ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ವಿರೋಧಿ ಪ್ರತಿಭಟನೆ: ಪ್ರಧಾನಮಂತ್ರಿಯಿಂದಲೇ ರಾಜೀನಾಮೆ!

|
Google Oneindia Kannada News

ಇರಾಕ್, ನವೆಂಬರ್.29: ಧಿಕ್ಕಾರ, ಧಿಕ್ಕಾರ, ಎಷ್ಟು ಬಾರಿ ಕೂಗಿದರು ನಮ್ಮ ನಾಯಕರಿಗೆ ಕಿಂಚಿತ್ತೂ ನಾಚಿಕೆ ಎಂಬುದೇ ಇಲ್ಲ. ಊರಿಗೆ ಊರು ಹೊತ್ತಿ ಉರಿಯುತ್ತಿದ್ದರೂ ತಮ್ಮ ಅಧಿಕಾರದ ಗದ್ದುಗೆಯಲ್ಲಿ ಹಾಯಾಗಿ ಕುಳಿತು ತಲ್ಲೀನರಾಗಿ ಬಿಟ್ಟಿರುತ್ತಾರೆ.

ಭಾರತದಲ್ಲಿ ಇಂಥ ಕಲೆ ರಾಜಕಾರಣಿಗಳಿಗೆ ಕರಗತವಾಗಿ ಬಿಟ್ಟಿದೆ. ಜನರ ಬೀದಿಯಲ್ಲಿ ನಿಂತು ಬಾಯಿ ಬಾಯಿ ಬಡೆದುಕೊಂಡರು ಇಲ್ಲಿನ ಜನಪ್ರತಿನಿಧಿಗಳಿಗೆ ಅದ್ಯಾವುದು ಕಾಣುವುದಿಲ್ಲ. ಇವರ ಪಾಲಿಗೆ ಅದು ಲೆಕ್ಕಕ್ಕೂ ಬರುವುದಿಲ್ಲ. ಆದರೆ, ವಿದೇಶಗಳಲ್ಲಿ ಹಾಗೆ ಆಗುವುದೇ ಇಲ್ಲ.

ಬಗ್ದಾದಿ ಹತ್ಯೆ ಮಾಡಿದ್ದೇವೆ ಎಂದು ಬೀಗಬೇಡಿ: ಅಮೆರಿಕಕ್ಕೆ ಐಎಸ್ ಎಚ್ಚರಿಕೆಬಗ್ದಾದಿ ಹತ್ಯೆ ಮಾಡಿದ್ದೇವೆ ಎಂದು ಬೀಗಬೇಡಿ: ಅಮೆರಿಕಕ್ಕೆ ಐಎಸ್ ಎಚ್ಚರಿಕೆ

ಹೌದು, ಇರಾಕ್ ನಲ್ಲಿ ಜನರ ಪ್ರತಿಭಟನೆಯಿಂದ ರೋಸಿ ಹೋದ ದೇಶದ ಪ್ರಧಾನಮಂತ್ರಿಯೇ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದಾರೆ. ಆದಷ್ಟು ಬೇಗ ತಮ್ಮನ್ನು ಆಳುವ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ತಮ್ಮ ನಾಯಕರಿಗೇ ಹೇಳಿದ್ದಾರೆ.

 Iraq PM Says Will Resign After Bloody Protests

ಅಚ್ಚರಿ ಎನಿಸಿದರೂ ಇದು ಸತ್ಯ. ಕಳೆದ ಒಂದು ವಾರಗಳಿಂದ ಇರಾಕ್ ನಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳು ಹೆಚ್ಚಾಗಿ ನಡೆಯುತ್ತಿವೆ. ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದ್ದು, ಆಂತರಿಕ ಆಡಳಿತದಲ್ಲಿ ಇರಾನ್ ಮಧ್ಯಪ್ರವೇಶಿಸುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದರು. ಈ ಹಿನ್ನಲೆಯಲ್ಲಿ ಕಳೆದ ಅಕ್ಟೋಬರ್ 1ರಿಂದ ಇರಾನ್ ನಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದವು.

ಇದರಿಂದ ನೊಂದ ಪ್ರಧಾನಮಂತ್ರಿ ಅದೆಲ್ ಅಬ್ದುಲ್ ಮಹ್ದಿ, ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಬಗ್ದಾದಿಯನ್ನು ಕೊಂದ ನಾಯಿ 'ಅಮೆರಿಕನ್ ಹೀರೋ': ಪದಕ ತೊಡಿಸಿದರೇ ಟ್ರಂಪ್?ಬಗ್ದಾದಿಯನ್ನು ಕೊಂದ ನಾಯಿ 'ಅಮೆರಿಕನ್ ಹೀರೋ': ಪದಕ ತೊಡಿಸಿದರೇ ಟ್ರಂಪ್?

ಇರಾಕ್ ಸಂಸತ್ ನಲ್ಲಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದು, ಅಂಗೀಕರಿಸುವಂತೆ ಇರಾಕ್ ಪ್ರಧಾನಮಂತ್ರಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ, ತಮ್ಮ ರಾಜೀನಾಮೆ ಅಂಗೀಕಾರಗೊಂಡ ಬೆನ್ನಲ್ಲೇ ನೂತನ ಪ್ರಧಾನಮಂತ್ರಿಯನ್ನು ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿಯನ್ನು ಸಂಸತ್ ಸದಸ್ಯರಿಗೆ ಬಿಟ್ಟುಕೊಟ್ಟಿದ್ದಾರೆ.

English summary
Iraq Prime Minister Adel Abdul-Mahdi Says Will Resign After Anti-Government Protests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X