• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊನ್ನೆ ಪ್ರತ್ಯಕ್ಷವಾಗಿದ್ದು 'ಅಸಲಿ' ಕಿಮ್ ಜಾಂಗ್ ಉನ್ ಅಲ್ಲ! ಸಾಕ್ಷಿ ಬೇಕಾ?

|

ಆಕ್ರಮಣಕಾರಿ ಗುಣಗಳಿಂದಲೇ ಇಡೀ ವಿಶ್ವದಲ್ಲಿ 'ಕು'ಖ್ಯಾತಿ ಗಳಿಸಿರುವವರು ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್. 'ಹುಚ್ಚು ದೊರೆ' ಅಂತಲೇ ಕರೆಯಿಸಿಕೊಳ್ಳುವ ಕಿಮ್ ಜಾಂಗ್ ಉನ್ ಆರೋಗ್ಯದ ಕುರಿತಾದ ವಿಚಾರಗಳು ಇತ್ತೀಚಿಗಂತೂ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

   ಬೆಂಗಳೂರು ಪೊಲೀಸರೊಂದಿಗೆ ಕೈ ಜೋಡಿಸಿ ಎಂದ ನಾರಾಯಣ ಮೂರ್ತಿ ದಂಪತಿಗಳು | Infosys | Narayan & Sudha Murthy

   ಏಪ್ರಿಲ್ 15 ರಂದು ಕಿಮ್ ಜಾಂಗ್ ಉನ್ ಅವರ ತಾತನ ಜನ್ಮದಿನದ ಸ್ಮರಣೆ ಕಾರ್ಯಕ್ರಮಕ್ಕೆ ಗೈರು ಹಾಜರಾದಾದ್ಮೇಲೆ, ಅವರ ಅನಾರೋಗ್ಯದ ಬಗ್ಗೆ ಪುಂಖಾನುಪುಂಖ ವರದಿಗಳು ಪ್ರಕಟವಾದವು. ''ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಕಿಮ್ ಜಾಂಗ್ ಉನ್ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ... ಕಿಮ್ ಜಾಂಗ್ ಉನ್ ಬ್ರೇನ್ ಡೆಡ್ ಆಗಿದೆ..'' ಎಂಬೆಲ್ಲ ವದಂತಿಗಳು ಹರಿದಾಡಿದವು.

   ಆದರೆ, ಮೇ 2 ರಂದು ರಾಜಧಾನಿ ಪ್ಯೊಂಗ್ಯಾಂಗ್ ಸಮೀಪದಲ್ಲಿ ಇರುವ ಫರ್ಟಿಲೈಜರ್ ಕಾರ್ಖಾನೆಯೊಂದರ ಸಮಾರಂಭದಲ್ಲಿ ಪ್ರತ್ಯಕ್ಷವಾಗುವ ಮೂಲಕ ಕಿಮ್ ಜಾಂಗ್ ಉನ್ ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದರು.

   ಶಾಕಿಂಗ್: ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ.?

   ಇದೀಗ, ಫರ್ಟಿಲೈಜರ್ ಕಾರ್ಖಾನೆಯೊಂದರ ಸಮಾರಂಭದಲ್ಲಿ ರಿಬ್ಬನ್ ಕಟ್ ಮಾಡಿ ಸಂಭ್ರಮಪಟ್ಟಿದ್ದು 'ಅಸಲಿ' ಕಿಮ್ ಜಾಂಗ್ ಉನ್ ಅಲ್ಲ.. 'ನಕಲಿ'! ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಪೂರಕವಾಗಿ ಪುರಾವೆಗಳೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

   23 ದಿನಗಳ ಕಾಲ ನಾಪತ್ತೆ

   23 ದಿನಗಳ ಕಾಲ ನಾಪತ್ತೆ

   ಏಪ್ರಿಲ್ 11 ರಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಕಾಣಿಸಿಕೊಂಡ ಬಳಿಕ ಕಿಮ್ ಜಾಂಗ್ ಉನ್ ದಿಢೀರ್ ನಾಪತ್ತೆಯಾಗ್ಬಿಟ್ಟಿದ್ದರು. ಏಪ್ರಿಲ್ 15 ರಂದು ಅಜ್ಜನ ಜನ್ಮದಿನಾಚರಣೆಯ ಕಾರ್ಯಕ್ರಮಕ್ಕೂ ಅವರು ಹಾಜರ್ ಆಗಲಿಲ್ಲ. 23 ದಿನಗಳ ಕಾಲ ಪತ್ತೆಯಾಗದ ಕಿಮ್ ಜಾಂಗ್ ಉನ್ ಮೇ 2 ರಂದು ಫರ್ಟಿಲೈಜರ್ ಕಾರ್ಖಾನೆಯೊಂದರ ಸಮಾರಂಭದಲ್ಲಿ ಕಾಣಿಸಿಕೊಂಡ ಮೇಲೆ ಹಲವು ಪ್ರಶ್ನೆಗಳು ಉದ್ಭವವಾಗಿದೆ.

   ಕಿಮ್ ಜಾಂಗ್ ಉನ್ ಆರೋಗ್ಯದ ಕುರಿತಾದ ಮತ್ತೊಂದು ಸುದ್ದಿಯೂ ಸುಳ್ಳು!

   ಹಲವರಿಗೆ ಕಾಡುತ್ತಿದೆ ಡೌಟ್

   ಹಲವರಿಗೆ ಕಾಡುತ್ತಿದೆ ಡೌಟ್

   ಫರ್ಟಿಲೈಜರ್ ಕಾರ್ಖಾನೆಯೊಂದರ ಸಮಾರಂಭದಲ್ಲಿ ಆರೋಗ್ಯವಾಗಿ, ದಷ್ಟಪುಷ್ಟವಾಗಿ ಕಿಮ್ ಜಾಂಗ್ ಉನ್ ಕಂಡುಬಂದಿದ್ದರು. ಸಮಾರಂಭದ ಕೆಲ ಫೋಟೋ ಮತ್ತು ವಿಡಿಯೋಗಳನ್ನು ನೋಡಿದ ಮೇಲೆ ''ಅಲ್ಲಿದ್ದದ್ದು 'ಅಸಲಿ' ಕಿಮ್ ಜಾಂಗ್ ಉನ್ ಅಲ್ಲ'' ಎಂಬ ಡೌಟ್ ಬ್ರಿಟಿಷ್ ಪಾರ್ಲಿಮೆಂಟ್ ನ ಮಾಜಿ ಸದಸ್ಯೆ ಲೂಯಿಸ್ ಮೆನ್ಷ್ ಸೇರಿದಂತೆ ಹಲವರಿಗೆ ಬಂದಿದೆ.

   ಸಾಕ್ಷಿ ನೋಡಿ..

   ಫರ್ಟಿಲೈಜರ್ ಕಾರ್ಖಾನೆಯ ಸಮಾರಂಭದಲ್ಲಿ ಕಾಣಿಸಿಕೊಂಡ ಕಿಮ್ ಜಾಂಗ್ ಉನ್ ಮತ್ತು ಹಳೆಯ ಕಿಮ್ ಜಾಂಗ್ ಉನ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಾಳೆ ಹಾಕಲಾಗುತ್ತಿದೆ.

   ಊಹಾಪೋಹಗಳಿಗೆ ತೆರೆ: ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಕಿಮ್ ಜಾಂಗ್ ಉನ್

   ಡ್ಯೂಪ್ಲಿಕೇಟ್ ಕಿಮ್ ಜಾಂಗ್ ಉನ್?

   ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹಲ್ಲುಗಳಲ್ಲಿನ ವ್ಯತ್ಯಾಸ ಎದ್ದು ಕಾಣುತ್ತದೆ. ಕಿವಿ ಮತ್ತು ಹೇರ್ ಸ್ಟೈಲ್ ಕೂಡ ಭಿನ್ನವಾಗಿರುವುದರಿಂದ.. ಸಮಾರಂಭಕ್ಕೆ ಹಾಜರ್ ಆಗಿರುವುದು ಡ್ಯೂಪ್ಲಿಕೇಟ್ ಕಿಮ್ ಜಾಂಗ್ ಉನ್ ಹೊರತು 'ಅಸಲಿ'ಯಲ್ಲ ಎಂಬುದು ಹಲವರ ವಾದ.

   ಬಾಡಿ ಡಬಲ್ ಬಳಿಸಿದ್ರಾ ಕಿಮ್ ಜಾಂಗ್ ಉನ್?

   ಬಾಡಿ ಡಬಲ್ ಬಳಿಸಿದ್ರಾ ಕಿಮ್ ಜಾಂಗ್ ಉನ್?

   ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್, ಸದ್ದಾಂ ಹುಸೇನ್ ಕೂಡ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಾಡಿ ಡಬಲ್ಸ್ ಬಳಸಿದ್ದರು. ಈಗಲೂ, ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಸಾಧ್ಯವಾಗದೆ ಕಿಮ್ ಜಾಂಗ್ ಉನ್ ಬಾಡಿ ಡಬಲ್ ಬಳಸಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹೋಲಿಕೆಗೆ ಬಳಸಲಾಗುತ್ತಿರುವ 'ಅಸಲಿ' ಕಿಮ್ ಜಾಂಗ್ ಉನ್ ಅವರ ಫೋಟೋಗಳು ಕೊಂಚ ಹಳೇಯದ್ದು ಎಂಬುದು ನಿಮ್ಮ ಗಮನದಲ್ಲಿರಲಿ.

   ಹಿಂದೆ ಕೂಡ ಬಳಕೆ ಮಾಡಿದ್ರಂತೆ.!

   ಹಿಂದೆ ಕೂಡ ಬಳಕೆ ಮಾಡಿದ್ರಂತೆ.!

   ಶತ್ರುಗಳ ಆಕ್ರಮಣ ಮತ್ತು ಪ್ರಾಣಾಪಾಯದಿಂದ ಪಾರಾಗಲು ಈ ಹಿಂದೆ ಕೂಡ ಹಲವು ಬಾರಿ ಕಿಮ್ ಜಾಂಗ್ ಉನ್ 'ಬಾಡಿ ಡಬಲ್ಸ್' ಬಳಸಿದ್ದರು ಎಂದು ಇಂಟರ್ ನ್ಯಾಷನಲ್ ಬಿಸಿನೆಸ್ ಟೈಮ್ಸ್ ವರದಿ ಮಾಡಿದೆ.

   ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಶವಪೆಟ್ಟಿಗೆ ರಹಸ್ಯ ಬಯಲು

   English summary
   Is North Korean Leader Kim Jong Un using a Body Double? twitterati points out.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X