• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೇಡಿಗೆ ಸೇಡು, ರಕ್ತಕ್ಕೆ ರಕ್ತ..! ಇದು ಇರಾನ್ ಸರ್ವಾಧಿಕಾರಿ ಶಪಥ..!

|
Google Oneindia Kannada News

ಇರಾನ್‌ನ ಅಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಹತ್ಯೆ ಸಂಬಂಧ ಮಹತ್ವದ ಮಾಹಿತಿ ಹೊರಬಿದ್ದಿದೆ. ಹಂತಕರು ಫಖ್ರಿಜಾದೆಹ್‌ ಕೊಲೆಗೆ ರಿಮೋಟ್ ಕಂಟ್ರೋಲ್ ಮಷಿನ್ ಗನ್ ಬಳಸಿದ್ದರು ಎಂಬ ವಿಚಾರವನ್ನ ಇರಾನ್‌ನ ಸುದ್ದಿ ಸಂಸ್ಥೆಗಳು ಹೊರಹಾಕಿವೆ. ಸೇನಾ ಪರಮಾಣು ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಕಾರನ್ನು ಅಡ್ಡಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ವಿಚಾರವಾಗಿ ಸಾಕಷ್ಟು ಮಾಹಿತಿಗಳನ್ನು ಇರಾನ್ ಮುಚ್ಚಿಟ್ಟಿತ್ತು. ಮಾನ ಹರಾಜಾಗುತ್ತದೆ ಎಂಬ ಕಾರಣಕ್ಕೆ ಹಲವು ಸಂಗತಿ ಮರೆಮಾಚಿತ್ತು.

ಇದೀಗ ಒಂದೊಂದೇ ವಿಷಯ ಹೊರಬರುತ್ತಿದ್ದು, ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಕೊಲೆ ನಡೆದಿದ್ದು ಹೇಗೆ ಎಂಬ ಮಾಹಿತಿ ಸಿಕ್ಕಿದೆ. ಕಾರ್‌ನಲ್ಲಿ ತೆರಳುತ್ತಿದ್ದ ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಹಾಗೂ ಜೊತೆಗಾರರ ಮೇಲೆ ದಿಢೀರ್ ಮತ್ತೊಂದು ಕಾರು ಅಟ್ಯಾಕ್ ಮಾಡಿದೆ. ದಾಳಿಗೆ ರಿಮೋಟ್ ಕಂಟ್ರೋಲ್ಡ್ ಮಷಿನ್ ಗನ್ ಬಳಸಿ ಗುಂಡು ಹಾರಿಸಲಾಗಿದೆ. ದಾಳಿಗೆ ಅಂತಾ 2 ಕಾರ್‌ಗಳನ್ನ ಬಳಸಲಾಗಿದ್ದು, 1 ಕಾರ್‌ನಲ್ಲಿ ದೂರ ಕುಳಿತು ರಿಮೋಟ್ ಹಿಡಿದಿದ್ದ ಹಂತಕರು ಮತ್ತೊಂದು ಕಾರ್‌ ಮೂಲಕ ಮಷಿನ್ ಗನ್‌ನಿಂದ ಗುಂಡಿನ ಮಳೆಗರೆದಿದ್ದಾರೆ. ಸುಮಾರು 150 ಮೀಟರ್ ಅಂತರದಲ್ಲಿ ಹತ್ಯೆ ನಡೆದಿದೆ ಎಂಬುದು ಈಗ ರಿವೀಲ್ ಆಗಿದೆ. ರಿಮೋಟ್ ಮೂಲಕ ಫೈರಿಂಗ್ ಮಾಡಿ ಫಖ್ರಿಜಾದೆಹ್‌ ಹಾಗೂ ಜೊತೆಗಾರರನ್ನ ಹತ್ಯೆ ಮಾಡಿದ್ದಾರೆ.

ಗುಂಡಿನ ದಾಳಿಯಲ್ಲಿ ಇರಾನ್‌ನ ಪ್ರಮುಖ ಅಣು ವಿಜ್ಞಾನಿ ಹತ್ಯೆ: ಇಸ್ರೇಲ್ ಕೈವಾಡ ಆರೋಪಗುಂಡಿನ ದಾಳಿಯಲ್ಲಿ ಇರಾನ್‌ನ ಪ್ರಮುಖ ಅಣು ವಿಜ್ಞಾನಿ ಹತ್ಯೆ: ಇಸ್ರೇಲ್ ಕೈವಾಡ ಆರೋಪ

ಸೇಡಿಗೆ ಸೇಡು, ರಕ್ತಕ್ಕೆ ರಕ್ತ..!

ಇನ್ನು ಘಟನೆ ಸಂಬಂಧ ಇರಾನ್ ರೊಚ್ಚಿಗೆದ್ದಿದೆ. ಇದು ಇಸ್ರೇಲ್ ಕೃತ್ಯ ಎಂದು ಇರಾನ್ ಗಂಭೀರ ಆರೋಪ ಮಾಡಿದೆ. ಇರಾನ್‌ನ ಅಧ್ಯಕ್ಷ ಹಸನ್‌ ರೌಹಾನಿ ಬಹಿರಂಗವಾಗಿಯೇ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆಯನ್ನೂ ಮಾಡಿದ್ದಾರೆ. ಫಖ್ರಿಜಾದೆಹ್‌ ಹತ್ಯೆಯಿಂದ ಇರಾನ್‌ನ ಪರಮಾಣು ಯೋಜನೆ ನಿಂತು ಹೋಗಲ್ಲ. ಆದರೆ ಈ ಕೊಲೆಯ ಹಿಂದೆ ಇರುವ ಶತ್ರುಗಳಿಗೆ ಸಮಯ ಬಂದಾಗ ತಕ್ಕ ಉತ್ತರ ನೀಡುತ್ತೇವೆ ಎಂದಿದ್ದಾರೆ. ಈ ಹೇಳಿಕೆ ಇರಾನ್ ಶತ್ರು ರಾಷ್ಟ್ರಗಳಿಗೆ ಬೆವರಿಳಿಯುವಂತೆ ಮಾಡಿದೆ.

ಲೆಕ್ಕವಿಲ್ಲದಷ್ಟು ವಿಜ್ಞಾನಿಗಳ ಕೊಲೆ

ಅಂದಹಾಗೆ ದಶಕದ ಹಿಂದೆ ಇರಾನ್‌ ಪರಮಾಣು ಯೋಜನೆ ಪ್ರಾರಂಭಿಸಿದ ನಂತರ ಫಖ್ರಿಜಾದೆಹ್‌ ರೀತಿ ಹಲವು ವಿಜ್ಞಾನಿಗಳನ್ನ ಕೊಂದು ಹಾಕಲಾಗಿದೆ. ಎಲ್ಲಾ ಕೊಲೆಗಳ ಹಿಂದೆ ಇಸ್ರೇಲ್‌ ಕೈವಾಡವಿದೆ ಎಂಬುದು ಇರಾನ್‌ ಆರೋಪ. ಆದರೆ ಫಖ್ರಿಜಾದೆಹ್‌ ಹತ್ಯೆ ಬಗ್ಗೆ ಇಸ್ರೇಲ್‌ ಇನ್ನೂ ರಿಯಾಕ್ಟ್ ಮಾಡಿಲ್ಲ. ಏಕೆಂದರೆ ಸದ್ಯ ಇಸ್ರೆಲ್‌ನಲ್ಲೂ ಆತಂಕರಿಕ ಕಚ್ಚಾಟ ನಡೆಯುತ್ತಿದೆ. ಇಸ್ರೇಲ್‌ ಆಡಳಿತದ ವಿರುದ್ಧ ಅಲ್ಲಿನ ಜನರು ದಂಗೆ ಎದ್ದಿದ್ದಾರೆ. ಹೀಗಾಗಿ ಇಸ್ರೇಲ್‌ ತಟಸ್ಥ ಧೋರಣೆ ಅನುಸರಿಸುತ್ತಿದೆ ಎನ್ನಲಾಗಿದೆ. ಫಖ್ರಿಜಾದೆಹ್‌ ಇರಾನ್‌ನ ಉನ್ನತ ಪರಮಾಣು ಮತ್ತು ರಕ್ಷಣಾ ವಿಭಾಗದ ವಿಜ್ಞಾನಿಯಾಗಿದ್ದರು. ಫಖ್ರಿಜಾದೆಹ್‌ ಮಾಡಿದವರಿಗೆ ಹಾಗೂ ಹತ್ಯೆಯಲ್ಲಿ ಭಾಗಿಯಾಗಿದ್ದವರಿಗೆ ತಕ್ಕೆ ಶಿಕ್ಷೆ ನೀಡುವುದು ಇರಾನ್‌ನ ಆದ್ಯತೆ ಎಂದು ಖಮೇನಿ ಗುಡುಗಿದ್ದಾರೆ. ಈ ಮೂಲಕ ಇರಾನ್‌ನ ಬದ್ಧ ವೈರಿ ಇಸ್ರೇಲ್‌ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ ಖಮೇನಿ.

ನ್ಯೂಕ್ಲಿಯರ್ ಕಂಪ್ಯೂಟರ್ಸ್ ಹೈಜಾಕ್

   Sukhoi su 35 ಖರೀದಿಸುವ ರೇಸಿನಲ್ಲಿ ಭಾರತದ ಜೊತೆ ಬೇರಾವ ದೇಶಗಳಿದೆ ? | Oneindia Kannada

   ಕೆಲ ತಿಂಗಳ ಹಿಂದೆ ಇರಾನ್ ಮೂಲದ ಹ್ಯಾಕರ್ಸ್ ಗ್ಯಾಂಗ್ ಇಸ್ರೇಲ್‌ನ ಅಣುಸ್ಥಾವರದ ಮೇಲೆ ಸೈಬರ್ ಅಟ್ಯಾಕ್ ಮಾಡಿತ್ತು. ಆದರೆ ದಾಳಿಯಲ್ಲಿ ವಿಫಲವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಇಸ್ರೇಲ್‌ ಕೌಂಟರ್ ಕೊಟ್ಟಿತ್ತು. ಆದರೆ ಇಸ್ರೇಲ್‌ ಹ್ಯಾಕರ್ಸ್ ನಡೆಸಿದ ದಾಳಿ ಫಲ ನೀಡಿ, ಇರಾನ್‌ನ ಪರಮಾಣು ಸ್ಥಾವರಗಳಲ್ಲಿ ಘೋರ ದುರಂತ ನಡೆದಿತ್ತು. ಇದ್ದಕ್ಕಿದ್ದಂತೆ ಪರಮಾಣು ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡು ಇರಾನ್ ಬೆಚ್ಚಿಬಿದ್ದಿತ್ತು. ಈ ದಾಳಿಯನ್ನು ನಡೆಸಿದ್ದು ಇಸ್ರೇಲ್ ಎಂಬ ಆರೋಪವನ್ನ ಅಂದಿನಿಂದಲೂ ಇರಾನ್ ಮಾಡುತ್ತಾ ಬಂದಿದೆ. ಆದರೆ ಈವರೆಗೂ ಅದಕ್ಕೆ ಸಾಕ್ಷಿಗಳು ಸಿಕ್ಕಲ್ಲ. ಇಷ್ಟೆಲ್ಲದರ ಮಧ್ಯೆ ಇರಾನ್‌ನ ಅಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಹತ್ಯೆ ನಡೆದುಹೋಗಿದೆ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ.

   English summary
   A major information revealed about Iranian nuclear scientist murder. Killers where used a remote-controlled machine gun to shot Iranian nuclear scientist.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X