ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ಉಪಾಧ್ಯಕ್ಷರಿಗೂ ಕೊರೊನಾ: ಒಟ್ಟು 26 ಮಂದಿ ಸಾವು

|
Google Oneindia Kannada News

ಟೆಹ್ರಾನ್, ಫೆಬ್ರವರಿ 28: ಕೇವಲ ಚೀನಾ ಮಾತ್ರವಲ್ಲದೆ ಕೊರೊನಾ ವೈರಸ್ ಇದೀಗ ಇರಾನ್‌ಗೂ ಲಗ್ಗೆ ಇಟ್ಟಿದೆ.

ಇರಾನ್‌ನಲ್ಲಿ 26 ಮಂದಿ ಕೊರೊನಾ(ಕೊವಿಡ್19)ದಿಂದ ಮೃತಪಟ್ಟಿದ್ದು, ಇದೀಗ ಇರಾನ್ ಉಪಾಧ್ಯಕ್ಷರಿಗೂ ಕೂಡ ವೈರಸ್ ತಗುಲಿದೆ.

ಕೊರೊನಾ ಪೀಡಿತ ದೇಶದಿಂದ ಬಂದವರಿಗೆ ಭಾರತದಲ್ಲಿ ಹೇಗಿರುತ್ತೆ ಚಿಕಿತ್ಸೆ?ಕೊರೊನಾ ಪೀಡಿತ ದೇಶದಿಂದ ಬಂದವರಿಗೆ ಭಾರತದಲ್ಲಿ ಹೇಗಿರುತ್ತೆ ಚಿಕಿತ್ಸೆ?

ಒಟ್ಟು ಇರಾನ್‌ನಲ್ಲಿ 245 ಪ್ರಕರಣಗಳು ಪತ್ತೆಯಾಗಿದ್ದು, ಎರಡು ದಿನಗಳಲ್ಲಿ 106 ಪ್ರಕರಣಗಳು ದೃಢಪಟ್ಟಿವೆ. ಏಳು ಮಂದಿ ಉಪಾಧ್ಯಕ್ಷರ ಪೈಕಿ ಮಸ್ಸೊಮೇಹ್ ಎಬ್ತೇಕರ್ ಅವರಿಗೆ ಸೋಂಕು ತಗುಲಿದೆ.

ಶುಕ್ರವಾರ ಮುಸ್ಲಿಮರಿಗೆ ಪವಿತ್ರ ದಿನ. ಹೀಗಾಗಿ ಇರಾನ್​ನಲ್ಲಿ ಇಂದು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಕೊರೊನಾ ವೈರಸ್​ ಭೀತಿ ಹೆಚ್ಚಿದ್ದರಿಂದ ಈ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.

 ಇರಾನ್‌ನಲ್ಲಿ ಕೊರೊನಾಗೆ 26 ಮಂದಿ ಬಲಿ

ಇರಾನ್‌ನಲ್ಲಿ ಕೊರೊನಾಗೆ 26 ಮಂದಿ ಬಲಿ

ಚೀನಾದಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಕೊರೊನಾ ವೈರಸ್​ ಅಟ್ಟಹಾಸ ಇರಾನ್​ನಲ್ಲೂ ಮುಂದುವರಿದಿದೆ. ಈವರೆಗೆ ಇರಾನ್​ ದೇಶದಲ್ಲೇ 26 ಜನರು ಮೃತಪಟ್ಟಿದ್ದು, ಈ ದೇಶದ ಉನ್ನತ ಹುದ್ದೆಯಲ್ಲಿರುವವರಿಗೂ ಈ ಭೀಕರ ವೈರಸ್​ ತಗುಲಿದೆ.

 ಇರಾನ್‌ನಲ್ಲಿ ನಮಾಜ್ ನಿಷೇಧ

ಇರಾನ್‌ನಲ್ಲಿ ನಮಾಜ್ ನಿಷೇಧ

ಚೀನಾ ಹೊರತುಪಡಿಸಿದರೆ ಕೊರನಾ ವೈರಸ್​ಗೆ ಮೃತಪಟ್ಟವರ ಸಂಖ್ಯೆ ಇರಾನ್​ನಲ್ಲಿ ಹೆಚ್ಚಿದೆ. ತೆಹ್ರಾನ್​ ಸೇರಿ ದೇಶದ ಅನೇಕ ಕಡೆಗಳಲ್ಲಿ ನಮಾಜ್​ ಮಾಡುವುದನ್ನು ನಿಷೇಧಿಸಲಾಗಿದೆ. ಈ ಮೂಲಕ ವೈರಸ್​ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

 ಅನೇಕ ಸಚಿವರಿಗೆ ಕೊರೊನಾ

ಅನೇಕ ಸಚಿವರಿಗೆ ಕೊರೊನಾ

ಇನ್ನು, ಇರಾನ್​ನ ಅನೇಕ ಸಚಿವರಿಗೆ ಕೊರನಾ ವೈರಸ್​ ತಟ್ಟಿದೆ. ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪಾಧ್ಯಕ್ಷೆ ಮಾಸೌಮೆಹ್​ ಎಬ್ಟೆಕರ್​, ಉಪ ಆರೋಗ್ಯ ಸಚಿವ ಇರಾಜ್​ಗೂ ಕೊರನಾ ವೈರಸ್​ ತಟ್ಟಿದೆ. ಇನ್ನು, ಚೀನಾ ಮಾದರಿಯಲ್ಲೇ ಇರಾನ್​ನಲ್ಲೂ ಕೊರೊನಾ ವೈರಸ್​ ತಗುಲಿದವರ ಸಂಖ್ಯೆ ದಿನೇ ದಿನೇ ಹೆಚ್ಚುತಲೇ ಇದೆ. ಗುರುವಾರ ಒಂದೇ ದಿನ 106 ಹೊಸ ಪ್ರಕರಣ ದಾಖಲಾಗಿದೆ.

 ಚೀನಾದಲ್ಲಿ ಮುಂದುವರಿದ ಮರಣ ಮೃದಂಗ

ಚೀನಾದಲ್ಲಿ ಮುಂದುವರಿದ ಮರಣ ಮೃದಂಗ

ಕೊರೊನಾ ವೈರಸ್​ಗೆ ಮೃತಪಡುವವರ ಸಂಖ್ಯೆ ಚೀನಾದಲ್ಲಿ ಮುಂದುವರಿದಿದೆ. ಈ ವರೆಗೆ ಸುಮಾರು 2,744 ಜನರುಮೃತಪಟ್ಟಿದ್ದಾರೆ. ಕೊರನಾ ವೈರಸ್​ ತಗುಲಿದವರ ಸಂಖ್ಯೆ 78,497ಕ್ಕೆ ಏರಿಕೆ ಆಗಿದೆ.

English summary
The coronavirus epidemic in Iran has cost 26 lives, the health ministry announced Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X