹೇಳಿದೆ.

ತಾಲಿಬಾನ್ ಧರ್ಮಗುರು ರಹೀಮುಲ್ಲಾ ಹಕ್ಕಾನಿ ಅವರು ಗುಂಪಿನಲ್ಲಿ ಯಾವುದೇ ಅಧಿಕೃತ ಸ್ಥಾನವನ್ನು ಹೊಂದಿಲ್ಲದಿದ್ದರೂ ಪ್ರಭಾವಿ ವ್ಯಕ್ತಿಯಾದ್ದರು. ಹಲವು ವರ್ಷಗಳಿಂದ ಗುಂಪಿನ ಸದಸ್ಯರಿಗೆ ಕಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. "ಮಹಿಳೆಯರಿಗೆ ಶಿಕ್ಷಣವನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಲು ಷರಿಯಾದಲ್ಲಿ ಯಾವುದೇ ಸಮರ್ಥನೆ ಇಲ್ಲ. ಅವರಿಗೂ ಶಿಕ್ಷಣ ನೀಡಬೇಕು" ಎಂದು ಸಂದರ್ಶನದಲ್ಲಿ ಹೇಳಿದ್ದರು.

ಒಂದು ವರ್ಷದ ಹಿಂದೆ ಅಧಿಕಾರವನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್ ಬಾಲಕಿಯರು ಮತ್ತು ಮಹಿಳೆಯರಿಗೆ ಇಸ್ಲಾಂ ಧರ್ಮದ ಅವರ ಕಠಿಣ ಸೂಚನೆಗಳನ್ನು ಅನುಸರಿಸಲು ನಿರ್ಬಂಧಗಳನ್ನು ವಿಧಿಸಿದೆ. ದೇಶದ ಹಲವು ಭಾಗಗಳಲ್ಲಿ ಬಾಲಕಿಯರ ಮಾಧ್ಯಮಿಕ ಶಾಲೆಗಳನ್ನು ಪುನಃ ತೆರೆಯಲು ಅನುಮತಿ ನೀಡಿಲ್ಲ.

English summary
Rahimullah Haqqani death: ISIS claimed the bomb attack on Rahimullah Haqqani at his madrassa. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X