• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇರಾನ್ ನೂತನ ಅಧ್ಯಕ್ಷ ಇಬ್ರಾಹಿಂ ರೈಸಿಗೆ ಪ್ರಧಾನಿ ಮೋದಿ ಶುಭಾಶಯ

|
Google Oneindia Kannada News

ನವದೆಹಲಿ, ಜೂನ್ 20: ಇರಾನ್ ಇಸ್ಲಾಮಿಕ್ ಗಣರಾಜ್ಯದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಇಬ್ರಾಹಿಂ ರೈಸಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇರಾನ್ ನೂತನ ಅಧ್ಯಕ್ಷರಿಗೆ ತಮ್ಮ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. "ಇರಾನ್ ಇಸ್ಲಾಮಿಕ್ ಗಣರಾಜ್ಯದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆ ಯಾಗಿರುವ ಗೌರವಾನ್ವಿತ ಇಬ್ರಾಹಿಂ ರೈಸಿರಿಗೆ ಅಭಿನಂದನೆಗಳು. ಭಾರತ ಮತ್ತು ಇರಾನ್ ನಡುವಿನ ಆತ್ಮೀಯ ಸಂಬಂಧ ಇನ್ನಷ್ಟು ಬಲವರ್ಧನೆಗೆ ಅವರ ಜೊತೆ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ," ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಚುನಾವಣೆ ಹೊತ್ತಲ್ಲೇ ಬಾಂಬ್‌ಗಳ ಸುರಿಮಳೆ, ಇದು ಯಾರ ಕೈವಾಡ ಗೊತ್ತಾ?ಚುನಾವಣೆ ಹೊತ್ತಲ್ಲೇ ಬಾಂಬ್‌ಗಳ ಸುರಿಮಳೆ, ಇದು ಯಾರ ಕೈವಾಡ ಗೊತ್ತಾ?

ಇತ್ತೀಚಿಗೆ ನಡೆದ ಇರಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಇಬ್ರಾಹಿಂ ರೈಸಿ ಸೇರಿದಂತೆ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 28.6 ಮಿಲಿಯನ್ ಮತಗಳ ಪೈಕಿ ಇಬ್ರಾಹಿಂ ರೈಸಿ 17.8 ಮಿಲಿಯನ್ ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಹಾಲಿ ಅಧ್ಯಕ್ಷ ಹಸನ್ ರೂಹಾನಿ ಅವರು ಸತತ ಮೂರನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದನ್ನು ಅಲ್ಲಿನ ಸಂವಿಧಾನ ನಿರ್ಬಂಧಿಸಿದೆ. ಪ್ರಸ್ತುತ ದಿಗ್ವಿಜಯ ಸಾಧಿಸಿರುವ ಇಬ್ರಾಹಿಂ ರೈಸಿ ಆಗಸ್ಟ್ ನಲ್ಲಿ ಇರಾನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಇರಾನ್ ನೂತನ ಅಧ್ಯಕ್ಷರಿಗೆ ರಾಷ್ಟ್ರಪತಿ ಶುಭಾಶಯ:


"ನಿಮ್ಮ ನಾಯಕತ್ವದಲ್ಲಿ ನಮ್ಮ ನಿಕಟ ಮತ್ತು ಬೆಚ್ಚಗಿನ ದ್ವಿಪಕ್ಷೀಯ ಸಂಬಂಧಗಳು ಬೆಳೆಯುತ್ತಲೇ ಇರುತ್ತವೆ ಎಂದು ನನಗೆ ವಿಶ್ವಾಸವಿದೆ "ಎಂದು ಇರಾನ್ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿಯನ್ನು ಆಯ್ಕೆ ಮಾಡುವ ಕುರಿತು ಅಧ್ಯಕ್ಷ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ

English summary
Iran President Election: PM Narendra Modi Congratulate To Ebrahim Raisi For Excellency Victory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X