ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ವೆಬ್ ಸೈಟ್ ಹ್ಯಾಕ್, ರಾಯಭಾರ ಕಚೇರಿ ಮೇಲೆ ದಾಳಿ

|
Google Oneindia Kannada News

ಬಾಗ್ದಾದ್, ಜನವರಿ 05: ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ವಾಯುದಾಳಿ ನಡೆಸಿ ಭದ್ರತಾ ಪಡೆಯ ಕಮಾಂಡರ್ ಖಾಸೀಂ ಸುಲೇಮಾನಿ ಹತ್ಯೆಗೈದ ಅಮೆರಿಕದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಈ ನಡುವೆ ಬಾಗ್ದಾದ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಕ್ಷಿಪಣಿ ದಾಳಿ ನಡೆದಿದೆ.

ಇರಾನ್ ನಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಬಾಗ್ದಾದ್ ವಾಯುನೆಲೆಯಲ್ಲಿ ಅಮೆರಿಕ ಸೇನಾಪಡೆಗಳ ಹೆಲಿಕಾಪ್ಟರ್ ಗಳು ಯಾವುದೇ ಕ್ಷಣದಲ್ಲಿ ದಾಳಿಗೆ ಸಜ್ಜಾಗಿವೆ. ಈ ನಡುವೆ ಯುಎಸ್ ಫೆಡರಲ್ ಡೆಪೊಸಿಟರಿ ಲೈಬ್ರರಿ ಪ್ರೋಗ್ರಾಮ್ ವೆಬ್ ಸೈಟ್ ಹ್ಯಾಕ್ ಮಾಡಿರುವುದಾಗಿ ಇರಾನ್ ಹ್ಯಾಕರ್ಸ್ ಹೇಳಿದ್ದಾರೆ.

ಇರಾನ್ನಿಗೆ ಪ್ರತೀಕಾರದ ಎಚ್ಚರಿಕೆ ಸಂದೇಶ ಕಳಿಸಿದ ಟ್ರಂಪ್ಇರಾನ್ನಿಗೆ ಪ್ರತೀಕಾರದ ಎಚ್ಚರಿಕೆ ಸಂದೇಶ ಕಳಿಸಿದ ಟ್ರಂಪ್

ಇರಾನಿಯನ್ ಹ್ಯಾಕರ್ಸ್ ಎಂದು ಬರೆಯಲಾಗಿದೆ. ಇರಾನ್ ಪರಮೋಚ್ಚ ನಾಯಕ ಅಯತೋಲ್ಲ ಅಲಿ ಖಮೆನೆಯಿ ಭಾವಚಿತ್ರ ಹಾಗೂ ಇರಾನ್ ರಾಷ್ಟ್ರಧ್ವಜ ಹಾಕಲಾಗಿದೆ. ಇದು ಇರಾನ್ನಿನ ಸೈಬರ್ ದಾಳಿಯ ಶಕ್ತಿಯ ಅಲ್ಪ ಪ್ರಮಾಣದ ನಿದರ್ಶನವಾಗಿದೆ ಎಂದು ಮತ್ತೊಂದು ಅಡಿಬರಹ ಹಾಕಲಾಗಿದೆ.

Iranian hackers claim breach of US govt website in retaliation for airstrike

ಅಮೆರಿಕದ ಅಂತಾರಾಷ್ಟ್ರೀಯ ಭಯೋತ್ಪಾದನೆ ಹಾಗೂ ದಾಯೆಶ್ (ಐಸಿಸ್), ಅಲ್ ನುಸ್ರಾಹ್, ಅಲ್ ಕೈದಾ ಮುಂತಾದವುಗಳ ವಿರುದ್ಧ ಹೋರಾಡುತ್ತಿದ್ದ ಜನರಲ್ ಸೋಲೆಮನಿ ಅವರನ್ನು ಗುರಿಯಾಗಿಸಿ ದಾಳಿ ಮಾಡಿ ಕೊಲೆ ಮಾಡಿದ ಕೃತ್ಯವು ಅತ್ಯಂತ ಅಪಾಯಕಾರಿ ಮತ್ತು ಮೂರ್ಖತನದ್ದು. ತನ್ನ ಪುಂಡಾಟಿಕೆಯ ದುಸ್ಸಾಹಸಗಳ ಪರಿಣಾಮಗಳನ್ನು ಅಮೆರಿಕವು ಅನುಭವಿಸಬೇಕಾಗುತ್ತದೆ' ಎಂದು ಇರಾನ್ ವಿದೇಶಾಂಗ ಸಚಿವ ಜಾವೇದ್ ಝಾರಿಫ್ ಪ್ರತಿಕ್ರಿಯಿಸಿದ್ದರು.

ಇದಾದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿ, ನೀವು ಅಮೆರಿಕನ್ನರಿಗೆ ಮತ್ತು ಅಮೆರಿಕದ ಆಸ್ತಿಗೆ ಹಾನಿ ಮಾಡಿದರೆ ನಾವು ಇರಾನ್ ನ 52 ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತೇವೆ. ಈ ಸ್ಥಳಗಳು ನಿಮಗೆ ಮುಖ್ಯವಾಗಿವೆ. ನಿಮ್ಮ ಸಂಸ್ಕೃತಿಗೆ ಸಂಬಂಧಿಸಿವೆ ಎಂದು ಎಚ್ಚರಿಕೆ ನೀಡಿದ್ದರು.

READ IN ENGLISH

English summary
A group claiming to be hackers from Iran breached the website of a little-known US government agency on Saturday and posted messages vowing revenge for Washington's killing of top military commander Qasem Soleimani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X