ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇರಾಕ್ ನಲ್ಲಿ ಹತ್ಯೆಯಾದ 39 ಭಾರತೀಯರ ಪಾರ್ಥಿವ ಶರೀರ ಇಂದು ಸ್ವದೇಶಕ್ಕೆ
ನವದೆಹಲಿ, ಮಾರ್ಚ್ 20: ಇರಾಕಿನಲ್ಲಿ ಹತ್ಯೆಗೊಳಗಾದ 30 ಭಾರತೀಯರ ಪಾರ್ಥಿವ ಶರೀರವನ್ನು ಇಂದು ಭಾರತಕ್ಕೆ ಕರೆತರಲಾಗುತ್ತಿದೆ. ನಿನ್ನೆ(ಏ.1) ಇರಾಕಿಗೆ ತೆರಳಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಇಂದು(ಏ.2) ಹಿಂದಿರುಗಲಿದ್ದು, 39 ಭಾರತೀಯರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
2014 ರಲ್ಲಿ ಐಸಿಸ್(ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಅಂಡ್ ಸಿರಿಯಾ) ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿದ್ದ 40 ಭಾರತೀಯರಲ್ಲಿ ಓರ್ವ ಮಾತ್ರ ಬಾಂಗ್ಲಾದೇಶಿಯರೊಡನೆ ತಪ್ಪಿಸಿಕೊಂಡು ಬಂದಿದ್ದು, ಉಳಿದ 39 ಜನರನ್ನು ಹತ್ಯೆಗೈಯ್ಯಲಾಗಿತ್ತು.
ಇರಾಕ್‌ನ ಆ ದಿಬ್ಬದ ಅಡಿಯಲ್ಲಿತ್ತು 39 ಭಾರತೀಯರ ಶವ
39 ಭಾರತೀಯ ಕಾರ್ಮಿಕರೂ ಇರಾಕ್ ನ ಮೊಸುಲ್ ನಲ್ಲಿ ಹತ್ಯೆಗೀಡಾಗಿದ್ದಾರೆಂದು ಮಾರ್ಚ್ 22 ರಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ್ದರು.