• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುದ್ಧನೌಕೆ ಕಳುಹಿಸಲು ಮುಂದಾದ ಬ್ರಿಟನ್‌ಗೆ ರಷ್ಯಾ ಅಧ್ಯಕ್ಷ ಪುಟಿನ್ ಸವಾಲು..!

|

ಒಂದು ಕಡೆ ಕೊರೊನಾ ಬದುಕನ್ನೇ ಬೀದಿಪಾಲು ಮಾಡಿದ್ದರೆ, ಮತ್ತೊಂದು ಕಡೆ ಯುರೋಪ್‌ನಲ್ಲಿ ಯುದ್ಧಕ್ಕೆ ತಯಾರಿ ಆರಂಭವಾಗಿದೆಯಾ ಎಂಬ ಅನುಮಾನ ಮೂಡುತ್ತಿದೆ. ಉಕ್ರೇನ್ ಗಡಿಯಲ್ಲಿ ರಷ್ಯಾ ಸೇನೆ ಹಾಗೂ ಶಸ್ತ್ರಾಸ್ತ್ರ ನಿಯೋಜಿಸಿದ ಬಳಿಕ ಪರಿಸ್ಥಿತಿ ಗಂಭೀರವಾಗುತ್ತಿದೆ.

ಕೆಲ ದಿನಗಳ ಹಿಂದೆ ಉಕ್ರೇನ್‌ಗೆ ಬೆಂಬಲ ನೀಡಿ, ಯುದ್ಧ ನೌಕೆಯನ್ನ ಕಪ್ಪು ಸಮುದ್ರಕ್ಕೆ ಕಳುಹಿಸಲು ಬ್ರಿಟನ್ ಮುಂದಾಗಿತ್ತು. ಆದ್ರೆ ರಷ್ಯಾ ಕಪ್ಪು ಸಮುದ್ರವನ್ನೇ ಲಾಕ್ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. 6 ತಿಂಗಳ ಕಾಲ ಕಪ್ಪು ಸಮುದ್ರದಲ್ಲಿ ವಿದೇಶಿಗರ ಮಿಲಿಟರಿ ಹಾಗೂ ಹಡಗುಗಳ ಸಂಚಾರಕ್ಕೆ ನಿರ್ಬಂಧ ಹೇರಲು ಉದ್ದೇಶಿಸಲಾಗಿದೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

3ನೇ ಮಹಾಯುದ್ಧ ಫಿಕ್ಸ್..? ಯುರೋಪ್‌ನಲ್ಲೇ ಮತ್ತೊಮ್ಮೆ ಸಿಕ್ಕಿದೆ ಮುನ್ಸೂಚನೆ..! 3ನೇ ಮಹಾಯುದ್ಧ ಫಿಕ್ಸ್..? ಯುರೋಪ್‌ನಲ್ಲೇ ಮತ್ತೊಮ್ಮೆ ಸಿಕ್ಕಿದೆ ಮುನ್ಸೂಚನೆ..!

ಬ್ರಿಟನ್ ಕಪ್ಪು ಸಮುದ್ರಕ್ಕೆ ಹಡಗು ಕಳುಹಿಸುವ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ರಷ್ಯಾ ನಿರ್ಧಾರದ ಬಗ್ಗೆ ಬ್ರಿಟನ್ ಈವರೆಗೂ ಪ್ರತಿಕ್ರಿಯೆ ನೀಡಲ್ಲವಾದರೂ, ಅಮೆರಿಕ ರೊಚ್ಚಿಗೆದ್ದಿದೆ. ರಷ್ಯಾ ಕಪ್ಪು ಸಮುದ್ರದ ಮೇಲೆ ನಿರ್ಬಂಧ ಹೇರಿ ಉಕ್ರೇನ್ ಬಂದರುಗಳ ಮೇಲೆ ನಿಯಂತ್ರಣ ಸಾಧಿಸುತ್ತಿದೆ ಎಂದು ಅಮೆರಿಕ ಆರೋಪ ಮಾಡಿದೆ.

ಅಷ್ಟಕ್ಕೂ ಬ್ರಿಟನ್ ಏನ್ ಹೇಳಿತ್ತು..?

ಅಷ್ಟಕ್ಕೂ ಬ್ರಿಟನ್ ಏನ್ ಹೇಳಿತ್ತು..?

ಕಪ್ಪು ಸಮುದ್ರದ ಮೇಲೆ ಹಲವು ರಾಷ್ಟ್ರಗಳ ಒಡೆತನವಿದೆ. ಇದರಲ್ಲಿ ಪ್ರಮುಖವಾಗಿ ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಕಿರಿಕ್ ಆಗುತ್ತಿರುತ್ತದೆ. ಹೀಗಾಗಿಯೇ ರಷ್ಯಾಗೆ ಠಕ್ಕರ್ ಕೊಡಲು ಸಿದ್ಧವಾಗಿದ್ದ ಅಮೆರಿಕ ಹಾಗೂ ಅದರ ಮಿತ್ರಪಡೆಗಳು ಹೊಸ ದಾಳ ಉರುಳಿಸಿದ್ದವು. ಇದರ ಮೊದಲ ಭಾಗವಾಗಿ ಬ್ರಿಟನ್ ನೌಕೆ ಕಳುಹಿಸಲು ಸಿದ್ಧತೆ ನಡೆಸಿತ್ತು. ಮೇ ತಿಂಗಳ ಒಳಗೆ ಬ್ರಿಟನ್ ನೌಕೆ ಕಪ್ಪು ಸಮುದ್ರ ತಲುಪುವಂತೆ ಪ್ಲ್ಯಾನ್ ರೂಪಿಸಲಾಗಿತ್ತು. ಆದರೆ ಕಪ್ಪು ಸಮುದ್ರದ ದಾರಿಯನ್ನೇ ಬಂದ್ ಮಾಡಲು ರಷ್ಯಾ ಮುಂದಾಗಿದೆ ಎಂಬ ವರದಿ ಶಾಕ್ ಕೊಟ್ಟಿದೆ.

ಸೈನಿಕರ ಜೊತೆ ಟ್ಯಾಂಕರ್..!

ಸೈನಿಕರ ಜೊತೆ ಟ್ಯಾಂಕರ್..!

ಅಪಾರ ಪ್ರಮಾಣದ ಸೇನೆಯನ್ನ ಉಕ್ರೇನ್ ಗಡಿಯಲ್ಲಿ ನಿಯೋಜನೆ ಮಾಡಿರುವ ರಷ್ಯಾ, ಇವರ ಜೊತೆಯಲ್ಲಿ ಟ್ಯಾಂಕರ್‌ಗಳನ್ನೂ ಗಡಿಗೆ ಕೊಂಡೊಯ್ದಿದೆ. ಇದು ಸಹಜವಾಗಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಈಗಾಗಲೇ ಈ ಬಗ್ಗೆ ಉಕ್ರೇನ್ ಆತಂಕ ಹೊರಹಾಕಿದೆ. ಗಡಿಯಲ್ಲಿ ರಷ್ಯಾ ನಡೆ ಭಯ ಹುಟ್ಟಿಸುತ್ತಿದೆ. ವಿವಾದವಿರುವ ಗಡಿ ಭಾಗದಲ್ಲೇ ಭಾರಿ ಪ್ರಮಾಣದ ಸೇನೆ ನಿಯೋಜನೆ ಮಾಡಿದೆ ಎಂದಿದೆ. ಇದು ಯುರೋಪ್ ಹಾಗೂ ಅಮೆರಿಕ ಮತ್ತಿತರ ರಾಷ್ಟ್ರಗಳ ನಿದ್ದೆ ಹಾರಿಹೋಗುವಂತೆ ಮಾಡಿದೆ. ಏಕೆಂದರೆ ಯುರೋಪ್‌ನಲ್ಲಿ ಯುದ್ಧ ಆರಂಭವಾದರೆ 3ನೇ ಮಹಾಯುದ್ಧ ಆರಂಭ ಆದಂತೆ ಎಂಬುದು ತಜ್ಞರ ಆತಂಕ.

ಅಮೆರಿಕದ ಸ್ನೇಹ ಮುಳುವಾಯ್ತಾ..?

ಅಮೆರಿಕದ ಸ್ನೇಹ ಮುಳುವಾಯ್ತಾ..?

ಉಕ್ರೇನ್ ರಷ್ಯಾದ ಆಪ್ತಮಿತ್ರ. ಆದರೆ ಇದು ಸಹಜವಾಗಿ ರಷ್ಯಾ ಕಣ್ಣು ಕೆಂಪಗಾಗುವಂತೆ ಮಾಡಿದೆ. ಇತ್ತೀಚೆಗೆ ಅಮೆರಿಕದ ವೆಪನ್‌ಗಳನ್ನ ಉಕ್ರೇನ್ ಖರೀದಿ ಮಾಡಿತ್ತು, ರಷ್ಯಾ ಈ ಒಪ್ಪಂದವನ್ನ ತೀವ್ರವಾಗಿ ವಿರೋಧಿಸಿತ್ತು. ಘಟನೆ ನಡೆದು ಕೆಲವೇ ದಿನಗಳಲ್ಲಿ ರಷ್ಯಾ ತನ್ನ ಅಪಾರ ಪ್ರಮಾಣದ ಸೇನೆ ಹಾಗೂ ಯುದ್ಧ ಟ್ಯಾಂಕರ್‌ಗಳನ್ನು ಉಕ್ರೇನ್ ಗಡಿಗೆ ತಂದು ಬಿಟ್ಟಿದೆ. ಇದು ಯುದ್ಧ ನಡೆಯುವ ಪರೋಕ್ಷ ಎಚ್ಚರಿಕೆ ಎಂಬುದು ತಜ್ಞರ ವಿಶ್ಲೇಷಣೆ. ಆದರೆ ರಷ್ಯಾ ಮಾತ್ರ ಹೆದರಬೇಡಿ, ನಾವು ಏನೂ ಮಾಡೋದಿಲ್ಲ ಅಂತಾ ಭರವಸೆ ನೀಡುತ್ತಿದೆ

  IPL ಗೆ ಗುಡ್ ಬೈ ಹೇಳಿದ T Natarajan | Oneindia Kannada
  ರಷ್ಯಾ ನೆನೆದು ನಡುಗಿದೆ ಜರ್ಮನಿ..!

  ರಷ್ಯಾ ನೆನೆದು ನಡುಗಿದೆ ಜರ್ಮನಿ..!

  ಯುರೋಪ್ ಮೇಲೆ ನಿಯಂತ್ರಣ ಸಾಧಿಸಲು ರಷ್ಯಾ ಕಾದು ಕುಳಿತಿದೆ ಎಂದು ಯುರೋಪ್ ಒಕ್ಕೂಟದ ಕೆಲ ಬಲಾಢ್ಯ ರಾಷ್ಟ್ರಗಳು ಆರೋಪ ಮಾಡುತ್ತಾ ಬಂದಿವೆ. ಹೀಗಾಗಿಯೇ ಅಮೆರಿಕದ ಜೊತೆ ಸಾಧ್ಯವಾದಷ್ಟು ಸ್ನೇಹ ಗಿಟ್ಟಿಸಿಕೊಂಡಿತ್ತು ಯುರೋಪ್. ಆದರೆ ಅದ್ಯಾವಾಗ ಟ್ರಂಪ್ ಅಮೆರಿಕದ ಅಧ್ಯಕ್ಷರಾದರೋ ಅಂದಿನಿಂದ ಈ ಸಂಬಂಧ ಹಳಸುತ್ತಾ ಬಂದಿದೆ. ಅಮೆರಿಕ ಮತ್ತು ಯುರೋಪ್ ಸ್ನೇಹ ನಾಶವಾಗುವ ಹಂತಕ್ಕೆ ಬಂದಿದೆ. ಇದೇ ಸಂದರ್ಭವನ್ನ ರಷ್ಯಾ ಬಳಸಿಕೊಂಡು, ಯುದ್ಧ ಸಾರುವ ಆತಂಕ ಜರ್ಮನಿಗೆ ಕಾಡುತ್ತಿದೆ. 2ನೇ ಮಹಾಯುದ್ಧ ನಡೆದಾಗ ಜರ್ಮನಿಯನ್ನ ಧೂಳಿಪಟ ಮಾಡಿತ್ತು ರಷ್ಯಾ. ಎರಡೂ ರಾಷ್ಟ್ರಗಳ ಮಧ್ಯೆ ಆ ದ್ವೇಷ ಇನ್ನೂ ಆರಿಲ್ಲ.

  English summary
  America says Russia plans to block Black Sea will impact on access to Ukraine ports.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X