ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ ತಲೆಗೆ 576 ಕೋಟಿ ರು ಸುಪಾರಿ ಕೊಟ್ಟ ಇರಾನ್

|
Google Oneindia Kannada News

ತೆಹರಾನ್, ಜನವರಿ 06: ಇರಾನ್ನಿನ ಪ್ರಬಲ ಸೇನಾಧಿಕಾರಿ ಖಾಸಿಂ ಸೊಲೇಮಾನಿ ಹತ್ಯೆ ಬಳಿಕ ಅಮೆರಿಕ ಮೇಲೆ ಪ್ರತಿ ದಾಳಿಗೆ ಸಂಚು ರೂಪಿಸುತ್ತಿರುವ ಇರಾನ್, ಈಗ ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ. ಸೈಬರ್ ದಾಳಿ, ಯುಎಸ್ ಕಚೇರಿಗಳ ಮೇಲೆ ದಾಳಿ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಲೆ ತೆಗೆಯುವವರಿಗೆ ಸುಪಾರಿ ಮೊತ್ತವನ್ನು ಪ್ರಕಟಿಸಿದೆ.

ಮಿರರ್ ಯುಕೆ ವರದಿ ಪ್ರಕಾರ, ಯುಎಸ್ ಅಧ್ಯಕ್ಷ ಟ್ರಂಪ್ ತಲೆ ಉರುಳಿಸುವ ವ್ಯಕ್ತಿಗೆ 80 ಮಿಲಿಯನ್ ಡಾಲರ್ ನೀಡುವುದಾಗಿ ಇರಾನ್ ಘೋಷಿಸಿದೆ. ಇರಾನ್ನಿನ ಪ್ರತಿ ನಾಗರಿಕರಿಂದ 1 ಯುಎಸ್ ಡಾಲರ್ ನಂತೆ ಲೆಕ್ಕ ಹಾಕಿದರೆ 80 ಯುಎಸ್ ಮಿಲಿಯನ್ ಡಾಲರ್ (ಸುಮಾರು 576 ಕೋಟಿ ರು) ಬಹುಮಾನ ಮೊತ್ತ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯುಎಸ್ -ಇರಾನ್ ಸಂಘರ್ಷ;ಕಚ್ಚಾತೈಲ ಬೆಲೆ ಏರಿಕೆ, ಇಂಧನ ದರ ಹೆಚ್ಚಳಯುಎಸ್ -ಇರಾನ್ ಸಂಘರ್ಷ;ಕಚ್ಚಾತೈಲ ಬೆಲೆ ಏರಿಕೆ, ಇಂಧನ ದರ ಹೆಚ್ಚಳ

ಇರಾನ್ನಿನ 52 ಪ್ರಮುಖ ತಾಣಗಳ ಮೇಲೆ ಅಮೆರಿಕ ಗುರಿ ಹೊಂದಿದೆ. ಅಮೆರಿಕದ ನಾಗರಿಕರ ಮೇಲೆ ಇರಾನ್ ದಾಳಿ ನಡೆಸಿದರೆ, ಮರುಕ್ಷಣವೇ ದಾಳಿ ನಡೆಸಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ.

ಯುಎಸ್ ವೆಬ್ ಸೈಟ್ ಹ್ಯಾಕ್, ರಾಯಭಾರ ಕಚೇರಿ ಮೇಲೆ ದಾಳಿ ಯುಎಸ್ ವೆಬ್ ಸೈಟ್ ಹ್ಯಾಕ್, ರಾಯಭಾರ ಕಚೇರಿ ಮೇಲೆ ದಾಳಿ

ನಾವು ಅಮೆರಿಕದ ಶಕ್ತಿ ಕೇಂದ್ರ ಶ್ವೇತಭವನದ ಮೇಲೆ ದಾಳಿ ಮಾಡಬಹುದು. ಅವರಿಗೆ ಅವರ ನೆಲದಲ್ಲೇ ಉತ್ತರ ನೀಡಬಹುದು ಎಂದು ಇರಾನಿನ ರಾಜಕೀಯ ಮುಖಂಡ ಅಬೊಲ್ ಫಾಜಿ ಅಬೊತೊರಾಬಿ ಪ್ರತಿಕ್ರಿಯಿಸಿದ್ದರು.

ಇರಾನ್ ವಿದೇಶಾಂಗ ಸಚಿವ ಜಾವೇದ್ ಝಾರಿಫ್

ಇರಾನ್ ವಿದೇಶಾಂಗ ಸಚಿವ ಜಾವೇದ್ ಝಾರಿಫ್

ಸೋಲೆಮನಿ ನಿಧನದ ಸುದ್ದಿ ದೃಢಪಡುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಮೆರಿಕದ ಧ್ವಜದ ಚಿತ್ರವನ್ನು ಪ್ರಕಟಿಸಿದ್ದರು.

'ಅಮೆರಿಕದ ಅಂತಾರಾಷ್ಟ್ರೀಯ ಭಯೋತ್ಪಾದನೆ ಹಾಗೂ ದಾಯೆಶ್ (ಐಸಿಸ್), ಅಲ್ ನುಸ್ರಾಹ್, ಅಲ್ ಕೈದಾ ಮುಂತಾದವುಗಳ ವಿರುದ್ಧ ಹೋರಾಡುತ್ತಿದ್ದ ಜನರಲ್ ಸೋಲೆಮನಿ ಅವರನ್ನು ಗುರಿಯಾಗಿಸಿ ದಾಳಿ ಮಾಡಿ ಕೊಲೆ ಮಾಡಿದ ಕೃತ್ಯವು ಅತ್ಯಂತ ಅಪಾಯಕಾರಿ ಮತ್ತು ಮೂರ್ಖತನದ್ದು. ತನ್ನ ಪುಂಡಾಟಿಕೆಯ ದುಸ್ಸಾಹಸಗಳ ಪರಿಣಾಮಗಳನ್ನು ಅಮೆರಿಕವು ಅನುಭವಿಸಬೇಕಾಗುತ್ತದೆ' ಎಂದು ಇರಾನ್ ವಿದೇಶಾಂಗ ಸಚಿವ ಜಾವೇದ್ ಝಾರಿಫ್ ಪ್ರತಿಕ್ರಿಯಿಸಿದ್ದರು.

ಸೊಲೇಮನಿ ಅಂತ್ಯಸಂಸ್ಕಾರದ ಜನಸ್ತೋಮ

ಸೊಲೇಮನಿ ಅಂತ್ಯಸಂಸ್ಕಾರದ ಜನಸ್ತೋಮ

ತಂದೆ(ಸೊಲೇಮನಿ)ಯ ಅಂತ್ಯಸಂಸ್ಕಾರದ ವೇಳೆ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಸೋಲೆಮನಿ ಮಗಳು ಜೀನಬ್ ಸೋಲೆಮನಿ, ಅಮೆರಿಕ ಮತ್ತು ಇಸ್ರೇಲ್ ಕರಾಳ ದಿನವನ್ನು ಎದುರಿಸಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. 'ಹುಚ್ಚಾಟಿಕೆಯ ಟ್ರಂಪ್, ನನ್ನ ತಂದೆಯ ಬಲಿದಾನದಿಂದ ಎಲ್ಲವೂ ಮುಗಿಯಿತು ಎಂದುಕೊಳ್ಳಬೇಡಿ' ಎಂದು ಆಕೆ ಹೇಳಿದ್ದಾರೆ.

ಇರಾನ್ ಬೆಂಬಲಿತ ಸಶಸ್ತ್ರ ಪಡೆಯ ಮುಖ್ಯಸ್ಥ ಸೋಲೆಮನಿ

ಇರಾನ್ ಬೆಂಬಲಿತ ಸಶಸ್ತ್ರ ಪಡೆಯ ಮುಖ್ಯಸ್ಥ ಸೋಲೆಮನಿ

ಇರಾಕಿನ ಬಾಗ್ದಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದ್ದು, ಇರಾನ್ ಬೆಂಬಲಿತ ಸಶಸ್ತ್ರ ಪಡೆಯ ಮುಖ್ಯಸ್ಥ ಸೋಲೆಮನಿ ಸೇರಿದಂತೆ 8 ಮಂದಿ ಮೃತಪಟ್ಟಿದ್ದರು. ಪ್ರಭಾವಿ ವ್ಯಕ್ತಿಯೋರ್ವನನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಖಾಸಿಂ ಸೋಲೆಮನಿ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ. ಆದರೆ ಈ ಪ್ರಭಾವಿ ವ್ಯಕ್ತಿ ಯಾರೆಂಬುದು ತಿಳಿದಿಲ್ಲ. ಈ ಘಟನೆ ಇರಾನ್-ಅಮೆರಿಕ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಟ್ರಂಪ್ ಅವರು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ

ಟ್ರಂಪ್ ಅವರು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ

ಅಮೆರಿಕದ ವಿರುದ್ಧ ಸಂಚು ರೂಪಿಸುತ್ತಿರುವ ಇರಾನ್‌ಗೆ ಸರಣಿ ಟ್ವೀಟ್‌ಗಳ ಮೂಲಕ ಟ್ರಂಪ್ ಅವರು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ನಮ್ಮ ಮೇಲೆ ದಾಳಿ ನಡೆದರೆ ಇರಾನ್‌ನ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಹಾಗೂ ಪ್ರಮುಖ ಸ್ಥಳಗಳ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಲಾಗುವುದು. ಇರಾನ್ ಸೇರಿದಂತೆ 52 ಸ್ಥಳಗಳ ಮೇಲೆ ನಿಗಾ ಇಡಲಾಗಿದೆ. ಅಮೆರಿಕ ಇನ್ನಷ್ಟು ಬೆದರಿಕೆಯನ್ನು ಬಯಸುವುದಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ

ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ

ಇರಾನ್ ನಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಬಾಗ್ದಾದ್ ವಾಯುನೆಲೆಯಲ್ಲಿ ಅಮೆರಿಕ ಸೇನಾಪಡೆಗಳ ಹೆಲಿಕಾಪ್ಟರ್ ಗಳು ಯಾವುದೇ ಕ್ಷಣದಲ್ಲಿ ದಾಳಿಗೆ ಸಜ್ಜಾಗಿವೆ. ಈ ನಡುವೆ ಯುಎಸ್ ಫೆಡರಲ್ ಡೆಪೊಸಿಟರಿ ಲೈಬ್ರರಿ ಪ್ರೋಗ್ರಾಮ್ ವೆಬ್ ಸೈಟ್ ಹ್ಯಾಕ್ ಮಾಡಿರುವುದಾಗಿ ಇರಾನ್ ಹ್ಯಾಕರ್ಸ್ ಹೇಳಿದ್ದಾರೆ. ಬಾಗ್ದಾದ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಈ ಎಲ್ಲಾ ಉದ್ವಿಗ್ನ ಬೆಳವಣಿಗೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದೆ. ಇರಾನ್ ಹಾಗೂ ಯುಎಸ್ ನಡುವಿನ ವ್ಯಾಪಾರ, ವಹಿವಾಟು ತಿಕ್ಕಾಟ ಮುಂದುವರಿದಿದೆ. ಯುಎಸ್ ನಿಂದಾಗಿ ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಉಂಟಾಗುತ್ತಿದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

English summary
Iran has offered $80 million (over ₹576 crore) for US President Donald Trump's head over the killing of General Qassem Soleimani in a US air strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X