ಇರಾಕ್ ಮದುವೆ ಔತಣ ಕೂಟದ ಮೇಲೆ ಆತ್ಮಹತ್ಯಾ ದಾಳಿ, 26 ಸಾವು

Posted By:
Subscribe to Oneindia Kannada

ತಿಕ್ರಿತ್, ಮಾರ್ಚ್ 9: ಇರಾಕ್ ನ ತಿಕ್ರಿತ್ ಬಳಿ ಸೇರಿದ್ದ ಮದುವೆ ಕಾರ್ಯಕ್ರಮದಲ್ಲಿ ಬುಧವಾರ ಆತ್ಮಹತ್ಯಾ ಬಾಂಬರ್ ದಾಳಿ ನಡೆದಿದ್ದು, 26 ಮಂದಿ ಸಾವನ್ನಪ್ಪಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಈ ಬಗ್ಗೆ ಮಾತನಾಡಿದ್ದು, ಹಜಾಜ್ ಗ್ರಾಮದಲ್ಲಿ ನಡೆದ ದಾಳಿಯನ್ನು ನಮ್ಮ ಇಬ್ಬರು ಉಗ್ರರು ನಡೆಸಿದ್ದಾರೆ ಎಂದಿದೆ.

ನೃತ್ಯ ಮಾಡುತ್ತಿದ್ದ ಗುಂಪಿನ ಮಧ್ಯೆ ಆತ್ಮಹತ್ಯಾ ಬಾಂಬರ್ ಮೊದಲು ಸ್ಫೋಟ ಮಾಡಿಕೊಂಡಿದ್ದಾನೆ. ಎರಡನೇ ದಾಳಿಯು ಮದುವೆಗಾಗಿ ಸೇರಿದ್ದವರಿಗೆ ಸಹಾಯ ಮಾಡುತ್ತಿದ್ದವರನ್ನು ಗುರಿಯಾಗಿಸಿಕೊಂಡು ಮಾಡಲಾಗಿದೆ. ಮೃತರಲ್ಲಿ ಬಹುತೇಕರು ಮಕ್ಕಳು ಎಂದು ಸ್ಥಳೀಯ ಸರಕಾರಿ ವಕ್ತಾರರೊಬ್ಬರು ತಿಳಿಸಿದ್ದಾರೆ.[ಪಾಕ್, ಇರಾಕ್ ಶಾಲಾ ಪುಸ್ತಕಗಳಲ್ಲಿ 'ಎ' ಫಾರ್ ಎ.ಕೆ.-47, 'ಬಿ' ಫಾರ್ ಬ್ಯಾಟಲ್ !]

Iraq: IS suicide bombers kill 26 at Tikrit wedding party

ಬುಧವಾರ ಸಂಜೆ ಮದುವೆ ಔತಣ ಕೂಟವನ್ನು ಇರಾಕ್ ಪಶ್ಚಿಮ ಅನ್ಬರ್ ಪ್ರಾಂತ್ಯದಿಂದ ಸ್ಥಳಾಂತರಿಸಿದ್ದ ಕುಟುಂಬಗಳಿಗಾಗಿ ಆಯೋಜಿಸಲಾಗಿತ್ತು. ಐಎಸ್ ವಿರೋಧಿ ಗುಂಪಿನ ಜತೆಗೆ ಇವರ ನಂಟಿತ್ತು ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಕನಿಷ್ಠ ಇಪ್ಪತ್ತೈದು ಮಂದಿ ಗಾಯಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two suicide bombers have blown themselves up, killing 26 people, as wedding guests gathered in a village near the Iraqi city of Tikrit.
Please Wait while comments are loading...