ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಾವಿನ ರುದ್ರ ನರ್ತನದಲ್ಲೂ ಪಾಕ್ ಸುಳ್ಳು: ಅಧಿಕೃತ ಸಾವು 143, ಅನಧಿಕೃತ 3,245?

|
Google Oneindia Kannada News

ತನ್ನ ನೆಲದಲ್ಲಿ ಉಗ್ರ ಕೃತ್ಯಗಳಿಗೆ ನೀರೆರೆಯುತ್ತಾ, ವಿಶ್ವದ ಮುಂದೆ ಸಂಭಾವಿತನಂತೆ ಫೋಸ್ ಕೊಡುತ್ತಿದ್ದ ಪಾಕಿಸ್ತಾನದ ನಿಜಬಣ್ಣ ಹಲವು ಬಾರಿ ಬಟಾ ಬಯಲುಗೊಂಡಿದ್ದು ಗೊತ್ತೇ ಇದೆ.

ಆದರೆ, ಕೊರೊನಾ ಸಾವಿನ ವಿಚಾರದಲ್ಲೂ ಚೀನಾ ದೇಶದಂತೆ ಅದರ ಪರಮಾಪ್ತ ರಾಷ್ಟ್ರ ಪಾಕಿಸ್ತಾನವೂ ಸುಳ್ಳನ್ನು ಹೇಳುತ್ತಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿರುವುದು ಅಲ್ಲಿನ ಪತ್ರಿಕೆಗಳ ವರದಿ.

ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ತಡೆಗೆ ಐಎಂಎಫ್‌ ನೆರವುಪಾಕಿಸ್ತಾನದಲ್ಲಿ ಕೊರೊನಾ ಸೋಂಕು ತಡೆಗೆ ಐಎಂಎಫ್‌ ನೆರವು

ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮೌರಾದ್ ಆಲಿ ಶಾ, ಕಳೆದ ಬುಧವಾರ (ಏ 15) ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ಮತ್ತು ದಿ ಟ್ರಿಬ್ಯೂನ್ ಪತ್ರಿಕೆಯ ವರದಿ, ಪಾಕಿಸ್ತಾನದಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ.

ಸಾಲ ಪರಿಹಾರ ಕೊಡಿ ಪ್ಲೀಸ್: ವಿಶ್ವದ ಎದುರು ಕೈವೊಡ್ಡಿದ ಪಾಕಿಸ್ತಾನಸಾಲ ಪರಿಹಾರ ಕೊಡಿ ಪ್ಲೀಸ್: ವಿಶ್ವದ ಎದುರು ಕೈವೊಡ್ಡಿದ ಪಾಕಿಸ್ತಾನ

"ಸರಕಾರದ ವರದಿಯನ್ನು ಮೀರಿ ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿರುವ ಸಾಧ್ಯತೆಯಿದೆ. ಅದರಲ್ಲೂ ಪ್ರಮುಖವಾಗಿ ಕರಾಚಿ ಮಹಾನಗರದಲ್ಲಿ" ಎಂದು ಮೌರಾದ್ ಆಲಿ ಶಾ ಹೇಳಿಕೆಯನ್ನು ನೀಡಿದ್ದರು.

ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮೌರಾದ್ ಆಲಿ ಶಾ

ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮೌರಾದ್ ಆಲಿ ಶಾ

"ಪಾಸಿಟೀವ್ ಕೇಸ್ ಇರುವ ಯಾವುದೇ ವ್ಯಕ್ತಿಯ ತಪಾಸಣೆ ನಡೆಸಲಾಗುತ್ತಿಲ್ಲ. ಸಿಂಧ್ ಪ್ರಾಂತ್ಯವೊಂದರಲ್ಲೇ 41 ರೋಗಿಗಳು ಸಾವನ್ನಪ್ಪಿದ್ದಾರೆ. ಇದಲ್ಲದೇ, ಮೃತದೇಹಗಳು ಆಸ್ಪತ್ರೆಗೆ ಬರುತ್ತಿವೆ. ಇವರೆಲ್ಲಾ ಕೊರೊನಾ ಸೋಂಕಿನಿಂದ ಮೃತ ಪಟ್ಟರೇ ಎನ್ನುವುದನ್ನು ಯಾರೂ ಟೆಸ್ಟ್ ಮಾಡುತ್ತಿಲ್ಲ. ಇದು ನಡುಕ ಹುಟ್ಟಿಸುವ ವಿದ್ಯಮಾನಗಳು" ಎಂದು ಮೌರಾದ್ ಆಲಿ ಶಾ ಹೇಳಿದ್ದಾರೆ. (ಚಿತ್ರದಲ್ಲಿ ಮೌರಾದ್ ಆಲಿ ಶಾ)

ಕಳೆದ ಹದಿನೈದು ದಿನಗಳಲ್ಲಿ ಕರಾಚಿ ನಗರ

ಕಳೆದ ಹದಿನೈದು ದಿನಗಳಲ್ಲಿ ಕರಾಚಿ ನಗರ

ಕಳೆದ ಹದಿನೈದು ದಿನಗಳಲ್ಲಿ ಕರಾಚಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಒಂದೋ ಆಸ್ಪತ್ರೆಗೆ ಸೇರಿಸುವಾಗಲೇ ಅವರು ಸಾವನ್ನಪ್ಪಿದ್ದರು, ಇಲ್ಲವೇ, ದಾಖಲಾದ ಕೆಲವೇ ಗಂಟೆಗಳಲ್ಲಿ ಮೃತ ಪಟ್ಟಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿದೆ. ಆದರೆ, ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡದೇ ಇರುವುದರಿಂದ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದು ಅಲ್ಲಿನ ಕೆಲವು ವೈದ್ಯರು ಅಭಿಪ್ರಾಯ ಪಡುತ್ತಿದ್ದಾರೆ. (ಚಿತ್ರಕೃಪೆ: ದಿ ಟ್ರಿಬ್ಯೂನ್)

ಖಬರ್ ಸ್ಥಾನ್ (ಸ್ಮಶಾನ) ಗಳಲ್ಲಿ 3,245 ಶವಸಂಸ್ಕಾರ

ಖಬರ್ ಸ್ಥಾನ್ (ಸ್ಮಶಾನ) ಗಳಲ್ಲಿ 3,245 ಶವಸಂಸ್ಕಾರ

ಆದರೆ, ಕಳೆದ ಐವತ್ತು ದಿನಗಳಲ್ಲಿ ಕರಾಚಿಯ ವಿವಿಧ ಮೂವತ್ತು ಖಬರ್ ಸ್ಥಾನ್ (ಸ್ಮಶಾನ) ಗಳಲ್ಲಿ 3,245 ಶವಸಂಸ್ಕಾರ ನಡೆದಿದೆ ಎನ್ನುವ ವರದಿ ಪಾಕಿಸ್ತಾನದಲ್ಲಿ ಕೋಲಾಹಲವನ್ನು ಎಬ್ಬಿಸಿದೆ. ಇವರೆಲ್ಲರೂ ಹೇಗೆ ಸಾವನ್ನಪ್ಪಿದರು ಎನ್ನುವುದಕ್ಕೆ ಪಾಕಿಸ್ತಾನ ಸರಕಾರ ಉತ್ತರ ಕೊಡದೇ ಮೌನಕ್ಕೆ ಶರಣಾಗಿದೆ. (ಚಿತ್ರಕೃಪೆ: ವಿಕಿಪಿಡಿಯಾ)

ಮುಂದೆ ಭಾರೀ ಅನಾಹುತ ಸಂಭವಿಸಲಿದೆ

ಮುಂದೆ ಭಾರೀ ಅನಾಹುತ ಸಂಭವಿಸಲಿದೆ

ಇದಲ್ಲದೇ, ಕಳೆದ ಮೂರು ದಿನಗಳಿಂದ ಏಳು ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟೀವ್ ಪ್ರಕರಣಗಳು ವರದಿಯಾಗಿದ್ದು, 143 ಜನರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಸರಕಾರ ನೀಡುತ್ತಿರುವ ಡೇಟಾಗಳಲ್ಲಿ ಹೇಳಲಾಗಿರುವ ಅಂಕಿಅಂಶಗಳು ಸುಳ್ಳು, ನಿಜವಾದ ಮೃತರ ಸಂಖ್ಯೆಯನ್ನು ಮುಚ್ಚಿಟ್ಟರೆ ಮುಂದೆ ಭಾರೀ ಅನಾಹುತ ಸಂಭವಿಸಲಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

English summary
Is the number of Covid-19 deaths in Pakistan higher than being reported?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X