ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯ ಪ್ರಾಚ್ಯದಲ್ಲಿ ಮಹಾಯುದ್ಧ! ಇರಾನ್ ಅಣುಸ್ಥಾವರದ ಮೇಲೆ ಅಟ್ಯಾಕ್!

|
Google Oneindia Kannada News

ಮಧ್ಯ ಪ್ರಾಚ್ಯದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಇರಾನ್‌ನ ಬಿಟ್ಟೂಬಿಡದೆ ಕಾಡುತ್ತಿರುವ ಸೈಬರ್ ಕಿರಾತಕರು ಮತ್ತೆ ಶಾಕ್ ಕೊಟ್ಟಿದ್ದಾರೆ. ಇರಾನಿನ ನತಾಂಜ್‌ ನಗರದ ಅಂಡರ್‌ಗ್ರೌಂಡ್ ಯುರೇನಿಯಂ ಅಣು ಸಂಸ್ಕರಣಾ ಘಟಕದಲ್ಲಿ ದಿಢೀರ್ ವಿದ್ಯುತ್‌ ಕಡಿತವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಇರಾನ್ ಅಣುಸ್ಥಾವರ ಬಂದ್ ಮಾಡಿ ಹೈಅಲರ್ಟ್ ಘೋಷಿಸಿದೆ.

ಸಹಜವಾಗಿ ಈ ದಾಳಿಗೆ ಇರಾನ್, ಇಸ್ರೇಲ್ ಸರ್ಕಾರವನ್ನು ದೂಷಿಸಿದೆ. ಇರಾನ್ ಸೇಡು ತೀರಿಸಿಕೊಳ್ಳುವ ಮಾತುಗಳನ್ನು ಆಡುತ್ತಿದೆ. ಹೀಗಾಗಿ ಮಧ್ಯ ಪ್ರಾಚ್ಯದಲ್ಲಿ ಮಹಾಯುದ್ಧದ ಸನ್ನಿವೇಶವೇ ಸೃಷ್ಟಿಯಾಗಿದೆ. ಮತ್ತೊಂದ್ಕಡೆ ಘಟನೆಯ ಬೆನ್ನಲ್ಲೇ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಇಸ್ರೇಲ್‌ಗೆ ಓಡೋಡಿ ಬಂದಿದ್ದು, ಗಂಭೀರ ಚರ್ಚೆ ನಡೆದಿದೆ.

ಏಕೆಂದರೆ ಇಸ್ರೇಲ್‌ಗೆ ಅಮೆರಿಕ ಅತ್ಯಾಪ್ತ ರಾಷ್ಟ್ರ. ಹೀಗಾಗಿ ಇಸ್ರೇಲ್‌ಗೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ದಿಢೀರ್ ಭೇಟಿ ನೀಡಿ ಇಸ್ರೇಲ್‌ ಪಿಎಂ ನೇತನ್ಯಾಹು ಜೊತೆಗೆ ಮಾತುಕತೆ ನಡೆಸಿದ್ದಾರೆ. ಇರಾನ್‌ ಮೇಲೆ ಹೀಗೆ ಸೈಬರ್ ದಾಳಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಹಲವು ಬಾರಿ ಇಂತಹ ಘಟನೆಗಳು ಸಂಭವಿಸಿವೆ. ಇದೇ ವಿಚಾರವಾಗಿ ಇಸ್ರೇಲ್-ಇರಾನ್ ವಾಗ್ದಾಳಿ ನಡೆಸುತ್ತಾ ಬಂದಿವೆ.

ಹಡಗಿನ ಮೇಲೆ ಭೀಕರ ದಾಳಿ..!

ಹಡಗಿನ ಮೇಲೆ ಭೀಕರ ದಾಳಿ..!

ಇನ್ನೂ ಮೊನ್ನೆ ಮೊನ್ನೆ ಕೆಂಪು ಸಮುದ್ರದಲ್ಲಿ ಅಂದರೆ ಸೂಯೆಜ್ ಕಾಲುವೆ ಕೂಡುವ ಸಮುದ್ರದಲ್ಲಿ ಇರಾನ್‌ ಹಡಗಿನ ಮೇಲೆ ಭೀಕರ ದಾಳಿ ನಡೆದಿತ್ತು. ತನ್ನ ಸರಕು ಸಾಗಾಣಿಕೆ ಹಡಗಿನ ಮೇಲೆ ದಾಳಿ ನಡೆದಿರುವುದನ್ನು ಕಂಡು ಇರಾನ್ ಕೆಂಡವಾಗಿತ್ತು. ಇಸ್ರೇಲ್‌ನ ಹಡಗುಗಳ ಮೇಲೆ ಹಿಂದಿನ ದಾಳಿಗೆ ಇದು ಪ್ರತೀಕಾರವಾಗಿದೆ ಎಂಬ ಅನುಮಾನವನ್ನೂ ಇರಾನ್ ವ್ಯಕ್ತಪಡಿಸಿತ್ತು. ಇದೀಗ ಮತ್ತೊಮ್ಮೆ ಇರಾನ್‌ನ ಅಣುಕೇಂದ್ರಗಳ ಮೇಲೆ ದಾಳಿ ನಡೆದಿರುವುದು ಎರಡೂ ರಾಷ್ಟ್ರಗಳ ನಡುವೆ ಕಿಚ್ಚು ಹೊತ್ತುವಂತೆ ಮಾಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈ ಎಲ್ಲಾ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿವೆ.

ಅಣು ವಿಜ್ಞಾನಿಯ ಭೀಕರ ಹತ್ಯೆ

ಅಣು ವಿಜ್ಞಾನಿಯ ಭೀಕರ ಹತ್ಯೆ

ನವೆಂಬರ್ 27ರಂದು ಇರಾನ್ ಅಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಕಾರ್‌ನಲ್ಲಿ ತೆರಳುತ್ತಿದ್ದಾಗ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ದಾಳಿಗೆ ಇಸ್ರೇಲ್ ರೂವಾರಿ ಎಂದು ಇರಾನ್ ಆರೋಪ ಮಾಡಿತ್ತು. ಸೇನಾ ಪರಮಾಣು ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಹ್ಸೆನ್‌ ಫಖ್ರಿಜಾದೆಹ್‌ ಕಾರನ್ನು ಅಡ್ಡಹಾಕಿ ಮಷಿನ್ ಗನ್ ಬಳಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಘಟನೆ ಮಾಸುವ ಮೊದಲೇ ಇರಾನ್‌ನ ಅಣು ಕೇಂದ್ರಗಳ ಮೇಲೆ ಸೈಬರ್ ದಾಳಿ ನಡೆದಿರುವುದು ಮಧ್ಯಪ್ರಾಚ್ಯ ಶಾಂತಿಗೆ ಭಂಗ ತಂದಿದೆ. ಪ್ರತಿಕಾರಕ್ಕಾಗಿ ಇರಾನ್ ಕಾದು ಕುಳಿತಿದ್ದು, ಇಸ್ರೇಲ್‌ಗೆ ಕೌಂಟರ್ ಕೊಡುವ ಲೆಕ್ಕಾಚಾರ ಹಾಕುತ್ತಿದೆ.

ನ್ಯೂಕ್ಲಿಯರ್ ಕಂಪ್ಯೂಟರ್ಸ್ ಹೈಜಾಕ್

ನ್ಯೂಕ್ಲಿಯರ್ ಕಂಪ್ಯೂಟರ್ಸ್ ಹೈಜಾಕ್

ಕೆಲ ತಿಂಗಳ ಹಿಂದೆ ಇರಾನ್ ಮೂಲದ ಹ್ಯಾಕರ್ಸ್ ಗ್ಯಾಂಗ್ ಇಸ್ರೇಲ್‌ನ ಅಣುಸ್ಥಾವರದ ಮೇಲೆ ಸೈಬರ್ ಅಟ್ಯಾಕ್ ಮಾಡಿತ್ತು. ಆದರೆ ದಾಳಿಯಲ್ಲಿ ವಿಫಲವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಇಸ್ರೇಲ್‌ ಕೌಂಟರ್ ಕೊಟ್ಟಿತ್ತು. ಆದರೆ ಇಸ್ರೇಲ್‌ ಹ್ಯಾಕರ್ಸ್ ನಡೆಸಿದ ದಾಳಿ ಫಲ ನೀಡಿ, ಇರಾನ್‌ನ ಪರಮಾಣು ಸ್ಥಾವರಗಳಲ್ಲಿ ಘೋರ ದುರಂತ ನಡೆದಿತ್ತು. ಇದ್ದಕ್ಕಿದ್ದಂತೆ ಪರಮಾಣು ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡು ಇರಾನ್ ಬೆಚ್ಚಿಬಿದ್ದಿತ್ತು. ಈ ದಾಳಿಯನ್ನು ನಡೆಸಿದ್ದು ಇಸ್ರೇಲ್ ಎಂಬ ಆರೋಪವನ್ನ ಅಂದಿನಿಂದಲೂ ಇರಾನ್ ಮಾಡುತ್ತಾ ಬಂದಿದೆ. ಆದರೆ ಈವರೆಗೂ ಅದಕ್ಕೆ ಸಾಕ್ಷಿಗಳು ಸಿಕ್ಕಿಲ್ಲ.

ಲೆಕ್ಕವಿಲ್ಲದಷ್ಟು ವಿಜ್ಞಾನಿಗಳ ಕೊಲೆ

ಲೆಕ್ಕವಿಲ್ಲದಷ್ಟು ವಿಜ್ಞಾನಿಗಳ ಕೊಲೆ

ಅಂದಹಾಗೆ ದಶಕದ ಹಿಂದೆ ಇರಾನ್‌ ಪರಮಾಣು ಯೋಜನೆ ಪ್ರಾರಂಭಿಸಿದ ನಂತರ ಫಖ್ರಿಜಾದೆಹ್‌ ರೀತಿ ಹಲವು ವಿಜ್ಞಾನಿಗಳನ್ನ ಕೊಂದು ಹಾಕಲಾಗಿದೆ. ಎಲ್ಲಾ ಕೊಲೆಗಳ ಹಿಂದೆ ಇಸ್ರೇಲ್‌ ಕೈವಾಡವಿದೆ ಎಂಬುದು ಇರಾನ್‌ ಆರೋಪ. ಒಂದು ಕಡೆ ಅರಬ್ ರಾಷ್ಟ್ರಗಳು ಒಂದೊಂದಾಗಿ ಇಸ್ರೇಲ್ ಜೊತೆಗಿನ ದ್ವೇಷ ಮರೆತು ಸ್ನೇಹ ಸಾಧಿಸುತ್ತಿವೆ. ಆದರೆ ಇರಾನ್ ಮಾತ್ರ ಇಸ್ರೇಲ್ ಜೊತೆಗೆ ಸ್ನೇಹ ಮಾಡಲು ಬಿಲ್‌ಕುಲ್ ಸಿದ್ಧವಿಲ್ಲ. ಇದು ಉರಿವ ಬೆಂಕಿಗೆ ತುಪ್ಪ ಸುರಿಯುತ್ತಿದೆ. ದಿನದಿಂದ ದಿನಕ್ಕೆ ಎರಡೂ ರಾಷ್ಟ್ರಗಳ ಸಂಬಂಧ ಹಳಸುತ್ತಿದೆ.

English summary
Allegedly Iran’s nuclear plant in Natanz city attacked by cyber hackers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X