• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲನಾ ಅಜರ್ ಸಾವು?

|

ಇಸ್ಲಾಮಾಬಾದ್, ಮಾರ್ಚ್ 03: ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕೂಡ ಸಾವನ್ನಪ್ಪಿದ್ದಾನೆ. ಆದರೆ, ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಮಸೂದ್ ಅಜರ್ ಸಾವಿನ ಕುರಿತಾಗಿ ದೃಢಪಡಿಸುತ್ತಿಲ್ಲ ಎಂದು ಹೇಳಲಾಗಿದೆ.

ಮಸೂದ್ ಅಜರ್ ಪಾಕಿಸ್ತಾನದಲ್ಲಿ ನೆಲೆಸಿರುವುದನ್ನು ಪಾಕಿಸ್ತಾನ ಸರ್ಕಾರವು ಒಪ್ಪಿಕೊಂಡಿತ್ತು. ರಾವಲ್ಪಿಂಡಿ ಆಸ್ಪತ್ರೆಯಲ್ಲಿದ್ದಾನೆ, ಕಿಡ್ನಿ ವೈಫಲ್ಯಗೊಂಡಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎನ್ನಲಾಗಿತ್ತು. ಆದರೆ, ವರದಿಗಳ ಪ್ರಕಾರ ಶನಿವಾರದಂದು ಪಾಕಿಸ್ತಾನದ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂಬ ಸುದ್ದಿಯಿದೆ.

ಇದರ ಬೆನ್ನಲ್ಲೆ #MasoodAzharDEAD ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದೆ. ಮಾರ್ಚ್ 01ರಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಅವರು ಪಾಕಿಸ್ತಾನದಲ್ಲೇ ಅಜರ್ ಇದಾನೆ ಎಂದು ಸಿಎನ್ಎನ್ ಗೆ ನೀಡಿದ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದರು.

ಮಸೂದ್ ಅಝರ್ ನಮ್ಮಲ್ಲೇ ಇದ್ದಾನೆ:ಸತ್ಯ ಬಾಯ್ಬಿಟ್ಟ ಪಾಕಿಸ್ತಾನ

1999ರಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನವನ್ನು ಅಪಹರಿಸಿದ್ದ ಉಗ್ರರು ಅಫ್ಘಾನಿಸ್ತಾನದ ಕಂದಹಾರ್ ಗೆ ಕೊಂಡೊಯ್ದಿದ್ದರು. ಪ್ರಯಾಣಿಕರ ಸುರಕ್ಷಿತ ಬಿಡುಗಡೆಗಾಗಿ ಮಸೂದ್ ಅಜರ್ ಮತ್ತು ಆತನ ಇನ್ನಿಬ್ಬರು ಸಹಚರರನ್ನು ಭಾರತ ಬಿಡುಗಡೆ ಮಾಡಿತ್ತು. ಬಳಿಕ ಜೈಷ್ ಎ ಮೊಹಮದ್ ಸಂಘಟನೆಯು ಅಜರ್ ಮಸೂದ್ ನೇತೃತ್ವದಲ್ಲಿ ಭಾರತದ ಸಂಸತ್ತಿನ ಮೇಲೆ ದಾಳಿ, ಪಠಾಣ್ ಕೋಟ್ ಸೇನಾ ನೆಲೆ ಮೇಲೆ ದಾಳಿ, ಪುಲ್ವಾಮಾ ದಾಳಿ ನಡೆಸಿತು.

ಪುಲ್ವಾಮಾ ಆತ್ಮಾಹುತಿ ದಾಳಿಗೆ ಅಜರ್ ಅದೇಶ ನೀಡಲು ಏನು ಕಾರಣ?

ಅಜರ್ ಮಸೂದ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ವಿಶ್ವಸಂಸ್ಥೆಗೆ ಭಾರತ ಮೂರು ಬಾರಿ ಮನವಿ ಮಾಡಿದ್ದು, ಚೀನಾ ಹಾಗೂ ಪಾಕಿಸ್ತಾನದ ಪ್ರತಿರೋಧದಿಂದ ಮಸೂದ್ ಗೆ ರಕ್ಷೆ ಸಿಕ್ಕಿತ್ತು.

ಪಠಾಣ್ ಕೋಟ್ - ಪಲ್ವಾಮಾ ದಾಳಿ ತನಕ JeM, ಮಸೂದ್ ದುಷ್ಟರ ಸುತ್ತಾ

ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಅಧಿಕಾರಿಗಳು, ಈ ಸುದ್ದಿಯನ್ನು ಖಚಿತಪಡಿಸಲು ಯಾವುದೇ ಪುರಾವೆ ಸಿಕ್ಕಿಲ್ಲ. ಭವಲ್ ಪುರ್ ನಲ್ಲಿ ಸಮಾವೇಶದಲ್ಲಿ ಮಸೂದ್ ಅಜರ್ ಪಾಲ್ಗೊಂಡಿದ್ದರ ಬಗ್ಗೆ ಮಾಹಿತಿಯಿದೆ. ಪುಲ್ವಾಮಾ ದಾಳಿಗೂ ಒಂದು ದಿನ ಮುನ್ನ ಈ ಕಾರ್ಯಕ್ರಮವಿತ್ತು.

ಪುಲ್ವಾಮಾ ದಾಳಿಯ ಬಳಿಕ ಅಜರ್ ಮಸೂದ್ ಹಾಗೂ ಲಷ್ಕರ್ ಎ ತೋಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಇಬ್ಬರಿಗೂ ಕೆಲ ಕಾಲ ಭೂಗತವಾಗುವಂತೆ ಐಎಸ್ ಐ ಸೂಚಿಸಿದೆ.

ತಾಲಿಬಾನಿಗಳ ನಾಯಕನನ್ನಾಗಿ ಅಜರ್ ಮಸೂದ್ ನನ್ನು ಬಿಂಬಿಸಲು ಪಾಕಿಸ್ತಾನ ಬಯಸಿದೆ. ಹೀಗಾಗಿ, ಮಸೂದ್ ನನ್ನು ಈ ಸಮಯದಲ್ಲಿ ಕಳೆದುಕೊಳ್ಳಲು ಪಾಕಿಸ್ತಾನ ಸಿದ್ಧವಿಲ್ಲ. ಕಿಡ್ನಿ ವೈಫಲ್ಯಕ್ಕಾಗಿ ಚಿಕಿತ್ಸೆ ಪಡೆದುಕೊಂಡಿರಬಹುದು. ಆದರೆ, ಸಾವಿನ ಮಾಹಿತಿ ಬಗ್ಗೆ ಖಚಿತವಾಗಿ ಹೇಳಲಾಗದು ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Is Jaish-e-Mohammad chief, Maulana Masood Azhar dead? Several reports have suggested that he could have died in hospital where he had been admitted after suffering from renal failure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more