ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ-ಇರಾನ್ ನಡುವೆ ಉರಿಯುವ ಬೆಂಕಿಗೆ ಕಮಾಂಡರ್ ತುಪ್ಪ?

|
Google Oneindia Kannada News

ತೆಹ್ರಾನ್, ಜನವರಿ.09: ಅಮೆರಿಕಾ ಇರಾನ್ ನಡುವೆ ಯುದ್ಧದ ಕಾರ್ಮೋಡ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಇದರ ಮಧ್ಯೆ ಇರಾನ್ ಕಮಾಂಡರ್ ನೀಡಿರುವ ಒಂದೇ ಒಂದು ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದೆ.

ವಿಶ್ವದ ದೊಡ್ಡಣ್ಣ ಅಮೆರಿಕಾಗೆ ಇರಾನ್ ಮತ್ತೊಮ್ಮೆ ಸೆಡ್ಡು ಹೊಡೆಯುವ ದುಸ್ಸಾಹಸಕ್ಕೆ ಕೈ ಹಾಕಿದೆ. ಬುಧವಾರ ಇರಾಕ್ ನಲ್ಲಿರುವ ಅಮೆರಿಕಾದ ವಾಯುನೆಲೆ ಮೇಲೆ ದಾಳಿ ನಡೆಸಿದ್ದು ಹಳೆಯ ವಿಚಾರ. ಅದಕ್ಕೆ ಅಮೆರಿಕಾ ಪ್ರತಿದಾಳಿ ನಡೆಸಿದ್ದರೆ ಕಥೆ ಬೇರೆಯೇ ಆಗುತ್ತಿತ್ತು ಎನ್ನುವ ಧಾಟಿಯಲ್ಲಿ ಇರಾನ್ ನ ಜನರಲ್ ಕಮಾಂಡರ್ ಹಜಿಜದೆಹಾ ಮಾತನಾಡಿದ್ದಾರೆ.

ಇರಾನ್ ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಟ್ರಂಪ್ಇರಾನ್ ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಟ್ರಂಪ್

ಜನವರಿ.08ರಂದು ಇರಾನ್ ನಡೆಸಿದ ದಾಳಿಯು ಕೇವಲ ಪ್ರತೀಕಾರದ ಸಂಕೇತವಾಗಿತ್ತಷ್ಟೇ. ಆ ದಾಳಿ ಮೂಲಕ ಅಮೆರಿಕದ ಸೈನಿಕರನ್ನು ಹತ್ಯೆಗಯ್ಯುವ ಉದ್ದೇಶವನ್ನು ಹೊಂದಿರಲಿಲ್ಲ. ಒಂದು ವೇಳೆ ಅಮೆರಿಕಾ ಪ್ರತಿದಾಳಿ ನಡೆಸಿದ್ದರೆ, ಇರಾನ್ ಕೂಡಾ ಎಲ್ಲದಕ್ಕೂ ಸಿದ್ಧವಾಗಿತ್ತು ಎಂದು ಹೇಳಿಕೆ ನೀಡಿರುವುದಾಗಿ ಪಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

"ಎಲ್ಲದಕ್ಕೂ ಇರಾನ್ ಸೇನಾ ಪಡೆಯು ಸಿದ್ಧವಾಗಿತ್ತು"

ಅಮೆರಿಕಾ ವಾಯುನೆಲೆಗಳ ಮೇಲೆ ದಾಳಿ ನಡೆಸುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಗಳಿದ್ದವು. ಪರಸ್ಪರ ಮೂರರಿಂದ ಆರು ದಿನಗಳ ಕಾಲ ಎರಡು ರಾಷ್ಟ್ರಗಳ ನಡುವೆ ಪರಸ್ಪರ ದಾಳಿ ನಡೆಯುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಅದಕ್ಕಾಗಿ ಇರಾನ್ ಕೂಡಾ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿತ್ತು ಎಂದು ಹಜಿಜದೆಹಾ ಹೇಳಿಕೆ ನೀಡಿದ್ದಾರೆ ಎಂದು ವರದಿ ಆಗಿದೆ.

"ಯುದ್ಧ ಪರಿಸ್ಥಿತಿ ನಿಭಾಯಿಸಲು ಸಾವಿರಾರು ಕ್ಷಿಪಣಿಗಳು ಸಿದ್ಧ"

ಒಂದು ವೇಳೆ ಅಮೆರಿಕಾ ಪ್ರತೀಕಾರವಾಗಿ ಇರಾನ್ ಮೇಲೆ ದಾಳಿ ನಡೆಸಿದ್ದರೆ, ನಾವು ಎಲ್ಲದಕ್ಕೂ ಅಣಿಯಾಗಿದ್ದವೆ. ತುರ್ತು ಸಂದರ್ಭದಲ್ಲಿ ಬಳಕೆ ಮಾಡುವುದಕ್ಕಾಗಿ ಸಾವಿರಾರು ಕ್ಷಿಪಣಿಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೆವು. ಅಮೆರಿಕಾ ವಿರುದ್ಧ ಪ್ರತಿದಾಳಿ ನಡೆಸಲು ಇರಾನ್ ಕೂಡಾ ಸಮರ್ಥವಾಗಿದೆ ಎಂದು ಹಜಿಜದೆಹಾ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Image Source: Plannet Labs /middlebury Institute

ಉಕ್ರೇನ್ ವಿಮಾನ ಅಪಘಾತ ಪ್ರಕರಣಕ್ಕೆ ಹೊಸ ತಿರುವು: ಕ್ಷಿಪಣಿ ದಾಳಿಯ ಬಗ್ಗೆ ಶಂಕೆಉಕ್ರೇನ್ ವಿಮಾನ ಅಪಘಾತ ಪ್ರಕರಣಕ್ಕೆ ಹೊಸ ತಿರುವು: ಕ್ಷಿಪಣಿ ದಾಳಿಯ ಬಗ್ಗೆ ಶಂಕೆ

"ಪ್ರತಿಕಾರದ ವಿಚಾರಕ್ಕೆ ಬಂದೆರೆ ಪರಿಸ್ಥಿತಿ ಬೇರೆ ಆಗುತ್ತಿತ್ತು"

ಇದಿಷ್ಟೇ ಅಲ್ಲ, ಇರಾನ್ ನ ಸರ್ವೋಚ್ಛ ನಾಯಕ ಅಲಿ ಖಮೇನಿಯಾ ಕೂಡಾ ಅಮೆರಿಕಾ ವಿರುದ್ಧ ಹರಿಹಾಯ್ದಿದ್ದಾರೆ. ಖಾಸಿಂ ಸೋಲೆಮಾನಿ ಹತ್ಯೆಗೈದ ಅಮೆರಿಕಾದ ಮುಖದ ಮೇಲೆ ಹೊಡೆಯುವ ಉದ್ದೇಶದಿಂದ ಇರಾನ್ ದಾಳಿ ನಡೆಸಿದೆ ಅಷ್ಟೇ. ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬ ಉದ್ದೇಶವನ್ನು ಹೊಂದಿದ್ದರೆ ಕಥೆ ಬೇರೆಯೇ ಆಗುತ್ತಿತ್ತು ಎಂದು ಖಮೇನಿಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಇರಾನ್ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದ ಅಮೆರಿಕಾ ಅಧ್ಯಕ್ಷ

ಇರಾನ್ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದ ಅಮೆರಿಕಾ ಅಧ್ಯಕ್ಷ

ಇರಾನ್ ದಾಳಿ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದರು. ತಾವು ಅಧ್ಯಕ್ಷರಾಗಿರುವ ತನಕ ಇರಾನ್ ಗೆ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದರು. ಅಷ್ಟೇ ಅಲ್ಲದೇ, ಅಮೆರಿಕದ ಸೇನಾಪಡೆಯು ಮೊದಲಿಗಿಂತಲೂ ಈಗ ಬಲಿಷ್ಠವಾಗಿದೆ. ದಾಳಿಗೆ ಮುಂದಾಗುವ ಎದುರಾಳಿಯನ್ನು ಎದುರಿಸುವ ಪರಿ ನಮಗೆ ತಿಳಿದಿದೆ. ಇರಾನ್ ವಿರುದ್ಧ ಹೋರಾಟಕ್ಕೆ ಇದು ಸಕಾಲ ಎನ್ನುವ ಮೂಲಕ ಪರೋಕ್ಷವಾಗಿ ಎಚ್ಚರಿಕೆ ಸಂದೇಶವನ್ನು ಟ್ರಂಪ್ ರವಾನಿಸಿದರು.

English summary
"Iran Planned The More Strikes On United States". Iran General Commander Hajizadeh Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X