ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕನ್ನಡದ ಮೀನುಗಾರರ ಐದು ತಿಂಗಳ ನಂತರ ಬಿಡುಗಡೆ ಮಾಡಿದ ಇರಾನ್‌

|
Google Oneindia Kannada News

ಭಟ್ಕಳ, ಜನವರಿ 09: ಅನಧಿಕೃತವಾಗಿ ಸಾಗರ ಗಡಿ ಪ್ರವೇಶಿಸದರೆಂಬ ಆಪಾದನೆಯಲ್ಲಿ ಆರು ತಿಂಗಳ ಕಾಲ ಹಿಡಿದಿಟ್ಟುಕೊಂಡಿದ್ದ ಭಟ್ಕಳ ಮೂಲದ ಮೀನುಗಾರರನ್ನು ಇರಾನ್ ಸರ್ಕಾರ ಬಿಡುಗಡೆ ಮಾಡಿದೆ.

ತೈಲ ಪೂರೈಕೆ ನಿಲ್ಲಿಸೋಕೆ ಸಾಧ್ಯವಿಲ್ಲ: ಅಮೆರಿಕಕ್ಕೆ ಇರಾನ್ ತಿರುಗೇಟು ತೈಲ ಪೂರೈಕೆ ನಿಲ್ಲಿಸೋಕೆ ಸಾಧ್ಯವಿಲ್ಲ: ಅಮೆರಿಕಕ್ಕೆ ಇರಾನ್ ತಿರುಗೇಟು

ಉತ್ತರ ಕನ್ನಡ ಜಿಲ್ಲೆಯ 15 ಮೀನುಗಾರರು ಮೀನುಹಿಡಿಯುತ್ತಾ ಜುಲೈ 27 ರಂದು ಇರಾನ್ ಸಾಗರಗಡಿ ಪ್ರವೇಶೀಸಿದ್ದರು, ಅವರನ್ನು ಇರಾನ್‌ನ ಟೆಹರೇನ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಹೊಸ ಸ್ನೇಹ ಪರ್ವ; ಅಮೆರಿಕದಿಂದ ಭಾರತಕ್ಕೆ ಬಿಲಿಯನ್ ನಷ್ಟು ತೈಲ ಆಮದುಹೊಸ ಸ್ನೇಹ ಪರ್ವ; ಅಮೆರಿಕದಿಂದ ಭಾರತಕ್ಕೆ ಬಿಲಿಯನ್ ನಷ್ಟು ತೈಲ ಆಮದು

ಉತ್ತರ ಕನ್ನಡದ ಮೀನುಗಾರರನ್ನು ಬಿಡುಗಡೆಗೊಳಿಸಲು ಕೋರುವಂತೆ ಕರ್ನಾಟಕ ಸರ್ಕಾರವು ಕೇಂದ್ರ ವಿದೇಶಾಂಗ ಇಲಾಖೆಗೆ ಪತ್ರ ಬರೆದಿತ್ತು. ಅದರಂತೆ ಕೇಂದ್ರ ಸರ್ಕಾರ ಸಹ ಇರಾನ್‌ ಸರ್ಕಾರದೊಂದಿಗೆ ಮಾತನಾಡಿದ ತರುವಾಯ ನಿನ್ನೆ ಎಲ್ಲ ಮೀನುಗಾರರನ್ನು ಬಿಡುಗಡೆ ಮಾಡುವುದಾಗಿ ಇರಾನ್ ಹೇಳಿದೆ.

Iran released 18 fisherman of Uttar Kannada district

ಉತ್ತರ ಕನ್ನಡದ 15 ಮೀನುಗಾರರು ಮತ್ತು ಮಹಾರಾಷ್ಟ್ರ ರತ್ನಗಿರಿಯ 3 ಮೀನುಗಾರರನ್ನು ಇರಾನ್ ಸರ್ಕಾರ ಹಿಡಿದಿಟ್ಟಿತ್ತು. ಅವರನ್ನು ನಿನ್ನೆ ಬಿಡುಗಡೆ ಮಾಡಿದ್ದು, ಎಲ್ಲರೂ ಬುಧವಾರದಂದು ದುಬೈ ಗೆ ಬೋಟ್‌ನಲ್ಲಿ ತೆರಳಿ ಅಲ್ಲಿಂದ ಭಾರತಕ್ಕೆ ಮರಳಲಿದ್ದಾರೆ.

ನೆರವು ಕೋರಿ ಸುಷ್ಮಾ ಸ್ವರಾಜ್ ಗೆ ಆರ್ ವಿ ದೇಶಪಾಂಡೆ ಪತ್ರ ನೆರವು ಕೋರಿ ಸುಷ್ಮಾ ಸ್ವರಾಜ್ ಗೆ ಆರ್ ವಿ ದೇಶಪಾಂಡೆ ಪತ್ರ

ಇರಾನ್‌ ಜಲಗಡಿಗೆ ಸೇರಿದ ಕ್ವಿಷ್‌ ದ್ವೀಪದ ಬಳಿ ಮೀನುಗಾರರನ್ನು ಬಂಧಿಸಲಾಗಿತ್ತು. ಮೀನುಗಾರರನ್ನು ಬಂಧಿಸಿದ್ದ, ಹಾಗೂ ಅವರ ಸ್ಥಿತಿ-ಗತಿಯ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ವಾಟ್ಸಾಫ್‌ ವಿಡಿಯೋಗಳನ್ನು ಕಳುಹಿಸಲಾಗಿತ್ತು.

English summary
Iran government released 18 fishermen of Uttar Kannad district Karnataka yesterday. Karnataka government and central government requested Iran to release fishermen soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X