• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕವನ್ನು ಇಲ್ಲಿಂದ ಒದ್ದೋಡಿಸುವುದೇ ಅಂತಿಮ ಗುರಿ: ಇರಾನ್

|
Google Oneindia Kannada News

ಟೆಹರಾನ್, ಜನವರಿ 8: ಸುಮಾರು 176 ಪ್ರಯಾಣಿಕರಿದ್ದ ಉಕ್ರೇನ್‌ನ ವಿಮಾನ ಇರಾನ್‌ನಲ್ಲಿ ಅಪಘಾತಕ್ಕೀಡಾಗಿ ಅದರಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ವಿಮಾನ ಅಪಘಾತಕ್ಕೆ ಕಾರಣ ಏನೆಂದು ತಿಳಿಯಲು ನೆರವಾಗುವ ಕಪ್ಪುಪೆಟ್ಟಿಗೆ ದೊರೆತಿದ್ದು, ಆದರೆ ಅದನ್ನು ನೀಡಲು ಇರಾನ್ ನಿರಾಕರಿಸಿದೆ.

ಉಕ್ರೇನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ನ ಬೋಯಿಂಗ್ 737-800 ವಿಮಾನವು ಇರಾನ್‌ ರಾಜಧಾನಿ ಟೆಹರಾನ್‌ನ ಇಮಾಮ್ ಖೋಮೀನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕ್ಯುವ್‌ಗೆ ತೆರಳುತ್ತಿತ್ತು. ಬೆಳಗಿನ ಜಾವ 6.20ರ ವೇಳೆ ವಿಮಾನ ಅಪಘಾತ ಸಂಭವಿಸಿದೆ.

ಮತ್ತೊಮ್ಮೆ ದಾಳಿ ಮಾಡಿದರೆ ಪುಡಿಗಟ್ಟುತ್ತೇವೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆಮತ್ತೊಮ್ಮೆ ದಾಳಿ ಮಾಡಿದರೆ ಪುಡಿಗಟ್ಟುತ್ತೇವೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ವಿಮಾನದ ಎರಡು ಕಪ್ಪುಪೆಟ್ಟಿಗೆಗಳ ಪೈಕಿ ಒಂದು ಪೆಟ್ಟಿಗೆ ಇರಾನ್‌ನ ತನಿಖಾಧಿಕಾರಿಗಳಿಗೆ ದೊರಕಿದೆ. ಆದರೆ ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರದ ಮುಖ್ಯಸ್ಥರು ಅದನ್ನು ಉಕ್ರೇನ್‌ಗೆ ಹಸ್ತಾಂತರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಕಪ್ಪುಪೆಟ್ಟಿಗೆ ದತ್ತಾಂಶ ಸಂಗ್ರಹ

ಕಪ್ಪುಪೆಟ್ಟಿಗೆ ದತ್ತಾಂಶ ಸಂಗ್ರಹ

ಕಪ್ಪುಪೆಟ್ಟಿಗೆಗಳು ವಿಮಾನದ ದತ್ತಾಂಶಗಳು ಹಾಗೂ ಕಾಕ್‌ಪಿಟ್‌ನಲ್ಲಿನ ಆಡಿಯೋಗಳನ್ನು ದಾಖಲಿಸಿಕೊಳ್ಳುತ್ತದೆ. ಇವು ವಿಮಾನ ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ತಿಳಿಯಲು ಮಹತ್ವದ ಮಾಹಿತಿಗಳನ್ನು ನೀಡುತ್ತವೆ. ಇರಾನ್ ಸರ್ಕಾರವು ದತ್ತಾಂಶಗಳನ್ನು ವಿಶ್ಲೇಷಿಸಲು ಕಪ್ಪುಪೆಟ್ಟಿಗೆಯನ್ನು ಎಲ್ಲಿಗೆ ರವಾನಿಸುತ್ತದೆ ಎನ್ನುವುದು ತಮಗೆ ತಿಳಿದಿಲ್ಲ ಎಂದು ನಾಗರಿಕ ವಿಮಾನ ಪ್ರಾಧಿಕಾರದ ಮುಖ್ಯಸ್ಥ ಅಲಿ ಅಬೇದ್ ಜಾದೆಹ್ ಹೇಳಿದ್ದಾರೆ.

ನಮ್ಮ ಸೈನಿಕರು ಸತ್ತಿಲ್ಲ- ಅಮೆರಿಕ

ನಮ್ಮ ಸೈನಿಕರು ಸತ್ತಿಲ್ಲ- ಅಮೆರಿಕ

ಈ ದುರ್ಘಟನೆಗೂ ಕೆಲವು ಗಂಟೆ ಮುನ್ನ ಇರಾನ್‌ನ ಪಡೆಗಳು ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ತನ್ನ ದಾಳಿಯಲ್ಲಿ ಅಮೆರಿಕದ ಕನಿಷ್ಠ 80 ಸೈನಿಕರು ಮೃತಪಟ್ಟಿದ್ದಾರೆ. ಅವರ ಸೇನಾ ಸಾಮಗ್ರಿಗಳು ನಾಶವಾಗಿವೆ ಎಂದು ಇರಾನ್ ಹೇಳಿಕೊಂಡಿದೆ. ಆದರೆ, ತನ್ನ ಯಾವ ಸೈನಿಕರೂ ದಾಳಿಯಲ್ಲಿ ಸತ್ತಿಲ್ಲ ಎಂದು ಅಮೆರಿಕ ಪ್ರತಿಪಾದಿಸಿದೆ.

ಇರಾನ್‌ನಲ್ಲಿ ವಿಮಾನ ಅಪಘಾತ: 180 ಮಂದಿ ಸಾವುಇರಾನ್‌ನಲ್ಲಿ ವಿಮಾನ ಅಪಘಾತ: 180 ಮಂದಿ ಸಾವು

ಅಮೆರಿಕದ ಕೈವಾಡದ ಬಗ್ಗೆ ಶಂಕೆ

ಅಮೆರಿಕದ ಕೈವಾಡದ ಬಗ್ಗೆ ಶಂಕೆ

ಹೆಚ್ಚಿನ ಪ್ರಯಾಣಿಕರು ಇರಾನಿಯನ್ನರೇ ಇದ್ದ ವಿಮಾನದ ಅಪಘಾತದಲ್ಲಿ ಅಮೆರಿಕದ ಕೈವಾಡವಿದೆ ಎಂದು ಅನೇಕರು ಶಂಕೆ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಅಮೆರಿಕ ದಾಳಿ ನಡೆಸಿ ವಿಮಾನವನ್ನು ಹೊಡೆದುರುಳಿಸಿರುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿ 82 ಇರಾನ್ ಪ್ರಜೆಗಳು, 63 ಕೆನಡಾ, 11 ಉಕ್ರೇನ್, 10 ಸ್ವೀಡನ್, 4 ಅಫ್ಘಾನಿಸ್ತಾನ, 3 ಜರ್ಮನಿ ಮತ್ತು ಬ್ರಿಟನ್‌ನ ಪ್ರಜೆಗಳಿದ್ದರು. 1988ರಲ್ಲಿ ಅಮೆರಿಕದ ನೌಕಾಪಡೆ ಇರಾನಿನ ಪ್ರಯಾಣಿಕ ವಿಮಾನವನ್ನು ಉರುಳಿಸಿತ್ತು. ಈ ಘಟನೆಯಲ್ಲಿ 290 ಮಂದಿ ಮೃತಪಟ್ಟಿದ್ದರು. ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಅಮೆರಿಕ ಹೇಳಿಕೊಂಡಿತ್ತು.

ಅಮೆರಿಕಕ್ಕೆ ತಫರಾಕಿ

ಅಮೆರಿಕಕ್ಕೆ ತಫರಾಕಿ

ಅಮೆರಿಕಕ್ಕೆ ಕಳೆದ ರಾತ್ರಿ ಸರಿಯಾದ ತಫರಾಕಿ ನೀಡಿದ್ದೇವೆ. ಆದರೆ ಇಷ್ಟು ಪ್ರಮಾಣದ ಸೇನಾ ಕಾರ್ಯ ಸಾಕಾಗುವುದಿಲ್ಲ. ಈ ಪ್ರದೇಶದಿಂದ ಅಮೆರಿಕದ ಅಸ್ತಿತ್ವವನ್ನು ಇಲ್ಲವಾಗಿಸುವುದು ನಮಗೆ ಮುಖ್ಯ ಸಂಗತಿಯಾಗಿದೆ ಎಂದು ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲ ಅಲಿ ಖಮೇನಿ ಹೇಳಿದ್ದಾರೆ.

ಇರಾನ್‌ಗೆ ತೆರಳದಂತೆ ಭಾರತದ ವಿದೇಶಾಂಗ ಸಚಿವಾಲಯ ಸಲಹೆಇರಾನ್‌ಗೆ ತೆರಳದಂತೆ ಭಾರತದ ವಿದೇಶಾಂಗ ಸಚಿವಾಲಯ ಸಲಹೆ

ಅಮೆರಿಕ ಪಡೆ ಒದ್ದೋಡಿಸುವುದೇ ಕೊನೆಯ ಉತ್ತರ

ಅಮೆರಿಕ ಪಡೆ ಒದ್ದೋಡಿಸುವುದೇ ಕೊನೆಯ ಉತ್ತರ

ಮಧ್ಯಪ್ರಾಚ್ಯದಿಂದ ಅಮೆರಿಕದ ಪಡೆಗಳನ್ನು ಕಿತ್ತು ಹೊರಗೆ ಎಸೆಯುವುದೇ ಜನರಲ್ ಖಾಸಿಂ ಸೋಲೆಮನಿ ಅವರ ಹತ್ಯೆಗೆ ನೀಡುವ ಅಂತಿಮ ಉತ್ತರವಾಗಲಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಹೇಳಿದ್ದಾರೆ. ಐಸಿಸ್, ಅಲ್ ನುಸ್ರಹ್, ಅಲ್ ಕೈದಾ ಸೇರಿದಂತೆ ಉಗ್ರರ ವಿರುದ್ಧ ಸೋಲೆಮನಿ ಹೀರೋನಂತೆ ಹೋರಾಡಿದ್ದರು. ಅವರ ಯುದ್ಧ ಉಗ್ರರ ವಿರುದ್ಧವಾಗಿರದೇ ಹೋಗಿದ್ದರೆ ಯುರೋಪ್ ರಾಜಧಾನಿಗಳು ಈ ವೇಳೆಗೆ ತೀವ್ರ ಅಪಾಯದಲ್ಲಿ ಇರುತ್ತಿದ್ದವು. ಈ ಪ್ರದೇಶದಿಂದ ಅಮೆರಿಕದ ಪಡೆಗಳನ್ನು ಒದ್ದೋಡಿಸುವುದೇ ಅವರ ಸಾವಿಗೆ ನಮ್ಮ ಅಂತಿಮ ಉತ್ತರ ಎಂದಿದ್ದಾರೆ.

ಯುದ್ಧ ಬೇಡ ಎಂದ ಯುರೋಪ್

ಯುದ್ಧ ಬೇಡ ಎಂದ ಯುರೋಪ್

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಕಳವಳಕಾರಿಯಾಗಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗದಂತೆ ತಡೆಯಲು ಯುರೋಪ್ ಮನವಿ ಮಾಡಿದೆ. ಉಭಯ ದೇಶಗಳು ಪ್ರತೀಕಾರಕ್ಕಾಗಿ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವುದನ್ನು ನಿಲ್ಲಿಸಿ, ಮಾತುಕತೆಗೆ ಅವಕಾಶ ನೀಡಬೇಕು. ಮಾತುಕತೆ ನಡೆಯಲು ನಾವು ಸಾಕಷ್ಟು ಪ್ರಯತ್ನ ನಡೆಸಿದ್ದೇವೆ. ಮುಂದೆಯೂ ಪ್ರಯತ್ನ ಮಾಡಲಿದ್ದೇವೆ ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ತಿಳಿಸಿದ್ದಾರೆ.

English summary
Iran has refused to hand over the crashed Ukranian Boeing plane's black box.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X