ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ದೇಶಗಳ ಪ್ರವಾಸಿಗರಿಗೆ ಬಾಗಿಲು ತೆಗೆದ ಐರ್ಲೆಂಡ್

|
Google Oneindia Kannada News

ಐರ್ಲೆಂಡ್, ಜುಲೈ 23: ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ಕೈಗೊಂಡಿರುವ ಬೆನ್ನಲ್ಲೇ, 15 ದೇಶಗಳ ಪ್ರವಾಸಿಗರಿಗೆ ಐರ್ಲೆಂಡ್ ಬಾಗಿಲು ತೆಗೆದಿದೆ. ಈ 15 ದೇಶ, ಪ್ರದೇಶಗಳಿಂದ ಬರುವವರು ಐರ್ಲೆಂಡ್ ದೇಶಕ್ಕೆ ಬಂದ ಬಳಿಕ 14ದಿನಗಳ ಸ್ವಯಂ ಕ್ವಾರಂಟೈನ್ ಗೆ ಒಳಪಡಬೇಕಾಗಿಲ್ಲ.

Recommended Video

Oneplus Nord , ಕೈಗೆಟಕುವ ಬೆಲೆಯಲ್ಲಿ ಬೆಸ್ಟ್ ಫೋನ್ | Oneindia Kannada

ಮಾಲ್ಟಾ, ಫಿನ್ಲೆಂಡ್, ನಾರ್ವೆ, ಇಟಲಿ, ಹಂಗೇರಿ, ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ, ಸೈಪ್ರಸ್, ಸ್ಲೋವಕಿಯಾ, ಗ್ರೀಸ್, ಗ್ರೀನ್ ಲ್ಯಾಂಡ್, ಗಿಬ್ರಾಲ್ಟರ್, ಮೊನಾಕೊ ಹಾಗೂ ಸ್ಯಾನ್ ಮ್ಯಾರಿನೊ ಪ್ರದೇಶಗಳನ್ನು ''ಹಸಿರು ಪಟ್ಟಿ''ಗೆ ಸೇರಿಸಿ ಐರೀಷ್ ಸರ್ಕಾರ ಆದೇಶ ನೀಡಿದೆ.

ಸವಿತಾ ಸಾವಿಗೆ ನ್ಯಾಯ: ಗರ್ಭಪಾತ ನಿಷೇಧ ಕಾನೂನು ರದ್ದುಸವಿತಾ ಸಾವಿಗೆ ನ್ಯಾಯ: ಗರ್ಭಪಾತ ನಿಷೇಧ ಕಾನೂನು ರದ್ದು

ಹಸಿರು ಪಟ್ಟಿಯಲ್ಲಿರುವ ಪ್ರದೇಶಗಳು ಐರ್ಲೆಂಡ್ ಗಿಂತ ಕಡಿಮೆ ಪ್ರಮಾಣದಲ್ಲಿ ಸೋಂಕು ಹೊಂದಿದ್ದು, ಯಾವುದೇ ಅಪಾಯವಿಲ್ಲ ಎಂಬ ವರದಿ ಬಂದ ಹಿನ್ನಲೆಯಲ್ಲಿ ಈ ರೀತಿ ಕ್ರಮ ಕೈಗೊಳ್ಳಲಾಗಿದೆ, ಈ ಪಟ್ಟಿಯಲ್ಲಿ ಎರಡು ವಾರದಲ್ಲಿ ಪರಿಶೀಲಿಸಿ ಬಾಲಾಯಿಸಲಾಗುತ್ತದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

Ireland to allow people from 15 nations, regions without quarantine

ಹಸಿರು ಪಟ್ಟಿಯಿಂದ ಹೊರಗಿರುವ ದೇಶಗಳಿಂದ ಐರ್ಲೆಂಡ್ ಗೆ ಬರುವ ಪ್ರವಾಸಿಗರು ಸಾಮಾನ್ಯ ಆರೋಗ್ಯ ಮಾರ್ಗಸೂಚಿ ಅನುಸರಿಸಿ, 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದು, ಸಂಚಾರ ನಿರ್ಬಂಧಕ್ಕೆ ಬದ್ಧರಾಗಿರಬೇಕು ಎಂದು ಬಿಬಿಸಿ ವರದಿ ಮಾಡಿದೆ.

ಇನ್ಫೋಗ್ರಾಫಿಕ್ಸ್: ವಿಶ್ವದಲ್ಲಿ 1 ಮಿಲಿಯನ್ ಮಂದಿ ಗುಣಮುಖಇನ್ಫೋಗ್ರಾಫಿಕ್ಸ್: ವಿಶ್ವದಲ್ಲಿ 1 ಮಿಲಿಯನ್ ಮಂದಿ ಗುಣಮುಖ

ಐರ್ಲೆಂಡ್ ನಲ್ಲಿ ಬುಧವಾರದಂದು 17 ಹೊಸ ಪ್ರಕರಣಗಳು ಕಂಡು ಬಂದಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಇಲ್ಲಿ ತನಕ ಐರ್ಲೆಂಡ್ ನಲ್ಲಿ 25,819 ದೃಢಪಟ್ಟ ಪ್ರಕರಣಗಳಿದ್ದು, 1754 ಮಂದಿ ಮೃತಪಟ್ಟಿದ್ದಾರೆ. 701 ಸಕ್ರಿಯ ಪ್ರಕರಣಗಳಿದ್ದು, 23,364 ಮಂದಿ ಗುಣಮುಖರಾಗಿದ್ದಾರೆ.

English summary
People from 15 countries and regions will be allowed to visit Ireland without having to self-quarantine for 14 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X