ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬಾರಿ ದುನಿಯಾದಲ್ಲಿ ಭಾರತಕ್ಕೆ ಬಂಪರ್ ಆಫರ್ ನೀಡಿರುವ ರಾಷ್ಟ್ರ ಯಾವುದು?

|
Google Oneindia Kannada News

ನವದೆಹಲಿ, ಮಾರ್ಚ್ 18: "ಭಾರತವು ಎಷ್ಟೇ ಎಣ್ಣೆ ಕೇಳಿದರೂ ಸರಬರಾಜು ಮಾಡುವುದಕ್ಕೆ ನಾವು ರೆಡಿ ಇದ್ದೀವಿ. ನಮ್ಮ ಮಧ್ಯೆ ಮೂರನೇ ವ್ಯಕ್ತಿಯ ಪ್ರವೇಶಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ," ಎಂದು ಇರಾನ್ ಹೇಳಿಕೊಂಡಿದೆ.

ಇರಾನ್ ನೀಡಿರುವ ಇದೊಂದು ಭರವಸೆಯು ಭಾರತಕ್ಕೆ ಹೊಸ ತಲೆನೋವನ್ನು ತಂದಿಟ್ಟಿದೆ. ರಷ್ಯಾದಿಂದ ಎಣ್ಣೆ ಖರೀದಿ ಮಾಡಬೇಕೋ ಬೇಡವೋ ಎನ್ನುವ ಕುರಿತು ಚಿಂತನೆ ನಡೆಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಓದುಗರಿಗೆ ಯಾವುದೇ ಕಫ್ಯೂಷನ್ಸ್ ಬೇಡ. ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಗೆ ಅಗತ್ಯವಾಗಿರುವ ಕಚ್ಚಾತೈಲದ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಆಮದು ಮತ್ತು ರಫ್ತಿನ ಕುರಿತು ಸಾಕಷ್ಟು ಚರ್ಚೆ ಆಗುತ್ತಿದೆ. ರಷ್ಯಾದ ಕಚ್ಚಾತೈಲವನ್ನು ಖರೀದಿಸುವುದಕ್ಕೆ ಅತಿದೊಡ್ಡ ರಾಷ್ಟ್ರಗಳು ನಿರ್ಬಂಧ ಹೇರಿವೆ. ತನ್ನಲ್ಲೇ ಮಾರಟವಾಗದೇ ಉಳಿದಿರುವ ಕಚ್ಚಾತೈಲವನ್ನು ರಷ್ಯಾವು ಭಾರತಕ್ಕೆ ವಿನಾಯಿತಿ ದರದಲ್ಲಿ ನೀಡುವುದಾಗಿ ಹೇಳುತ್ತಿದೆ. ಇದರ ಮಧ್ಯೆ ನೀವು ಎಷ್ಟು ಬೇಕು ಎನ್ನುತ್ತೀರೋ ಅಷ್ಟು ಕಚ್ಚಾತೈಲವನ್ನು ನಾವು ನೀಡುತ್ತೇವೆ ಎಂದು ಇರಾನ್ ಮುಂದೆ ಬಂದಿದೆ. ಹಾಗಿದ್ದರೆ ಭಾರತಕ್ಕೆ ಕಚ್ಚಾತೈಲ ಒದಗಿಸುವುದರ ಬಗ್ಗೆ ಇರಾನ್ ಹೇಳಿದ್ದೇನು?, ರಷ್ಯಾ ಹಾಗೂ ಇರಾನ್ ದೇಶಗಳ ಪೈಕಿ ಯಾವ ರಾಷ್ಟ್ರದಿಂದ ಕಚ್ಚಾತೈಲ ಖರೀದಿಸುವುದು ಭಾರತಕ್ಕೆ ಪ್ರಯೋಜನಕಾರಿ ಆಗುತ್ತದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ರಷ್ಯಾದ ಕಚ್ಚಾತೈಲದಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ!?ರಷ್ಯಾದ ಕಚ್ಚಾತೈಲದಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ!?

ಭಾರತಕ್ಕೆ ಇಂಧನ ಪೂರೈಸಲು ಸಿದ್ಧ ಎಂದ ಇರಾನ್

ಭಾರತಕ್ಕೆ ಇಂಧನ ಪೂರೈಸಲು ಸಿದ್ಧ ಎಂದ ಇರಾನ್

ಜಾಗತಿಕ ಮಟ್ಟದಲ್ಲಿ ಒಪೆಕ್ ಸದಸ್ಯ ರಾಷ್ಟ್ರಗಳ ಮೇಲಿನ ನಿರ್ಬಂಧವನ್ನು ತೆಗೆದು ಹಾಕುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಓಪೆಕ್ ರಾಷ್ಟ್ರಗಳ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿದರೆ, ಭಾರತಕ್ಕೆ ಅಗತ್ಯವಿರುವಷ್ಟು ಕಚ್ಚಾತೈಲವನ್ನು ಕಡಿಮೆ ಬೆಲೆಯಲ್ಲಿ ಸರಬರಾಜು ಮಾಡುವುದಕ್ಕೆ ಇರಾನ್ ಸಿದ್ಧವಿದೆ ಎಂದು ರಾಯಭಾರಿ ತಿಳಿಸಿದ್ದಾರೆ.

ಒಪೆಕ್ ಸದಸ್ಯರ ಪಟ್ಟಿಯಲ್ಲಿರುವ ದೇಶಗಳು?

ಒಪೆಕ್ ಸದಸ್ಯರ ಪಟ್ಟಿಯಲ್ಲಿರುವ ದೇಶಗಳು?

ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಕಚ್ಚಾತೈಲವನ್ನು ಉತ್ಪಾದಿಸುವ ಮತ್ತು ವಿವಿಧ ರಾಷ್ಟ್ರಗಳಿಗೆ ಕಚ್ಚಾತೈಲವನ್ನು ಸರಬರಾಜು ಮಾಡುವ ಸದಸ್ಯ ರಾಷ್ಟ್ರಗಳು ಸೇರಿಕೊಂಡು ಈ ಒಪೆಕ್ ಕೂಟವನ್ನು ರಚಿಸಿಕೊಂಡಿವೆ. ಈ ಓಪೆಕ್ ಕೂಟದಲ್ಲಿ ಅಲ್ಜೀರಿಯಾ, ಅಂಗೋಲಾ, ಕಾಂಗೋ, ಈಕ್ವೆಡಾರ್, ಈಕ್ವಟೋರಿಯಲ್ ಗಿನಿಯಾ, ಗ್ಯಾಬೊನ್, ಐಆರ್ ಇರಾನ್, ಇರಾಕ್, ಕುವೈತ್, ಲಿಬಿಯಾ, ನೈಜೀರಿಯಾ, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ವೆನೆಜುವೆಲಾ ಸದಸ್ಯ ರಾಷ್ಟ್ರಗಳಾಗಿವೆ.

ಭಾರತಕ್ಕೆ ಅತಿಹೆಚ್ಚು ಕಚ್ಚಾತೈಲ ಕಳುಹಿಸುವ 2ನೇ ರಾಷ್ಟ್ರ ಇರಾನ್

ಭಾರತಕ್ಕೆ ಅತಿಹೆಚ್ಚು ಕಚ್ಚಾತೈಲ ಕಳುಹಿಸುವ 2ನೇ ರಾಷ್ಟ್ರ ಇರಾನ್

ಜಗತ್ತಿನಲ್ಲಿ ಅತಿಹೆಚ್ಚು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಭಾರತದಲ್ಲಿ ಬಳಕೆ ಆಗುವ ಒಟ್ಟು ಕಚ್ಚಾತೈಲದ ಪೈಕಿ ಶೇ.80ರಷ್ಟು ಕಚ್ಚಾತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಭಾರತಕ್ಕೆ ಅತಿಹೆಚ್ಚು ಕಚ್ಚಾತೈಲವನ್ನು ಮಾರಾಟ ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಇರಾನ್ ಎರಡನೇ ಸ್ಥಾನದಲ್ಲಿತ್ತು. ಆದರೆ ಯುಎಸ್ ಮಾಜಿ ಅಧ್ಯಕ್ಷ ಡೊನೊಲ್ಡ್ ಟ್ರಂಪ್ ಕಾಲದಲ್ಲಿ ಇರಾನ್ ಜೊತೆಗಿನ ಪರಮಾಣು ಒಪ್ಪಂದವನ್ನು ಹಿಂತೆಗೆದುಕೊಳ್ಳಲಾಗಿದ್ದು, ಅದರ ಮೇಲೆ ಮರು ನಿರ್ಬಂಧವನ್ನು ವಿಧಿಸಲಾಗಿತ್ತು. ಅಂದಿನಿಂದ ಭಾರತಕ್ಕೆ ಕಚ್ಚಾತೈಲದ ಅಭಾವ ಎದುರಾಗಿತ್ತು.

ಭಾರತದೊಂದಿಗೆ ನೇರ ವಹಿವಾಟಿಗೆ ಇರಾನ್ ಆದ್ಯತೆ

ಭಾರತದೊಂದಿಗೆ ನೇರ ವಹಿವಾಟಿಗೆ ಇರಾನ್ ಆದ್ಯತೆ

"ರೂಪಾಯಿ-ರಿಯಾಲ್ ವ್ಯಾಪಾರ ಕಾರ್ಯವಿಧಾನವು ಎರಡೂ ದೇಶಗಳು ಪರಸ್ಪರ ನೇರವಾಗಿ ವ್ಯವಹರಿಸಲು ಸಹಕಾರಿ ಆಗುತ್ತದೆ. ಇಲ್ಲಿ ಮೂರನೇ ವ್ಯಕ್ತಿಯ ಅಥವಾ ಮಧ್ಯವರ್ತಿ ವೆಚ್ಚಗಳನ್ನು ತಪ್ಪಿಸಲು ಸಹಾಯವಾಗುತ್ತದೆ," ಎಂದು ಇರಾನ್ ರಾಯಭಾರಿ ಅಲಿ ಚೆಗೆನಿ ಅವರು ಭಾರತೀಯ ಸೌಲಭ್ಯ ಸಂಸ್ಥೆ MVIRDC ವಿಶ್ವ ವ್ಯಾಪಾರ ಕೇಂದ್ರದಿಂದ ಉಲ್ಲೇಖಿಸಿದ್ದಾರೆ.

ಭಾರತ ಮತ್ತು ಇರಾನ್ ವ್ಯಾಪಾರ ಇತ್ಯರ್ಥಗೊಳಿಸಲು ವಿನಿಮಯದಂತಹ ಕಾರ್ಯವಿಧಾನವನ್ನು ಅನುಸರಿಸಲಾಗುತ್ತಿತ್ತು. ಇರಾನಿಯನ್ ಕಂಪನಿಗಳಿಂದ ಕಚ್ಚಾತೈಲವನ್ನು ಖರೀದಿಸಿದ ಭಾರತೀಯ ಕಂಪನಿಗಳು ಸ್ಥಳೀಯ ಬ್ಯಾಂಕ್ ಮೂಲಕ ರೂಪಾಯಿ ಮೌಲ್ಯದಲ್ಲಿ ಹಣವನ್ನು ಪಾವತಿ ಮಾಡುತ್ತಿದ್ದವು. ತದನಂತರ ಅದನ್ನು ಬ್ಯಾಂಕ್ ಮೂಲಕ ಇರಾನಿಯನ್ ಕಂಪನಿಗಳಿಗೆ ಪಾವತಿ ಮಾಡಲಾಗುತ್ತಿತ್ತು.

ಭಾರತ-ಇರಾನ್ ವ್ಯಾಪಾರದಲ್ಲಿ 17 ಬಿಲಿಯನ್ ಡಾಲರ್ ಕುಸಿತ

ಭಾರತ-ಇರಾನ್ ವ್ಯಾಪಾರದಲ್ಲಿ 17 ಬಿಲಿಯನ್ ಡಾಲರ್ ಕುಸಿತ

ಇರಾನ್ ಮೇಲೆ ಹಾಕಿದ ನಿರ್ಬಂಧಗಳಿಂದಾಗಿ ಭಾರತ-ಇರಾನ್ ನಡುವಿ ವ್ಯಾಪಾರದಲ್ಲಿ ಭಾರಿ ಕುಸಿತ ಕಂಡು ಬಂದಿತು. 2019ರ ಮಾರ್ಚ್ ಆರ್ಥಿಕ ವರ್ಷದಲ್ಲಿ 17 ಶತಕೋಟಿ ಡಾಲರ್ ನಿಂದ 2 ಶತಕೋಟಿ ಡಾಲರ್ ಆಸುಪಾಸಿಗೆ ಬಂದು ನಿಂತಿದೆ. ಇರಾನ್ ಮತ್ತು ಭಾರತವು ನೇರ ವಹಿವಾಟು ಕಾರ್ಯವಿಧಾನವನ್ನು ಅಳವಡಿಸಿಕೊಂಡರೆ ವಾರ್ಷಿಕ 30 ಶತಕೋಟಿ ಡಾಲರ್ ವಹಿವಾಟು ನಡೆಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಚೆಗೆನಿ ಹೇಳಿದ್ದಾರೆ.

ಭಾರತ ರಷ್ಯಾದ ಕಚ್ಚಾತೈಲ ಆಮದು ಮಾಡಿಕೊಂಡರೇನು ಲಾಭ?

ಭಾರತ ರಷ್ಯಾದ ಕಚ್ಚಾತೈಲ ಆಮದು ಮಾಡಿಕೊಂಡರೇನು ಲಾಭ?

ರಷ್ಯಾದಿಂದ ಭಾರತವು ಶೇ.2 ರಿಂದ ಶೇ.3ರಷ್ಟು ಕಚ್ಚಾತೈಲವನ್ನು ಮಾತ್ರ ಆಮದು ಮಾಡಿಕೊಳ್ಳುತ್ತದೆ. ಉಳಿದಂತೆ ಅರಬ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಇತ್ತೀಚಿಗೆ ಅದು ಭಾರತಕ್ಕೆ ದುಬಾರಿ ಆಗುತ್ತಿದೆ. ಕಳೆದ ಒಂದು ವರ್ಷದಲ್ಲಿ ದೇಶದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಶೇ.40ರಷ್ಟು ಏರಿಕೆ ಆಗಿದೆ. ಇದನ್ನು ಮನಗಂಡಿರುವ ರಷ್ಯಾ ಇದೀಗ ಕಡಿಮೆ ಬೆಲೆಗೆ ಕಚ್ಚಾತೈಲವನ್ನು ನೀಡುವುದಾಗಿ ಹೇಳಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮೂಲಗಳ ಪ್ರಕಾರ, ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸುವುದು ಭಾರತಕ್ಕೆ ಪ್ರಯೋಜನಕಾರಿ ಆಗಿರುತ್ತದೆ. ಏಕೆಂದರೆ ಒಂದು ಬ್ಯಾರೆಲ್‌ಗೆ 20 ರಿಂದ 25 ಡಾಲರ್ ಹಣ ಉಳಿತಾಯವಾಗಲಿದೆ. ಒಂದು ಬ್ಯಾರೆಲ್‌ಗೆ 140 ಡಾಲರ್ ಇದ್ದರೆ, ಅದನ್ನು ಭಾರತಕ್ಕೆ ಕೇವಲ 115 ರಿಂದ 120 ಡಾಲರ್ ಮೊತ್ತಕ್ಕೆ ಸಿಗಲಿದೆ.

English summary
Iran is ready to meet India's energy security needs, its ambassador to India was quoted as saying as negotiations continue between the world powers and Tehran on the lifting of sanctions against the OPEC-member.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X