ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡತಿ ಸವಿತಾ ಬಲಿದಾನದಿಂದ ಬದಲಾಯಿತು ಐರ್ಲೆಂಡ್‌ ಕಾನೂನು

|
Google Oneindia Kannada News

ಡುಬ್ಲಿನ್, ಡಿಸೆಂಬರ್ 15: ಕನ್ನಡತಿ ಸವಿತಾ ಹಾಲಪ್ಪನವರ್‌ ಅವರ ಬಲಿದಾನದಿಂದ ಐರ್ಲೆಂಡ್‌ನಲ್ಲಿ ಕಾನೂನಿನಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿರುವ ಮಹತ್ತರ ಘಟನೆ ನಡೆದಿದೆ.

ಐರ್ಲೆಂಡ್‌ನಲ್ಲಿ ಇದುವರೆಗೆ ಇದ್ದ ಗರ್ಭಪಾತ ನಿಷೇಧ ಕಾನೂನಿಗೆ ತಿದ್ದುಪಡಿ ತಂದಿದ್ದು, ಇನ್ನು ಮುಂದೆ ಗರ್ಭವತಿಯ ಆರೋಗ್ಯಕ್ಕೆ ಕೆಡುಕಾಗುವಂತಿದ್ದರೆ ಗರ್ಭಪಾತ ಮಾಡಿಸಬಹುದಾಗಿದೆ. ಆದರೆ ಈ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿತ್ತು ಒಬ್ಬ ಕನ್ನಡತಿ.

Ireland legalize abortion, Savitha Halappanavar sacrifice did not go waste

ಬೆಳಗಾವಿ ಮೂಲಕ ದಂತವೈದ್ಯೆ ಸವಿತಾ ಹಾಲಪ್ಪನವರ್ ಅವರು ಐರ್ಲೆಂಡ್‌ನಲ್ಲಿದ್ದಾಗ ಗರ್ಭವತಿ ಆಗಿದ್ದ ಸಮಯದಲ್ಲಿ ರಕ್ತದ ಸೋಂಕಿಗೆ ತುತ್ತಾಗಿದ್ದರು. ಗರ್ಭಪಾತ ಆಗದಿದ್ದರೆ ಅವರು ಬದುಕುಳಿಯುವುದು ಅಸಾಧ್ಯವಾಗಿತ್ತು. ಸವಿತಾ ಅವರು ಗರ್ಭಪಾತಕ್ಕೆ ಅನುಮತಿ ಕೋರಿದರಾದರೂ ಕಾನೂನಿನಲ್ಲಿ ಅವಕಾಶ ಇರದ ಕಾರಣ ಗರ್ಭಪಾತ ಸಾಧ್ಯವಾಗದೆ ಅವರು ಸಾವನ್ನಪ್ಪಿದರು.

'ಗರ್ಭಪಾತಕ್ಕೆ ಅಪ್ಪ ಒತ್ತಾಯಿಸಿದ್ದು ಯಾಕೆ ಅಂತ ಈಗ ತಿಳಿಯುತ್ತಿದೆ!''ಗರ್ಭಪಾತಕ್ಕೆ ಅಪ್ಪ ಒತ್ತಾಯಿಸಿದ್ದು ಯಾಕೆ ಅಂತ ಈಗ ತಿಳಿಯುತ್ತಿದೆ!'

ಸವಿತಾ ಹಾಲಪ್ಪನವರ್ ಅವರ ಸಾವಿನ ನಂತರ ಐರ್ಲೆಂಡ್‌ನಲ್ಲಿ ಭಾರಿ ಜನಾಕ್ರೋಶ ಭುಗಿಲೆದ್ದಿತು. ಐರ್ಲೆಂಡ್‌ನ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅದರ ಪರಿಣಾಮ ನಿನ್ನೆಯಷ್ಟೆ ಐರ್ಲೆಂಡ್‌ ಸಂಸತ್‌ನಲ್ಲಿ ಗರ್ಭಪಾತ ನಿಷೇಧ ಕಾಯ್ದೆಯನ್ನು ಅಂಗೀಕರಿಸಿದೆ.

ಸವಿತಾ ಸಾವಿಗೆ ನ್ಯಾಯ: ಗರ್ಭಪಾತ ನಿಷೇಧ ಕಾನೂನು ರದ್ದು ಸವಿತಾ ಸಾವಿಗೆ ನ್ಯಾಯ: ಗರ್ಭಪಾತ ನಿಷೇಧ ಕಾನೂನು ರದ್ದು

ಹೊಸ ಕಾನೂನಿನ ಅನ್ವಯ ಭ್ರೂಣದ ಬೆಳವಣಿಗೆ ಸ್ವಾಭಾವಿಕವಾಗಿರದೇ, ತಾಯಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಪಾಯವಿದ್ದರೆ ಅಂತಹ ಸಂದರ್ಭದಲ್ಲಿ 12 ವಾರಗಳವರೆಗಿನ ಭ್ರೂಣದ ಗರ್ಭಪಾತಕ್ಕೆ ಅವಕಾಶ ಸಿಗಲಿದೆ.

ಗರ್ಭಿಣಿ ಹೊಟ್ಟೆಗೆ ಒದ್ದು ಗರ್ಭಪಾತ ಮಾಡಿದ ಕೇರಳದ ಸಿಪಿಎಂ ನಾಯಕ!ಗರ್ಭಿಣಿ ಹೊಟ್ಟೆಗೆ ಒದ್ದು ಗರ್ಭಪಾತ ಮಾಡಿದ ಕೇರಳದ ಸಿಪಿಎಂ ನಾಯಕ!

ಕಾನೂನು ತಿದ್ದುಪಡಿ ಆದ ಕೂಡಲೇ ಐರ್ಲೆಂಡ್‌ನಲ್ಲಿ ಸಂಭ್ರಮೋತ್ಸವ ಆಚರಿಸಲಾಗುತ್ತಿದ್ದು, ಸವಿತಾ ಹಾಲಪ್ಪನವರ್‌ ಅವರ ಭಾವಚಿತ್ರಕ್ಕೆ ಗೌರವನ್ನೂ ಸಲ್ಲಿಸಲಾಗುತ್ತಿದೆ.

English summary
Ireland parliament passes historical abortion bill. This historical bill passed because of Savitha Halappanavar scarifies. She died from pregnancy disease in Ireland, After her death a big protest started about changing abortion law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X