ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಆತಂಕ: ಇರಾನ್‌ನಲ್ಲಿ 85,000 ಕೈದಿಗಳ ತಾತ್ಕಾಲಿಕ ಬಿಡುಗಡೆ

|
Google Oneindia Kannada News

ಇರಾನ್, ಮಾರ್ಚ್ 17: ವಿಶ್ವದೆಲ್ಲೆಡೆ ನರಬಲಿ ಪಡೆಯತ್ತಿರುವ ಕೊರೊನಾ ವೈರಸ್‌ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೊರತು, ಅದನ್ನು ತಡೆಯಲು ಏನು ಮಾಡಬೇಕು ಎಂದು ಯಾರಿಗೂ ತಿಳಿಯುತ್ತಿಲ್ಲ. ಜಗತ್ತಿನಾದ್ಯಂತ 7,477ಕ್ಕೂ ಅಧಿಕ ಸಾವು ಸಂಭವಿಸಿದ್ದು, ಇರಾನ್‌ನಲ್ಲಿ ಆತಂಕ ಜಾಸ್ತಿಯಾಗಿದೆ.

ಪ್ರಸ್ತುತ ಇರಾನ್‌ನಲ್ಲಿ ಕೊರೊನಾ ಹರಡುತ್ತಿರುವ ಕಾರಣ, ಜೈಲಿನಲ್ಲಿದ್ದ ಸುಮಾರು 85,000 ಕೈದಿಗಳನ್ನು ತಾತ್ಕಲಿಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಾಂಗದ ವಕ್ತಾರ ಮಂಗಳವಾರ ತಿಳಿಸಿದ್ದಾರೆ.

ದಂಪತಿಯ 'ಅಮರ' ಪ್ರೀತಿ ಕೊಂದ ಕೊರೊನಾ: ಶಾಪವಿಟ್ಟ ನೆಟ್ಟಿಗರುದಂಪತಿಯ 'ಅಮರ' ಪ್ರೀತಿ ಕೊಂದ ಕೊರೊನಾ: ಶಾಪವಿಟ್ಟ ನೆಟ್ಟಿಗರು

''ಸದ್ಯ ಬಿಡುಗಡೆಯಾದವರಲ್ಲಿ ಸುಮಾರು 50% ಜನರು ಭದ್ರತೆಗೆ ಸಂಬಂಧಿಸಿದ ಕೈದಿಗಳು ಹಾಗೂ ರಾಜಕೀಯ ಕೈದಿಗಳು ಸೇರಿದ್ದಾರೆ....ಇನ್ನು ಜೈಲಿನಲ್ಲೂ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ" ಎಂದು ಘೋಲಮ್ಹೋಸೇನ್ ಎಸ್ಮೇಲಿ ಹೇಳಿದ್ದಾರೆ.

Iran Temporarily Released 85000 Prisoners Amid Coronavirus

ಈ ಹಿಂದೆ ಮಾರ್ಚ್ 10 ರಂದು, ಇರಾನ್‌ ಮಾನವ ಹಕ್ಕುಗಳ ಕುರಿತ ವಿಶೇಷ ವರದಿಗಾರರೊಬ್ಬರು, 'ಎಲ್ಲಾ ರಾಜಕೀಯ ಕೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಿ ಮತ್ತು ರೋಗ ಪೀಡಿತ ಜೈಲುಗಳಿಂದ ಮುಕ್ತಗೊಳಿಸಿ' ಎಂದು ಕೇಳಿಕೊಂಡಿದ್ದರು.

ಇರಾನ್‌ನಲ್ಲಿ ಇದುವರೆಗೂ 988ಕ್ಕೂ ಅಧಿಕ ಸಾವು ಸಂಭವಿಸಿದೆ. 16 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ಪತ್ತೆಯಾಗಿದೆ. ಚೀನಾ ಮತ್ತು ಇಟಲಿ ಬಿಟ್ಟರೆ ಇರಾನ್ ದೇಶದಲ್ಲಿ ಅತಿ ಹೆಚ್ಚು ಕೊರೊನಾಗೆ ಬಲಿಯಾಗಿದ್ದಾರೆ.

ಕೊರೊನಾ ಎಫೆಕ್ಟ್: ಬಡ್ಡಿ ರಹಿತ EMI ಆಫರ್ ನೀಡಿದ ಕಾರು ಕಂಪನಿಕೊರೊನಾ ಎಫೆಕ್ಟ್: ಬಡ್ಡಿ ರಹಿತ EMI ಆಫರ್ ನೀಡಿದ ಕಾರು ಕಂಪನಿ

ಸದ್ಯಕ್ಕೆ ಇರಾನ್ ಜೈಲಿನಿಂದ ತಾತ್ಕಾಲಿಕ ಬಿಡುಗಡೆಯಾಗಿರುವ ಕೈದಿಗಳು ಮತ್ತೆ ಯಾವಾಗ ಜೈಲಿಗೆ ವಾಪಸ್ ಆಗ್ತಾರೆ ಎನ್ನುವುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

English summary
Coronavirus crisis: Iran releases 85,000 prisoners to help contain the disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X