• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇರಾನ್‌ನ ಮಾನವ ಹಕ್ಕು ಹೋರಾಟಗಾರ್ತಿಗೆ 38 ವರ್ಷ ಜೈಲು, 148 ಛಡಿ ಏಟು

|

ಟೆಹರಾನ್, ಮಾರ್ಚ್‌ 13: ಇರಾನ್ ದೇಶದ ಮಾನವ ಹಕ್ಕು ಹೋರಾಟಗಾರ್ತಿ ನಸ್ರಿನ್ ಸೋಟುದೇಹ್ ಅವರಿಗೆ ನ್ಯಾಯಾಲಯವು 38 ವರ್ಷ ಜೈಲು ಶಿಕ್ಷೆ ಹಾಗೂ 148 ಛಡಿ ಏಟು ನೀಡುವ ಶಿಕ್ಷೆ ನೀಡಿದೆ.

ನಸ್ರಿನ್ ಅವರು ಇರಾನ್‌ನಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಮಹಿಳೆಯರು ಖಡ್ಡಾಯ ಹಿಜಬ್ ಧರಿಸುವ ವಿರುದ್ಧ, ಅಲ್ಲಿನ ಸರ್ಕಾರದ ಅರಾಜಕತೆಯ ವಿರುದ್ಧ ಅವರು ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಜನರನ್ನು ಸರ್ಕಾರದ ವಿರುದ್ಧ ಸಂಘಟಿತರನ್ನಾಗಿಸುತ್ತಿದ್ದರು.

ನಸ್ರಿನ್ ಅವರು ಜನರನ್ನು ಸಂಘಟಿಸಿ ಅವರನ್ನು ದೇಶದ ಭದ್ರತೆ ವಿರುದ್ಧ ಅಪರಾಧ ಎಸಗಲು ಪ್ರೋತ್ಸಾಹ ನೀಡಿದ್ದಾರೆ, ಮತ್ತು ದೇಶದ ಸರ್ವೋಚ್ಛ ನಾಯಕನಿಗೆ ಅಪಮಾನ ಎಸಗಿದ್ದಾರೆ ಎಂಬ ಎರಡು ಆರೋಪಗಳನ್ನು ಹೊರಿಸಲಾಗಿತ್ತು. ಈ ಆರೋಪಗಳಿಗೆ ಸಂಬಂಧಿಸಿದಂತೆ ಅವರಿಗೆ ಈಗ ಶಿಕ್ಷೆ ವಿಧಿಸಲಾಗಿದೆ.

ನಸ್ರಿನ್ ಅವರು ಮಹಿಳೆಯರ ಹಕ್ಕು ರಕ್ಷಣೆ, ನಾಗರೀಕ ಹಕ್ಕು ರಕ್ಷಣೆ ಹಾಗೂ ಮರಣ ದಂಡನೆ ಶಿಕ್ಷೆ ವಿರುದ್ಧ ಹೋರಾಟಕ್ಕೆ ತಮ್ಮ ಜೀವನ ಅರ್ಪಿಸಿಕೊಂಡಿದ್ದಾರೆ. ಅವರಿಗೆ ನೀಡಿರುವ ಈ ಶಿಕ್ಷೆಯನ್ನು ಆಮ್ನೆಸ್ಟಿ ಸೇರಿ ಹಲವು ಅಂತರರಾಷ್ಟ್ರೀಯ ಸಂಘಟನೆಗಳು ವಿರೋಧಿಸಿವೆ.

ಹೋರಾಟವನ್ನೇ ಜೀವನವಾಗಿಸಿಕೊಂಡಿರುವ ನಸ್ರಿನ್ ಅವರು ಚುನಾವಣಾ ಅಕ್ರಮದ ವಿರುದ್ಧ ಮಾಡಿದ ಹೋರಾಟಕ್ಕಾಗಿ 2009 ರಲ್ಲಿ ಜೈಲಿಗೆ ಹೋಗಬೇಕಾಯಿತು ಆದರೆ 2013 ರಲ್ಲಿ ಅವರ ಬಿಡುಗಡೆ ಆಗಿತ್ತು. ಈಗ ಮತ್ತೆ ಜೂನ್‌ನಲ್ಲಿ ಬಂಧನವಾಗಿ ಈಗ ಶಿಕ್ಷೆ ಪ್ರಕಟಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Iranian human writes activists Nasrin Sotoudeh sentenced 38 years of Jail and 148 lashes. She is fighting for women rights and many other chaos of government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more